ಒಟ್ಟು 5 ಕಡೆಗಳಲ್ಲಿ , 5 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಂಬಾ ತ್ರಿಪುರ ಸುಂದರೀ ಅದ್ವೈತಕಾರೀ ಸಾಂಬೆ ಪರಬ್ರಹ್ಮಣಿ ಪ ಶುಂಭಾಸುರ ಮರ್ದಿನೀ ಸಹಜಾನಂದೆಕ್ಯವಾಣಿ ತುಂಬುರಗಾನ ಪ್ರಿಯೆ ಮಹಾಮಾಯೆ ಸುಖದಾಯೆ ಸರಸಿಜದಳಾಯೆ ಅ.ಪ. ತ್ರಿದಶ ವಂದಿತೆ ತ್ರಿಮೂರ್ತಿ ತ್ರೈಲೋಕ್ಯಗಾತ್ರಿ ತ್ರಿಗುಣರಹಿತೆ ಪಾರ್ವತಿ ತ್ರಿಪುರ ಪ್ರಹಾರೆ ದೇವೀ ತ್ರಿಶೂಲಧರ ಸಂಜೀವಿ ತ್ರಿಗುಣ ಸೋಮ ಸೂರ್ಯಗ್ನಿ ನೇತ್ರೆ ಶುಭಗಾತ್ರೆ ಸುಚರಿತ್ರೆ ಸನ್ಮುನಿಸ್ತೋತ್ರೆ 1 ಪರತರದೇವಿ ಪರಮಪಾವನ ಪ್ರಭಾವಿ ಪರಮಾತ್ಮ ಸ್ವರೂಪಿಣಿ ಪರಮಾನಂದೆಕ್ಯವಾಣಿ ಪರಿಪೂರ್ಣಭರಿತೆ ಶರ್ವಾಣಿ ಶಿವರಾಣಿ ಫಣಿವೇಣಿ ನಿತ್ಯಕಲ್ಯಾಣಿ 2 ವರಕೊಡಶಾದ್ರಿ ನಿವಾಸೆ ವರÀಸುಪ್ರಕಾಶೆ ವರ ಸಿಂಹಾ ರೂಢೆ ಮಹೇಶೇ ವರದೇ ಶ್ರೀ ಮೂಕಾಂಬಿಕೇ ವಿನುತಾನಂದೈಕ್ಯರೂಪಿ ಗುರುವಿಮಲಾನಂದ ಸ್ವರೂಪಿ ಸುಪ್ರತಾಪಿ ಸ್ತುತಿ ದೀಪಿ ಮಂತ್ರಕಲಾಪಿ 3
--------------
ಭಟಕಳ ಅಪ್ಪಯ್ಯ
ನಿತ್ಯ ಭೂತಗಳಟ್ಟಿ ಕಿಂಕರರನು ಸಲಹುತಲಿ ಪಂಕಜಾಕ್ಷನ ಪಾಡಿ ಪೊಗಳುವೆ ಕೊಡಗಿಯ ಶಂಕರನಾರಾಯಣರ ಪ ಪಡುವಿನ ಗಡಲಿನ ತಡಿಯಲಿ ವಿಪ್ರನ ಗಡಣದ ನಡುವೆ ಕಾನನದಿ ಒಡೆದುಮೂಡಿದ ದೇವರೊಡೆಯನ ಕೊಡಗಿಯ ಮೃಡನಾರಾಯಣರ ವರ್ಣಿಸುವೆ1 ದರ್ಪನ ವೈರಿಯಪಿತನ ತಪ್ಪದೆ ನಂದಿ ಗರುಡವಾಹನನಾ- ಗಿಪ್ಪದೇವನ ಕಂಡೆನಿಂದು 2 ಮಂಜುಳ ಸರ್ಪಾಭರಣನ ಕಂಡೆನು ಮಂಜುಳ ಹಾರಪದಕನ ಕುಂಜರ ಚರ್ಮವು ಪೊಂಬಟ್ಟೆವಸನವು ಕೆಂಜೆಡೆ ಮಕುಟದ ಪ್ರಭೆಯು 3 ಪುರಹರ ಗೌರೀಶಲಕ್ಷ್ಮೀಶ ಗಿರಿವಾಸ ವೈಕುಂಠವಾಸ ವರಚಕ್ರ ತ್ರಿಶೂಲಧರ ತ್ರಾಹಿಯೆಂಬ ಮ- ತ್ರ್ಯರ ಮನ್ನಿಸುವ ಕರುಣದಲಿ 4 ವ್ರತದಿಂದ ನೋಡುವ ಯತಿಗಳ ಸಂದಣಿ ಶ್ರುತಿ ಪುರಾಣಗಳರ್ಥಿ ಕೊಡಗಿಯ ದೇವನ ಮತಿಗೆ ಮಂಗಳವೀವುತಿದಿದಕೊ 5 ರಂಗಪೂಜೆಗಳ ಸಂದಣಿ ಒಂದು ಕಡೆಯಲ್ಲಿ ಮಂಗಳಾರತಿಯ ಸಂಭ್ರಮವು ತುಂಗವಿಕ್ರಮನ ಸ್ತುತಿಸಿ ಪಾಡಿ ಪೊಗಳುವ ಹಿಂಗದೆ ನೋಡುವ ಜನರು 6 ಅಯನದ ಶ್ರೀಬಲಿ ದೀಪದುತ್ಸಹಗಳು ಭುವನದ ನಡುವೆ ಕಾನನದಿ ಹಯವದನನೆಂಬ ಕೊಡಗಿಯ ದೇವನ ನಯದಿ ನರರಿಗೆ ತುತಿಸಲಿನ್ನಳವೆ 7
--------------
ವಾದಿರಾಜ
ಪಾಲಿಸು ಪರಮೇಶ | ಪಾಪ ವಿನಾಶ ಪ ಫಾಲನಯನ ತ್ರಿಶೂಲಧರ ಕರು ಣಾಲವಾಲ ವಿಶಾಲ ಮಹಿಮನೆ ಕಾಲಕಾಲ ಕಪಾಲಧರ ಸುರ ಜಾಲನುತ ಪದ ಶೈಲಜಾವರ ಅ.ಪ. ಶಂಕರ ಶಶಿಶೇಖರ | ಸದಾಶಿವ ಸಂಕಟಹರ ಈಶ್ವರ | ವರದಾನ ಶೂರ ಶಂಕೆಯಿಲ್ಲದೆ ತ್ವತದಾಂಬುಜ ಪಂಕ ಕಳೆವ ಅಕ ಳಂಕ ಮತಿಯನು ಕರುಣಿಸುವ ಮೀ ನಾಂಕ ಮದಹರ ಮೃಡಸುರೇಶ್ವರ 1 ಗಜ ಚರ್ಮಾಂಬರಧರನೆ | ಗೌರೀವರನೆ ಅಜಸುತಾಧ್ವರ ಹರನೆ | ಪ್ರಣಿತಾರ್ಥಿಹರನೆ ನಿಜಪದಾಂಬುಜ ಪೂಜೆ ಮಾಡುವ ಸುಜನ ಮನ ಅಂಬುಜ ದಿವಾಕರ ಭಂಜನ ಭುಜಗಭೂಷಣ ನಿಜ ಚರಣ ಪಂಕಜವ ತೋರಿಸಿ..... 2 ಹರಿನೀಲನಿಭಕಂಧರ | ಮುಪ್ಪುರಹರ ಶರಣಜನ ಮಂದಾರ | ಕೈಲಾಸಮಂದಿರ ವರ ವಿನಾಯಕ ಜನಕ ಜಾಹ್ನವಿ ಧರನೇ ಕರುಣಾಭರಣ ಪಾವನಕರಿಗಿರೀಶನ ಪರಮಪ್ರಿಯ ಹರಿ..... 3
--------------
ವರಾವಾಣಿರಾಮರಾಯದಾಸರು
ಹರಹರ ಮಹಾದೇವ ಮಹಾನುಭಾವಾ | ಭವ ಯ್ಯೋಮಕೇಶ | ಅಂಧಕ ಸುರರಿಪು ಜಾಣಾ | ಸುರವರ ಪುರ ಮುರಹರ ಪದವಿನುತಾ ಪ ಸಂಜೀವ | ವಿಷ ಕರ್ತುವಾಭರಣ ಜಗದ ಸೂತ್ರಾಣ | ಎಸೆವ ರುಂಡಮಾಲಾ ಪಾರ್ವತಿಯ ಲೋಲ | ಪಶುಪತಿ ಪಾವನ್ನ ವರಸುಪ್ರಸನ್ನ | ಅಸಮಾನಸಮಾ ಕುಸುಮಾಭಿಸಮ | ನಿಶಕರ ದಿನಕರ ಬಿಸಿ ನಯನ | ದಶಶಿರ ಪ್ರಸನ್ನ ಭಜಿಪರ 1 ಗುರುಕುಲೋತ್ತ,ಮ ತುಂಗ ವೃಷಭ | ಸುರನದಿ ಧರ ಧೀರ ಜಗದೋದ್ಧಾರ | ನಿರಂಜನ ಸುಂದರ ವದನ | ಕರಿ ಚರ್ಮಾಂಬರ ಶೋಭಾಂತರವಾದನಾ ಭಾ | ಹರಣ ಚರಾಚರ ಸುರವರ ಡಮುರಗ ತ್ರಿಶೂಲಧರ | ನರವರ ಶರಭೂತ ಪರಿವಾರ ಭಯಂಕರ | ದುರಿತ ವಿದೂರಾ 2 ಅಂಬರ ವ್ಯಾಘ್ರಾವಾಸಾ | ಯ್ಯೋಮ | ಕೇಶ ಸ್ಮಶಾನವಾಸ | ಭಾಸುರೋನ್ನತ ಲೀಲಾ | ಸುರಮುನಿಪಾಲಾ | ಚಾಪ ಪಿನಾಕಿ ಚಮುಪಾ | ಕಾಸೀವಾಸಿ ತೋಷಿಸೆ | ದಾಶರಥಿ ನಾಮತಾರಕ ಉಪದೇಶಿ | ಕೋಶ ಶ್ರೀ ವಿಜಯವಿಠ್ಠಲ ವೆಂಕಟೇಶನ | ಪುರಂದರ ದಾಸನ ದಾಸನ ಕ್ಲೇಶವಿನಾಶಾ 3 (ಔ) ಶ್ರೀತುಳಸೀ
--------------
ವಿಜಯದಾಸ
ಮಂಗಳ ಜಯಜಯತೂ ಜಯತು ಜಯಮಂಗಳಶುಭಜಯತುಪವಾರಿಜೋದ್ಭವನಿಗೆ ವಾಣಿ ಶಾರದೆಗೆನಾರಾಯಣನಿಗೆ ನಾರಿ ಲಕ್ಷುಮೀಗೆಮಾರಸಂಹಾರನಿಗೆ ಪಾರ್ವತೀ ದೇವಿಗೆನಾರೀ ರನ್ನೆಯರ್ ಹೂವಿನಾರತಿ ಬೆಳಗೆ1ಸೃಷ್ಟಿಕರ್ತಗೆ ಸರ್ವ ಅಕ್ಷರದಾಯಿನಿಗೆರಕ್ಷಣ ಮೂರ್ತಿಗೆ ಅಕ್ಷಯಾಶ್ರಿತೆಗೆಶಿಕ್ಷೆ ರಕ್ಷಃ ದೇವಿ ಸೃಷ್ಟಿ ಸಂಹಾರಗೆಅಕ್ಷತೆಯಿಟ್ಟು ಸ್ತ್ರೀಯರ್ ಆರತಿ ಬೆಳಗೆ2ವರಹಂಸ ಗಮನಗೆ ಮಯೂರ ವಾಹನಗೆಗರುಡ ಗಮನಗೆ ಮದಕರಿ ಧ್ವಜಿಗೆವೃಷಭವಾಹನನಿಗೆ ವರಸಿಂಹ ವಾಹಿನಿಗೆಸರಸಿಜಾಕ್ಷಿಯರ್ ಮುತ್ತಿನಾರತಿ ಬೆಳಗೆ3ಕಮಂಡಲುಧಾರಿಗೆ ವರವೀಣಾಪಾಣಿಗೆಕೌಮೋದಕಿಧರಗೆಕಮಲಸುಮಕರಗೆಡಮರು ತ್ರಿಶೂಲಧರಗೆ ತೋಮರ ಪಾಣಿಗೆಕೋಮಲಾಂಗಿಯರ್ ಕುಂಕುಮದಾರತಿ ಬೆಳಗೆ4ಅಂಬುಜಾಸನಗೆಶುಂಭಸಂಹಾರಳಿಗೆಕುಂಭಕರ್ಣಾಂತಕಗೆ ಮಹಿಷಮರ್ದಿನಿಗೆಸಂಭ್ರಮತ್ರಿಪುರಾರಿ ಚಂಡ ಮುಂಡಾರ್ದಿನಿಗೆಅಂಬುಜಾಕ್ಷಿಯರ್ ಸಂಭ್ರಮದಾರತಿ ಬೆಳಗೆ5ಚಂದದಿ ಬ್ರಹ್ಮಗೆ ಚಂದಿರವದನೆಗೆಸುಂದರ ಮೂರ್ತಿಗೆ ಇಂದಿರೆಗೆಅಂದದ ಶಿವನಿಗೆ ಅರವಿಂದನೇತ್ರೆಗೆವಂದಿಸಿ ಗೋವಿಂದದಾಸನಾರತಿ ಬೆಳಗೆ6<?xmಟ veಡಿsioಟಿ='1.0' eಟಿಛಿoಜiಟಿg='uಣಜಿ-8'?>
--------------
ಗೋವಿಂದದಾಸ