ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಮನೆಬಾಗಿಲ ಮೇಲೆ ಶ್ರೀನಿವಾಸ ಮೂರ್ತಿ) ಮಾಧವ ನಿಧಿಗಿರಿನಾಯಕ ಪದಕಮಲಾಶ್ರಿತ ಪರುಷಸುಖದಾಯಕ ಪ. ಬಲಿಯ ದೃಢಕೆ ಮೆಚ್ಚಿ ಬಾಗಿಲ ಕಾಯ್ದನಿ- ರ್ಮಲ ಕರುಣಾಮೃತ ವಾರಿಧೆ ಸುಲಭದಿ ಮುಂದಿನ ವಲಭಿತ್ಪದವನು ಸಲಿಸುತ ನೀನೀ ನಿಲಯದಿ ಸೇರಿದಿ 1 ಮಾಕಳತ್ರ ಮಮತಾನರಮೋಹ ನಿ- ರಾಕರಿಸಖಿಳ ಸುಖಾಕರನೆ ಸ್ವೀಕರಿಸೆನ್ನಯ ಸರ್ವ ಸಮರ್ಪಣ ಬೇಕು ಸರ್ವದಾ ತ್ವಜನ ತರ್ಪಣ 2 ಭೂರಮೇಶ ಗೃಹದ್ವಾರದಿ ನೀ ನೆಲೆ- ದೋರಲು ದುರಿತವು ಸೇರದಲೆ ದೂರೋಡುವದೆಂದರಿತು ನಂಬಿದೆನು ನೀರಜಾರಮಣ ಶೇಷ ಗಿರೀಶ 3
--------------
ತುಪಾಕಿ ವೆಂಕಟರಮಣಾಚಾರ್ಯ
ಭಂಡನಾದೆ ಸಂಸಾರಕೊಂಡದೊಳಗೆ ಬಿದ್ದು ಕಂಡುಕಾಣದಂತಿರುವರೇ ಪುಂಡರೀಕನಯನ ಪ ಅಶÀನ ವಸನಕ್ಕಾಗಿ ದೆಸೆಗೆಟ್ಟು ಬಾಯ್ಬಿಡುತ ಅಸುವ ಕರದೊಳ್ಪಿಡಿದು ವಸುಧೆಯ ಜನರ ಬಸವಳಿದು ಬೇಡಲು ಕಣ್ಣೆಸಿದು ಬೈಯಲು ತಲೆಬಾ ಗಿಸಿಕೊಂಡು ನಿಂದೆ ಹರಿ ಉಸುರಲಳವಲ್ಲ 1 ರೊಕ್ಕದ ಆಸೆಗಾಗಿಕ್ಕೆಲದ ಜನರನ್ನು ತರ್ಕಿಸದೆ ದೈನ್ಯದಿಂ ಚಿಕ್ಕಮಗ ನಾ ಎನುತ ಫಕ್ಕನೆ ಕೈತಾಳನಿಕ್ಕುವರು ನಗಲು ಮಹ ದು:ಖದಿಂ ತಿರುಗಿದೆನು ಬಿಕ್ಕಿಬಿಕ್ಕಳುತ 2 ಯರ ಮೋಹಿಸಿ ದಂಡಿಸಿದೆ ಮನೆಸತಿಯ ಕಂಡವರು ತಿದ್ದಿದರು ಚಂಡಿತನವಿಡದೆ ಕಂಡವರ ಅರ್ಥವನು ಮನೆಸೇರಿಸಿ ಬಂಡೆದ್ದು ಜನರೊಳಗೆ ಮಂಡೆಯೆತ್ತದೆಹೋದೆ 3 ತಪದಿಂದ ಹರಿಪಾದ ಜಪಿಸುವುದ ಮರೆದು ನಾ ಕೃಪಣತ್ವಜನಸೇವೆ ಅಪರೂಪಗೈದೆ ಚಪಲತ್ವತನದಿಂದ ಅಪಹರಿಸಿ ಪರರರ್ಥ ಸುಪಥಕ್ಕೆ ದೂರಾಗಿ ಅಪರಾಧಿಯಾದೆ4 ಕದ್ದು ತಿಂದೆ ನೆರಹೊರೆಯ ಬಿದ್ದೆ ದುರ್ಬವಣೆಯೊಳು ಬದ್ಧನಾಗಿ ಧರೆಮೇಲೆ ಹದ್ದಿನಂತೆ ಬಾಳ್ದೆ ತಿದ್ದಿ ನೀ ಎನ್ನ ತಪ್ಪುಬುದ್ಧಿಯನು ಕಲಿಸೆನ್ನೊ ಳಿದ್ದು ಪೊರೆ ದಯದಿಂದ ಮುದ್ದು ಶ್ರೀರಾಮ 5
--------------
ರಾಮದಾಸರು