ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನೋಡಿದೆ ಹರನಾ ನೋಡಿದೆ ಪ. ಹರನ ಕೊಂಡಾಡಿದೆ ಪಾದಪಾವನ್ನ ರೂಢಿಯೊಳಗೆ ಇಂಥಾ ಈಡಿಲ್ಲ ಶಿವನಾ ಜೋಡಿಶಿರವ ಬಾಗುವೆನಾ ಶಿರವಾ ಅ.ಪ. ಶುಕ ದೂರ್ವಾಸ ರೂಪದ ರುದ್ರಾ ನೀನು ಅವತಾರ ತಾಳಿದ್ಯೊ ವೀರಭದಾ ಮಥನವಾ ಮಾಡಲು ಸಮುದ್ರಾ ನೀನು ವಿಷಪಾನ ಮಾಡಿದ್ಯೊ ಆದ್ರ್ರಾ || ಆಹಾ|| ನೀಲಕಂಠನಾಮವು ಬಂದವು ನಿನ್ನ ನೋಡುವರ ಮನಕೆ ಆನಂದವ ಕೊಡುವುದು ಜಗಕೆ 1 ಕರದಲಿ ಡಮರು ತ್ರಿಶೂಲಗಳಿಂದಾ ನೀನು ಶೋಭಿಪಿಯೋ ಬಲುಛಂದಾ ಗಳದಲ್ಲಿ ದ್ರಾಕ್ಷಾಮಾಲೆಗಳಿಂದಾ ನಾಗಭೂಷಣಾಯಿಂದಾ || ಆಹಾ|| ಶಿರದಾ ಜಡಿಯೋಳು ಗಂಗಿಯ ಧರಿಸಿದ ಧೀರನು ಹರಿಯಾ ರೂಪಕೆ ಮರುಳಾದ ಶಂಕರನ 2 ಕೈಲಾಸಪುರಧೀಶ ವಾಸಾ ನೀನು ಸರ್ವರಮನಕೆ ಉಲ್ಲಾಸ ನೀನು ಸತಿಗೆ ತಾರಕ ಮಂಗಳ ಉಪದೇಶಾ ಸ್ಮಶಾನವನು ಕಾಯ್ದ ಹರಿದಾಸಾ || ಆಹಾ|| ನಂದಿವಾಹನನಾಗಿ ಆನಂದಾದಿ ಮೆರೆಯುವ ಸಿಂಧುಶಯನನ ಕಾಳಿಮರ್ಧನಕೃಷ್ಣನ ತಂದು ತೋರಿಸುವನ 3
--------------
ಕಳಸದ ಸುಂದರಮ್ಮ