ಒಟ್ಟು 2 ಕಡೆಗಳಲ್ಲಿ , 1 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಜಯ ಸದ್ಗುರು ಮೂತಿ ದಯವುಳ್ಳ ನಿಮ್ಮ ದಯ ಕೀರ್ತಿ ಧ್ರುವ ದಯಗುಣದಲಿ ಬಲು ಉದಾರ ತ್ರೈಲೋಕ್ಯಕೆ ನೀನೆ ಆಧಾರ ಜಯ ಸದ್ಗುರು ಮಾಮನೋಹರ ಇಹಪರ ಸಹಕಾರ 1 ಮುನಿಜನರಿಗೆ ನೀ ಪ್ರತಿಪಾಲ ಸ್ವಾನುಭವದ ಸುಖದ ಕಲ್ಲೋಳ ಘನಗುರು ನೀನೆ ಕೃಪಾಲ ದೀನದಯಾಳ 2 ಜೀವದ ಸುಪ್ರಾಣ ಪರಮಾಮೃತದ ನಿಧಾನ ಹೊರಿಯೊ ನೀ ಕರುಣ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಶುದ್ಧ ಸನ್ಮಾರ್ಗ ಸರ್ವರಿಗಿದು ಒಂದೆ ಬುದ್ಧಿವಂತರು ತಿಳಿದರು ಇದರಿಂದೆ 1 ಇದರಿಂದೇವೆಂಬುದು ನಿರ್ವಾಣ ಒದರುತಲಿಹುದು ವೇದಪುರಾಣ 2 ಪುರಾಣ ಪುಣ್ಯದ ಹಾದಿಯು ನಿಜ ಸುರಮುನಿಗಳಿಗಿದು ಹೊಳೆವದು ಸಹಜ 3 ಸಹಜಾನಂದದ ಸುಖಸಾಗರ ಬಾಹ್ಯಾಂತ್ರ ಸದೋತಿತ ಸಹಕಾರ 4 ಸಹಕಾರವು ಚಿನ್ಮಯ ಚಿದ್ರೂಪ ಸೋಹ್ಯದೋರುವ ಶ್ರೀ ಗುರುಸ್ವರೂಪ 5 ಸ್ವರೂಪವೆ ಸದ್ಗೈಸುವ ಹಾದಿ ಪರಮ ವೈಷ್ಣವರ ಮೂಲಾಗ್ರದ ಆದಿ 6 ಅಧಿವೆಂಬುದು ನಿಜನಿರ್ಧಾರ ಸಾಧಿಸುದವರಿಗೆ ಸಾಕ್ಷಾತಾರ 7 ಸಾಕ್ಷಾತ್ಕಾರವೆ ಮೋಕ್ಷದಮನೆಯು ಅಕ್ಷಯ ಪದ ಅದ್ವೈತದ ಖಣಿಯ 8 ಅದ್ವೈತವೆ ಆಧ್ಮಾತ್ಮ ಸುವಿದ್ಯ ಸಿದ್ದಸಾಧಕರಿಗೆ ಆಗುವ ಸಾಧ್ಯ 9 ಸಾಧ್ಯವೆಂಬುದು ನಿಜಸಿದ್ಧಾಂತ ಭೇದಿಸಿದವರಿಗೆ ಇದು ಸನ್ಮತ 10 ಸನ್ಮತವೆ ಮತ ಸರ್ವರಿಗೆಲ್ಲ ಉನ್ಮನಲೀಹ ಮಹಾಯೋಗಿಯು ಬಲ್ಲ 11 ಬಲ್ಲೆವೆಂಬುದು ಬಲು ಅಗಾಧ ಸೊಲ್ಲಿಗೆ ಸಿಲುಕದು ಗುರುನಿಜಭೋದ 12 ಬೋಧವೆ ಸದ್ಗುರುವಿನ ದಯಕರುಣ ಸದ್ಗತಿಸುಖ ಸಾಧನದ ಸ್ಫುರಣ 13 ಸ್ಫುರಣವೆ ಬ್ರಹ್ಮಾನಂದದ ಹರುಷ ತರಣೋಪಾಯದ ಮಹಾ ಉಪದೇಶ 14 ಉಪದೇಶವೆ ನಿಜ ಉಪನಿಷದ್ವಾಕ್ಯ ಒಪ್ಪಿಡುವದು ಭೂಸ್ವರ್ಗತ್ರೈಲೋಕ್ಯ 15 ತ್ರೈಲೋಕ್ಯಕೆ ಇದು ನಿಜನಿಧಾನ ಭಯವಿಲ್ಲದ ಮಹಾಸುಖಸಾಧನ 16 ಸಾಧನದಿಂದ ಸದ್ಗತಿ ಸಂಪೂರ್ಣ ಸಾಧು ಸಜ್ಜನರಿಗೆ ಸಕಲಾಭರಣ 17 ಸಕಲಾಭರಣ ಸದ್ಗುರು ನಿಜ ಅಭಯವು ಶುಕಾದಿ ಮುನಿಗು ಕೂಡಿದ ಪ್ರಭೆಯು 18 ಪ್ರಭೆಗಾಣಲು ತೋರದು ನೆಲೆನಿಭವು ನಿಭವೆ ಮಹಾಮಂಗಳಕರ ಶುಭವು 19 ಶುಭದೋರುದು ಸದ್ಗುರು ಕೃಪೆಯಿಂದ ಭ್ರಮೆಹಾರಿತು ಮಾಯೆ ಇದರಿಂದ 20 ಇದರಿಂದೆ ಇದರಿಟ್ಟಿತು ಪುಣ್ಯ ಒದಗಿ ಕೈಗೂಡಿತು ಬಂತು ತಾರ್ಕಣ್ಯ 21 ತಾರ್ಕಣ್ಯವು ಬಂತೆನ್ನೊಳು ಪೂರ್ಣ ಸರ್ಕನೆ ದೊರೆಯಿತು ಸದ್ಗುರುಖೂನ 22 ಖೂನವೆ ಎನ್ನೊಳಗಾಯಿತು ಧ್ಯಾನ ಘನಸುಖದೋರುವ ಅನುಸಂಧಾನ 23 ಅನುಕೂಲಾದ ನಮ್ಮಯ್ಯ ಪ್ರಸಿದ್ಧ 24 ಪ್ರಸಿದ್ಧವೆ ಪ್ರತ್ಯಕ್ಷ ಪ್ರಮಾಣ ಭಾಸುತಿಹುದು ಶ್ರೀಗುರು ಶ್ರೀಚರಣ 25 ಶ್ರೀಚರಣಕೆ ಎರಗಿಹ ಮಹಿಪತಿಯು ಸೂಚನೆ ಮಾತ್ರ ಕೊಂಡಾಡಿದ ಸ್ತುತಿಯು 26
--------------
ಕಾಖಂಡಕಿ ಶ್ರೀ ಮಹಿಪತಿರಾಯರು