ಒಟ್ಟು 2 ಕಡೆಗಳಲ್ಲಿ , 1 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶ್ರೀ ರಮಣ ಸರ್ವೇಶ ತ್ವಚ್ಚರ- ಣಾರವಿಂದವ ನಂಬಿರುವನಲಿ ಘೋರ ಭಾವವ ತಾಳ್ದ ಹೂಣನ ದೂರ ಓಡಿಸುವ ಭಾರ ನಿನ್ನದು ಪರಮ ಕರುಣಾ ವಾರುಧಿಯೆ ನೀನಲ್ಲದೆನಗೆ- ಸಾರಥಿ 1 ಸುಗುಣ ಸಜ್ಜನ ಶಿರೋಮಣಿ ಮಗುವು ಪ್ರಹ್ಲಾದನ ಪದಾಂಬುಜ ಯುಗವ ನೆನೆವುದನರಿತು ತತ್ಪಿತನೆಂದು ರೋಷದಲಿ ನೆಗೆದು ಬಂಡೆಯ ಝಳಪಿಸುತ ಬರೆ ಧಗಧಗಿಸಿ ಕಂಬದಲಿ ತೋರುತ ಬಗೆದಿ ದೈತ್ಯನ ಕರುಳ ಜಯ ಜಯ ವಿಜಯಸಾರಥಿ 2 ದೋಷಿ ದೈತ್ಯಾವೇಷದಿಂದಲಿ ವಾಸವಾದಿ ಸಮಸ್ತ ದಿವಿಜರ ಘಾಸಿಗೊಳಿಸಿದ ದಶಶಿರನ ತದ್ವಂಶಜರ ಸಹಿತ ನಾಶಗೈದು ನಿರಾಪರಾಧಿ ವಿ- ಭೀಷಣಗೆ ಸಾಮ್ರಾಜ್ಯವಿತ್ತ ಪ- ರೇಶ ಸೀತಾಕಾಂತ ಜಯ ಜಯ ವಿಜಯಸಾರಥಿ 3 ಪೂತನಾ ಬಕ ಶಕಟ ಧೇನುಕ ಪಾತಕಿ ಶಾರಿಷ್ಠ ಕೇಶಿಕಿ- ರಾತ ಕಂಸಾಂಬಷ್ಟ ಮುಷ್ಟಿಕ ಮಲ್ಲ ಚಾಣೂರ ಕಾತರದ ಶಿಶುಪಾಲ ಮುಖ್ಯರ ಘಾತಿಸಿದ ಗರುಡಧ್ವಜನೆ ಪುರು- ಹೂತ ಸುತನನು ಕಾಯ್ದೆ ಜಯ ಜಯ ವಿಜಯಸಾರಥಿ 4 ಅತ್ಯಧಿಕ ಕೋಪದಲಿ ಪ್ರಜ್ವಲಿ ಕಮಲ ಜೌಸ್ತ್ರವ ನುತ್ತರೆಯ ಗರ್ಭದಲಿ ಬಿಡದೆ ಸುತ್ತಿಕೊಂಡಿರಲು ಸತ್ಯಭಾಮಾಕಾಂತ ಕರುಣದಿ ತೆತ್ತಿಯನು ಕಾಪಾಡಿದಖಿಳೋ- ತ್ಪತ್ತಿರಕ್ಷಣಕಾರಿ ಜಯ ಜಯ ವಿಜಯಸಾರಥಿ 5 ಇರುವೆ ಮೊದಲು ಬ್ರಹ್ಮಾಂತರಾಗಿಹ ಸುರನರಾಸುರ ಮುಖ ಪ್ರಪಂಚ ದೊ- ಳಿರುವೆ ಸರ್ವೇಂದ್ರ್ರಿಯ ನಿಯಾಮಕ ಸರಿವ ಕೃತ್ಯವನು ಅರಿತು ಮಾಡಿಸಿ ನೋಡಿ ನಗುತಿಹ ಪರಮ ಮಂಗಳ ಚರಿತ ನೀ ಯನ- ಗಿರಲು ಭಯವ್ಯಾಕಿನ್ನು ಜಯ ಜಯ ವಿಜಯಸಾರಥಿ 6 ಆದರೀ ತೆರದಿಂದ ನಿನ್ನಯ ಪಾದ ಪಂಕಜಗಳನು ಪೊಗಳಿದ- ರಾದುದೊಂದಾಶ್ಚರ್ಯ ನೋಡಲಿ ಸುಜನರಾದವರು ಮೋದ ಭೋದಿ ದಯಾಬ್ಧಿ ವೆಂಕಟ ಭೂಧರೇಶನೆ ಸತತ ನಮ್ಮನು ಕಾದಿರುವೆ ಕಮಲೇಶ ಜಯ ಜಯ ವಿಜಯಸಾರಥಿ7
--------------
ತುಪಾಕಿ ವೆಂಕಟರಮಣಾಚಾರ್ಯ
ಸಿಟ್ಟು ಮಾಡುವುದೆಂದಿಗು ಸಲ್ಲ ಪೂರ್ಣ ಸಿರಿನಲ್ಲ ಪ. ಮೋಹ ಪಾಶ ಮಿಕ್ಕು ಬಿಗಿದಿಹುದು ರಿಪು ವ್ಯೂಹ ಸುತ್ತಮುತ್ತ ನೆಗದಿಹುದು ದೇಹದಿ ದಿನದಿನ ಬಲಕುಂದಿ ಬಂತು ಚಿ- ದ್ದೇಹ ನೀನೊಲಿವ ಸನ್ನಹಗೊಳ್ವದೆಂತೊ 1 ಒಂದು ಸತ್ಕರ್ಮ ಸಾಧಿಸುವಲ್ಲಿ ಬೇಗ ಪಾತಕ ಝಲ್ಲಿ ಮಂದರಧರ ಮಧುಸೂದನ ಮನದಿ ನೀ ನಿಂದು ಸಾರ್ಥಕ ಮಾಳ್ಪ ತೆರವೆಲ್ಲ ಬಲ್ಲಿ 2 ಹಿಂದೆ ಮುಂದಿನ ಸರ್ವ ಕರ್ಮಫಲ ಎನ್ನ ತಂದೆ ಸ್ವೀಕರಿಸಿ ಮಾಡಿಸು ನಿರ್ಮಲ ಇಂದಿರೇಶ ವೆಂಕಟೇಶನೆ ತ್ವಚ್ಚರ- ಣೆಂದೀವರ ನೆರಳಿರಿಸನುಗಾಲ 3
--------------
ತುಪಾಕಿ ವೆಂಕಟರಮಣಾಚಾರ್ಯ