ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮಧ್ವ ಸರೋವರದ ಸ್ನಾನವ ಮಾಡಿರೊ ಬುದ್ಧಿವಂತರು ಕೇಳಿ ಇದರ ಮಹಾತ್ಮೆಯನು ಪ ತ್ರೇತಾಯುಗದಲ್ಲಿ ವರುಣತೀರ್ಥ ಕ್ಷಿತಿಯೊಳಗೆ ದ್ವಾಪರದಿ ಚಂದ್ರ ಪುಷ್ಕರಣಿ ಉ- ನ್ನತ ಕಲಿಯುಗದಲ್ಲಿ ಮಹಾ ತೀರಿಥ 1 ಸುರನದೀ ಮಿಕ್ಕಾದ ಸ್ಥಾನದಲಿ ಸೇವೆ ವಿ- ಸ್ತರವಾಗಿ ಕೊಳುತಿಪ್ಪಳು ಉಪೇಕ್ಷದಿ ಧರೆಯೊಳಗೆ ಇಲ್ಲಿ ಗುರು ಮಧ್ವಮುನಿ ಸರ್ವಾರ್ಥ ನಿರುತದಲ್ಲಿ ತೀವ್ರಗತಿ ಕೊಡುವಳೂ2 ಸಕಲ ವೇದಶಾಸ್ತ್ರ ಓದಿದವನಾದರೂ ಶಕುತಿವಂತನಾಗಿ ಇದ್ದನಾಗೆ ಸುಖ ತೀರ್ಥ ಸರೋವರದ ಸ್ನಾನ ಮಾಡದಿರಲು ಶಕಲ ಮತಿಯಲಿ ಮಹಾನರಕ ಭುಂಜಿಸುವಾ 3 ಮಜ್ಜನ ತಂದು ಕೊಡುವದು ನರಗೆ ಮಿಂದ ಫಲವೊ ಎಂದೆಂದಿಗೆ ಇಲ್ಲಿ ಬಿಡದೆ ವಾಸವಾದ ಮಂದಿಗಳ ಪುಣ್ಯ ಪ್ರತಾಪ ಎಣಿಸುವರಾರು 4 ಛೇದಿಸುವದಕೆ ಇದೇ ಸ್ನಾನವೆನ್ನಿ ಮೋದ ಮೂರುತಿ ನಮ್ಮ ವಿಜಯವಿಠ್ಠಲ ಕೃಷ್ಣ ಭೇದಾರ್ಥ ಮತಿಕೊಟ್ಟ ಭೇದವನು ತೊಲಗಿಸುವಾ5
--------------
ವಿಜಯದಾಸ
ಮನದಣಿ ನೋಡಿದೆನೊ ಸನಕಾದಿನಮಿತ ಮನದಣಿ ನೋಡಿದೆನು ದೃಢದಿ ಪ ನಿನಗೆ ಸರಿಯಿಲ್ಲ ಭುವನತ್ರಯದಿ ಮನಕೆ ಬೇಸರವಿಲ್ಲದನುದಿನ ತನುವನಪ್ಪಿಹಿಡಿದು ಭಕುತರ ಮನದ ವರಗಳನಡೆಸಿ ಸಲಹುವ ಕನಿಕರಾರ್ಣವ ವಿಠಲ ನಿನ್ನಡಿ ಅ.ಪ ಒಂದು ದಿನ ಆ ತ್ರೇತಾಯುಗದಲ್ಲಿ ಋಷಿಗಡಣ ಕೂಡಿ ಬಂದು ನಿಮ್ಮಯ ಚರಣಸನ್ನಿಧಿಲಿ ಭಯಭಕುತಿಯಿಂದ ವಂದಿಸಾಲಿಂಗನೆಯ ಕೋರುತಲಿ ಅಭಯ ಬೇಡುತಲಿ ನಿಂದ ಋಷಿಗಳಿಗ್ಹಲವು ಪರಿಯಲಿ ತಂದೆ ನೀ ಸಮ್ಮತವ ಪೇಳಿ ಬಂದು ದ್ವಾಪರಾಂತ್ಯಯುಗದಲಿ ಒಂದು ಅರಲವ ಅಗಲದಲೆ ನಿಮ್ಮ ಪೊಂದಿ ಆಲಿಂಗನವನೀಯುವೆ ನೆಂದು ವರವಿತ್ತ ವಿಠಲ ನಿಮ್ಮಡಿ 1 ಅಪಾರಮಹಿಮಜಾಲ ಅವತರಿತಿಸಿದಿ ದ್ವಾಪರಯುಗದಿ ಬಾಲಕೃಷ್ಣ ನೀನಾಗಿ ಶ್ರೀಪತಿ ಸುಜನಪಾಲ ದನುಜಕುಲಕಾಲ ಪಾಪಸಂಹಿತ ಅಮಿತಲೀಲ ಶಾಪಪರಿಹಾರ ವೇಣುಲೋಲ ತಾಪಸೋತ್ತಮರಿಷ್ಟ ನೀಡಲು ಗೋಪಿಕಾಸ್ತ್ರೀಯರೆನಿಸಿ ಪುಟ್ಟಿಸಿ ಗೌಪ್ಯದಾಲಿಂಗನವನಿತ್ತ ಭೂಪ ಭೂಪತಿ ವಿಠಲ ನಿಮ್ಮಡಿ 2 ಸುಗುಣ ಸಂತರಹೃದಯಸಂಚಾರ ದಾಸಾನುದಾಸರು ಪೊಗಳಿ ಭಜಿಸುವ ಗಾನಪ್ರಿಯಕರ ಮೌಲಕೌಸ್ತುಭ ಜಗದಜೀವನ ಪಾವನಾಕಾರ ಪರಮಸುಖಕರ ಅಗಣಿತಾಗಣಿತಮಹಿಮಭರಿತ ಪೊಗಳಲಳವೆ ನಿಮ್ಮ ಚರಿತ ತ್ರಿ ಜಗನಾಟಕ ಸುಲಭದಲಿ ನೀ ಅಗಲದನವರತಸಮ ಈ ಕಲಿ ಯುಗದಿ ಭಕ್ತರಿಗಾಲಿಂಗನೀಯುವ ನಿಗಮಗೋಚರ ವಿಠಲ ನಿನ್ನಡಿ 3 ಮಂದಹಾಸ ಮಂದರೋದ್ಧಾರ ಸುರಕಲ್ಪಧೇನು ಇಂದಿರೆಯರ ಪ್ರಾಣ ಮನೋಹರ ಹೇ ದೀನಬಂಧು ಸುಂದರಾಂಗ ಸುಗುಣಗುಣಹಾರ ಬಂಧನಿವಾರ ಸಿಂಧುಕಲಕಿದಪಾರ ಶೂರ ಕುಂದದೆ ಮೊರೆಕಾಯ್ದ ಸುರರ ಹೊಂದಿಭಜಿಸುವ ಭಕುತಜನಕಾ ನಂದ ನೀಡುತ ಚಂದನೋಡುತ ಸಿಂಧುನಿಲಯ ಮುಕ್ಕುಂದ ಮುರಹರಿ ಅಂದಮಾದ ವಿಠಲ ನಿಮ್ಮಡಿ 4 ಸುತ್ತಮುತ್ತ ಭಕ್ತರಾಲಯವು ಹಿಂಭಾಗದಲ್ಲಿ ಸತ್ಯಭಾಮ ರುಕ್ಮಿಣೀಕಾಂತನು ಮುಂಭಾಗದಲಿ ನಿತ್ಯನಿರ್ಮಲ ಚಂದ್ರಭಾಗಿನಿಯು ನಡುಮಧ್ಯ ರಂಗವು ಭಕ್ತಗೊಲಿದು ಭೂವೈಕುಂಠವ ಸತ್ಯವೆನಿಸಿ ಮೀರಿ ಮೆರೆವ ಭಕ್ತಜನರ ಕೈಯೆತ್ತಿ ಸಾರುವ ಪೃಥ್ವಿಗಧಿಕ ಮಹ ಪಂಢರಾಪುರ ಮುಕ್ತಿ ತವರೆಂಬ ಮಂದಿರದಲ್ಲಿ ಕರ್ತುಶ್ರೀರಾಮ ವಿಠಲ ನಿನ್ನಡಿ5
--------------
ರಾಮದಾಸರು
ಮೇಲುಕೋಟೆ ಯದುಗಿರಿವಾಸ ನಾರಾಯಣ ಯದುಗಿರಿವಾಸ ಪ ಯದುಗಿರಿವಾಸನೆ ಬುಧಜನಪೋಷನೆ ಮದಮುಖಶಿಕ್ಷನೆ ಪದುಮದಳಾಕ್ಷನೆ ಅ.ಪ ವೇದವ ತಂದು ಅಜನಿಗಿತ್ತು ಭಾರವ ಪೊತ್ತು ಕೃತಯುಗದೊಳಗೆ ವೇದಾದ್ರಿಯೆಂದೆನಿಸಿದೆ ಚತುರ್ಮುಖನಲಿ ಪೂಜೆ ಗ್ರಹಿಸಿದ ನಾರಾಯಣ 1 ನಿಗಮವ ತಂದು ಮನುವಿಗಿತ್ತು ಕಂಬದಿಂ ಬಂದು ತ್ರೇತಾಯುಗದಲ್ಲಿ ನಾರಾಯಣಗಿರಿಯೆನಿಸಿದೆ ಸನಕಾದಿಗಳ ಪೂಜೆ ಗ್ರಹಿಸಿದ ನಾರಾಯಣ 2 ದಾನವ ಬೇಡಿ ಕ್ಷತ್ರಿಯರ ಕುಲವನೀಡಾಡಿ ದ್ವಾಪರಯುಗದಲ್ಲಿ ಯದುಗಿರಿಯೆನಿಸಿದೆ ರಾಮ ಕೃಷ್ಣರ ಪೂಜೆ ಗ್ರಹಿಸಿದ ನಾರಾಯಣ 3 ಜಾನಕಿಯ ತಂದು ಅತಿದುರುಳ ಕಂಸನ ಕೊಂದು ಕಲಿಯುಗದೊಳಗೆ ಶ್ರೀ ಯತಿಶೈಲವೆನಿಸಿದೆ ಯತಿರಾಜರಿಗೆ ಒಲಿದ ಪತಿತಪಾವನ ಸ್ವಾಮಿ 4 ಹಯವನುಹತ್ತಿ ನಾರಯಣ ದುಷ್ಟಕಲಿಯ ನೀನೊತ್ತಿ ಸಪ್ತದ್ವೀಪವನೆಲ್ಲ ಸುತ್ತಿ ಬಂದೆಯೊ ಎನ್ನಪ್ಪ ನಿನ್ನೆಣೆಕಾಣೆ ಕಂದರ್ಪನಪಿತ ಚೆಲ್ವಯದುಗಿರಿವಾಸ 5
--------------
ಯದುಗಿರಿಯಮ್ಮ
ಹನುಮ ನಮ್ಮ ತಾಯಿತಂದೆ-ಭೀಮನಮ್ಮ ಬಂಧು ಬಳಗ |ಆನಂದ ತೀರ್ಥರೆಮಗೆ ಗತಿಗೋತ್ರವಯ್ಯ ಪತಾಯಿ ತಂದೆ ಹಸುಳೆಗಾಗಿ ಸಾಯ ಮಾಡಿ ಸಾಕುವಂತೆಆಯಾಸವಿಲ್ಲದೆ ಸಂಜೀವನ ತಂದೆ ||ಗಾಯಗೊಂಡ ಕಪಿಗಳನ್ನು ಸಾಯದಂತೆ ಪೊರೆದೆ ರಘುರಾಯನಂಘ್ರಿಗಳೆ ಸಾಕ್ಷಿ ತ್ರೇತಾಯುಗದಲ್ಲಿ 1ಬಂಧು ಬಳಗದಂತೆ ಆಪ್ಪದ್ಬಂಧುವಾಗಿ ಪಾರ್ಥನಿಗೆಬಂದ ದುರಿತಂಗಳ ಪರಿಹರಿಸಿ ||ಅಂಧಕಜಾತಕ ಕೊಂದು ನಂದನಂದನಿಗರ್ಪಿಸಿದ ಗೋ-ವಿಂದನಂಘ್ರಗಳೆ ಸಾಕ್ಷಿ ದ್ವಾಪರಯುಗದೆ 2ಗತಿಗೋತ್ರರಂತೆ ಸಾಧುಮತಿಗಳಿಂಗೆ ಗತಿಯನಿತ್ತುಮತಿಗೆಟ್ಟ ಇಪ್ಪತ್ತೊಂದು ಮತವ ಖಂಡಿಸಿ |ಮತಗೆಟ್ಟ ವೈಷ್ಣವರಿಗೆ ಗತಿಯ ತೋರಿದೆ ಪರಮಾತ್ಮಗತಿಪುರಂದರವಿಠಲ ಸಾಕ್ಷಿ ಕಲಿಯುಗದಲ್ಲಿ3
--------------
ಪುರಂದರದಾಸರು