ಭಾರತೀಶನ ಸೇರಿರೋ ಭವವಾರಿಧಿ ದಾಟುವರೆ
ಸಾರ ತೋರುವ ಪ.
ತುಂಗ ವಿಷಯಾಂಗಜನಿತೋತ್ತುಂಗ ತರಂಗದೊಳು
ಅಂಗಜಾತ ತಿಮಿಂಗಿಲನು ತಾನುಂಗುವ ನಿಮಿಷದೊಳು
ಮಂಗಳಾತ್ಮಕ ಮಾರುತನ ಸದಪಾಂಗಲೇಶವನೈದೆ ಸುಲಭದಿ
ರಂಗನಿರವನು ತೋರಿ ಸಲಹುವ 1
ತ್ರೇತೆಯೊಳಗಿನ ಜಾತನಿಗೆ ರಘುನಾಥನ ತೋರಿಸಿದ
ಕಾತುರದ ಪುರಹೂತನನು ಯದುನಾಥನಿಗೊಪ್ಪಿಸಿದಾ
ಭೂತನಾಥನ ವಾಕ್ಯಬಲದಿಂದಾತ್ಮ ಜೀರಿಗೈಕ್ಯಪೇಳುವ
ಪಾತಕಿಗಳನು ಗೆದ್ದು ತ್ರಿಜಗನ್ನಾಥ ಮುತ್ತಿದನೆಂದು ಮೆರಸಿದಿ 2
ಸೂತ್ರನಾಮಕ ಪ್ರಣವನಾಯಕ ಕ್ಷತ್ರಪುರದೊಳಿರುವಾ
ಶತ್ರುತಾಪನ ಶೇಷಗಿರಿ ಪತಿಪುತ್ರನೆನಿಸಿ ಮೆರೆವಾ
ಚಿತ್ರಕರ್ಮ ಚಿರಂತನಾಣುಗ ಪುತ್ರಮಿತ್ರಕಳತ್ರ ಭಾಗ್ಯದ
ನೇತ್ರ ವಿಷಯ ಪರತ್ರ ರಕ್ಷಕ ಧಾತ್ರಪದಸತ್ಪಾತ್ರನೆನಿಸುವ 3