ಒಟ್ಟು 6 ಕಡೆಗಳಲ್ಲಿ , 3 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಈತ ಶ್ರೀಗುರು ಪರಬ್ರಹ್ಮನೆನ್ನಿ ಅತೀತವಾದ ಗುಣತ್ರಯ ಪರಮಾತ್ಮನೆನ್ನಿ ಧ್ರುವ ನಿರ್ಗುಣಾಂದನೆನ್ನಿ ನಿಗಮಗೋಚರನೆನ್ನಿ ಅಗಣಿತಗುಣ ಪರಿಪೂರ್ಣನೆನ್ನಿ 1 ಯೋಗಾನಂದಾತ್ಮನೆನ್ನಿ ಯೋಗಿವಂದಿತನೆನ್ನಿ ಯೋಗಿಹೃದಯವಾಸ ಯೋಗನಿಧಾನನೆನ್ನಿ 2 ಸಾಧುಸಹಕಾರನೆನ್ನಿ ಸದಾನಂದಾತ್ಮನೆನ್ನಿ ಸದ್ಬ್ರಹ್ಮಾನಂದ ಸದೋದಿತನೆನ್ನಿ 3 ಙÁ್ಞನಸಾಗರನೆನ್ನಿ ಙÁ್ಞನಾನಂದಾತ್ಮನೆನ್ನಿ ಙÁ್ಞನಿಗಳೊಂದಿಹ ಸುಙÁ್ಞನಸ್ವರೂಪನೆನ್ನಿ 4 ಪರಮಪುರಷನೆನ್ನಿ ಪರಮಪ್ರಕಾಶನೆನ್ನಿ ಪರಮಾನಂದಸ್ವರೂಪ ಪರಾತ್ಪರ ಪೂರ್ಣನೆನ್ನಿ 5 ಇಹಪರನೀತನೆನ್ನಿ ಗುಹ್ಯಗುಪಿತನೆನ್ನಿ ಬಾಹ್ಯಾಂತ್ರಪರಿಪೂರ್ಣ ತ್ರೈಲೋಕ್ಯನಾಥನೆನ್ನಿ 6 ಕಾವಕರುಣನೆನ್ನಿ ಭವಭಂಜನನೆನ್ನಿ ಜೀವಸಂಜೀವ ಮಹಿಪತಿ ಗುರುಮೂರ್ತಿಯೆನ್ನಿ 7
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಈತನೀಗ ಕೃಷ್ಣನಾಥನು ಶ್ರೀನಾಥನು ಶ್ರೀನಾಥನಮ್ಮಾ ಧ್ರುವ ನಂದಕುಮಾರನೀತ ನಂದಮಹಿಮನೀತ ಕಂದರ್ಪಜನಕನೀತ ಸುಂದರವದನನೀತ 1 ಇಂದಿರೇಶನು ಈತ ವಂದಿತ ತ್ರೈಲೋಕ್ಯನಾಥ ಚಂದವಾಗಿ ಸುಳಿದ ಬಾಲ ಮುಕುಂದನೀತ 2 ಗಿರಿಯ ಬೆರಳಲೆತ್ತಿದಾತ ಕರಿಯ ಸೆರೆಯ ಬಿಡಿಸಿದಾತ ಮೊರೆಯ ಕೇಳಿ ದ್ರೌಪದಿಯ ಕರುಣಿಸಿದಾತ 3 ಅಸುವ ಪೂತನಿ ಹೀರಿದಾತ ಕಂಸನ ಮಡುಹಿದಾತ ವಂಶ ಕೌರವರ ತಾನು ಸಂಹರಿಸಿದಾತ 4 ಬಾಲಕನಹುದೀತ ಮೂಲೋಕ ಪಾಲಕ ನೀತ ಸಲಹುತಿಹ ಮಹಿಪತಿ ಮೂಲಾಗ್ರಜನೀತ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಕಂಡೆ ಕಂಗಳಲೆನ್ನ ಮಂಗಳಾತ್ಮನ ಕಂಡೆ ಕಂಡೆ ಮಂಗಳಾಂಗ ಶ್ರೀ ಗುರುರಂಗನ ಕಂಡೆ ಧ್ರುವ ಬಾಲ ಲೀಲೆ ತೋರಿದ ನೀಲವರ್ಣನ ಕಂಡೆ ಪಾಲಗಡಲಲಿಹ್ಯ ಗೋಪಾಲನ ಕಂಡೆ ಮೂಲರೂಪದಲಿ ಫಲ್ಗುಣಗೊಲಿದನ ಕಂಡೆ ಕುಲಕೋಟಿ ಬಂಧುವಾದ ಬಳಗನ ಕಂಡೆ 1 ಮೂರ್ತಿ ನಳಿನನಾಭವ ಕಂಡೆ ಪಾದ ಹೊಳೆವನ ಕಂಡೆ ಕಳ್ಳ ಮೊಸರ ಬೆಣ್ಣೆ ಮೆಲುವ ಚೆಲುವನ ಕಂಡೆ ಇಳೆಯೊಳು ಗೋಕುಲದಿ ಸುಳಿದನ ಕಂಡೆ 2 ಕಿರೀಟ ಕುಂಡಲಕರ್ಣ ಕೌಸ್ತುಭಧರನ ಕಂಡೆ ಪರಿಪರಿ ಭೂಷಣ ಸರ್ವಾಂಗನ ಕಂಡೆ ವಾಹನ ಸ್ವಾಮಿ ಉರಗಶಯನ ಕಂಡೆ ಸಿರಿಯ ಲೋಲಲಿಹ ಸರ್ವೋತ್ತಮನ ಕಂಡೆ 3 ಮದನ ಮೋಹನನ ಕಂಡೆ ಆದಿ ಅವಿನಾಶ ಶ್ರೀಧರನ ಕಂಡೆ ಯದುಕುಲೋತ್ತಮ ಮಧುಸೂದನನ ಕಂಡೆ ಸಾಧು ಹೃದಯ ಪ್ರಾಣ ಶ್ರೀಮಾಧವನ ಕಂಡೆ 4 ತುರುಗಳ ಕಾಯ್ದ ಶ್ರೀಹರಿ ಗಿರಿಧರನ ಕಂಡೆ ಮುರಹರನೆನಿಸಿದ ಸುರಾಧೀಶನ ಕಂಡೆ ಕರಿಯ ವರದಾಯಕ ಹರಿ ದಯಾಳುನ ಕಂಡೆ ನರಹರಿ ಶ್ರೀನಾರಾಯಣನ ಕಂಡೆ 5 ದುಷ್ಟಮರ್ದನ ದೂರ ವಿಷ್ಣುದೇವನ ಕಂಡೆ ಶಿಷ್ಟ ಜನ ಪಾಲಕ ಸೃಷ್ಟೀಶನ ಕಂಡೆ ದೃಷ್ಟಿಯೊಳು ಸುಳಿದು ದೃಷ್ಟಾಂತಾದವನ ಕಂಡೆ ಕಷ್ಟ ಪರಿಹರಿವ ಶ್ರೀಕೃಷ್ಣನ ಕಂಡೆ 6 ಗುರು ಶಿರೋಮಣಿ ತ್ರೈಲೋಕ್ಯನಾಥನ ಕಂಡೆ ಪರಮಭಕ್ತರ ಸಂಜೀವನ ಕಂಡೆ ಶರಣ ರಕ್ಷಕ ನಮ್ಮ ಕರುಣ ಸಿಂಧುನ ಕಂಡೆ ತರಳ ಮಹಿಪತಿ ಪ್ರಾಣಹೊರೆವ ಕಂಡೆ 7
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಬ್ರಹ್ಮ ಸುಖದಲಿ ನಲಿದಾಡುವೆ ಧ್ರುವ ನಮೋ ಶ್ರೀ ಗಣನಾಯಕನಿಗೆ ನಮೋ ನಮೋ ಶ್ರೀ ಸರಸ್ವತಿಗೆ ನಮೋ ನಮೋ 1 ಸದ್ಗುರುವಿಗೆ ನಮೋ ಶ್ರೀ ಸ್ವಾಮಿಗೆ ನಮೋ ನಮೋ 2 ಇಷ್ಟದೈವಕೆ ನಮೋ ಮಹಿಮಗೆ ನಮೋ ನಮೋ 3 ಸೂತ್ರಾಂತ್ರಿಗೆ ನಮೋ ಸುಪಥಕೆ ನಮೋ ನಮೋ 4 ಸುಸರ್ವ ದೈವಕೆ ನಮೋ ರೂಪಕೆ ನಮೋ ನಮೋ 5 ಶಕ್ತಿಗೆ ನಮೋ ಮುನಿಗಳಿಗೆ ನಮೋ ನಮೋ 6 ಸುಭಾಗವತರಿಗೆ ನಮೋ ನಮೋ ನಮೋ 7 ಸುಮಹಿಮರಿಗೆ ನಮೋ ಸುತೀರ್ಥಕ್ಷೇತ್ರಕ್ಕೆ ನಮೋ ನಮೋ 8 ಸುಪುಣ್ಯಶ್ಲೋಕರಿಗೆ ನಮೋ ಸಜ್ಜನರಿಗೆ ನಮೋ ನಮೋ 9 ತ್ರೈಲೋಕ್ಯನಾಥಗೆ ನಮೋ ಸರ್ವೋತ್ಮಗೆ ನಮೋ ನಮೋ 10 ಸುಕರುಣಿಗೆ ನಮೋ ಭಕ್ತವತ್ಸಲಗೆ ನಮೋ 11
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ರಕ್ಷಿಸೆ ಏಕನಾಥೆ ತಾಯೆ ದಯದಿಂದ ಎನ್ನನು ಸೊಕ್ಕಿದ ದೈತ್ಯ ಸಂಹಾರೆ ಶರಣ ಜನೋದ್ಧಾರೆ ಪ. ದುರಿತ ದುಃಖ ನಿವಾರಿ ಶರಣರ ಸಲಹುವ ದಾತೆ ಖಳರೆದೆಗಂತೆ ನಿಡಿ ಗುರುಳ ಬಾಲೆ ಪಲ್ಲವಪಾಣಿ ಸುರರ ನಾಯಕಿ ಅಖಿಲದೇವಮಾತೆ ವಿಖ್ಯಾತೆ 1 ಅಳುವಾಡುವ ರಂಗನ ಅದೇನರಿತು ಭಂಗ ಬಾಳ ಬಡಿಸಿದೆಯವ್ವ ಭಕ್ತರುದ್ಧಾರಿ ಕಾಳಗದೊಳು ಕಂಠೀರವೆ ಕರೆದಭಯವನೀವೆ ಸುಕೃತ ಪಂಥಗಾರ್ತಿ 2 ಹಿಂಡು ಭೂತಂಗಳಿಗೆಲ್ಲ ಹೆಚ್ಚಿನ ಬಿರುದನೆ ತಾಳ್ದೆ ಚಂಡಿ ಚಾಮುಂಡಿ ತ್ರೈಲೋಕ್ಯನಾಥೇ ಕಂಡು ನಮಿಸುವರ ಕಾಯ್ವೆ ಕಾಮಿತದಾತೆ 3 ಇಂದ್ರಾದಿ ದಿಕ್ಪಾಲಕರು ವಂದಿಸಿ ಸ್ತುತಿಮಾಡಲವರ ಬಂಧನವ ಪರಿಹರಿಸಿದೆಯೆ ಚಂದ್ರಮುಖಿಯೆ ಇಂದು ಬಂದ ಬಂಧನವ ಬಿಡಿಸಿ ಎಂದೂ ಎನ್ನ ನೀ ಕಾಯೆ ತಾಯೆ 4 ಮಲೆತ ಮಹಿಷಾಸುರನ ಕೊಂದೆ ಮಲೆಬೆನ್ನೂರಿನಲಿ ನಿಂದೆ ಬಲುನೇಮವಂತೆ ಸಂತೆಹರವಿಲೆ ನಿಂತೆ ಪುಲ್ಲಲೋಚನೆ ಪ್ರಖ್ಯಾತೆ ಪರಶುರಾಮನ ಮಾತೆ ಹೆಳವನಕಟ್ಟೆ ರಂಗನ ಸಹೋದರಿ5
--------------
ಹೆಳವನಕಟ್ಟೆ ಗಿರಿಯಮ್ಮ
ಆಚ್ಯುತಾನಂತ ಗೋವಿಂದ-ಹರಿ |ನಾರಾಯಣ ನಿನ್ನ ನಾಮ-ಎನ್ನ |ಮಾಧವಮಂಗಳಗಾತ್ರ-ಸ್ವಾಮಿ |ಗೋವಿಂದ ಗೋಪಾಲ ಬಾಲ-ಸೋಳ |ವಿಷ್ಣುಚಕ್ರವು ಬಂದು ಸುತ್ತಿ-ಮೂರು |ಮಧುಸೂದನ ಮಾರಜನಕ-ನೀನು |ತ್ರಿವಿಕ್ರಮ ತ್ರೈಲೋಕ್ಯನಾಥ-ದೇವ |ವಾಮನರೂಪದಿ ಬಂದು-ಬಲಿಯ |ಶ್ರೀಧರ ಶೃಂಗಾರಾಧಾರ-ದಿವ್ಯ |ಹೃಷೀಕೇಶ ವೃಂದಾವನದಲಿ-ನೀ |ಪದ್ಮನಾಭನೆ ಕೇಳೊ ಮುನ್ನ-ಎನ್ನ |ದಾಮೋದರ ದನುಜಹರಣ-ಹರಿ |ಸಂಕರ್ಷಣ ಸರುವಾಭರಣ-ಇಟ್ಟು |ವಾಸದೇವ ಕೇಳೊ ನಿನ್ನ-ದಿವ್ಯ |ಪ್ರದ್ಯುಮ್ನ ನೀನೆಂದು ಕರೆಯೆ-ದುರ್ |ಅನಿರುದ್ದ ಗೋಕುಲದಲ್ಲಿ-ನೀಪುರುಷೋತ್ತಮಗಾರು ಸಾಟಿ?-ಶ್ರೀ |ಅಧೋಕ್ಷಜಅಸುರಸಂಹಾರಿ-ದೇವ |ನರಸಿಂಹರೂಪವ ತಾಳಿ-ಬಂದೆ |ಅಚ್ಯತ ನೀನಲೆ ಮುದ್ದು-ಗೋಪಿ |ಜನಾರ್ಧನ ಕೇಳೊ ಬನ್ನಪವ-ನೀ |ತೊಲಗಿಸು ಬಂದೆನ್ನ ಮನದ ಕಲುಷವ ||ಉಪೇಂದ್ರನುರಗನ ತುಳಿಯೆ-ಆಗ |ಹರಹರಿ ಎಂದರೆ ಪಾಪ-ರಾಶಿ |ಕೃಷ್ಣ ಕೃಷ್ಣನೆಂಬ ಸೊಲ್ಲ-ಕೇಳಿ |
--------------
ಪುರಂದರದಾಸರು