ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪಾಲೀಸೊ ಪವಮಾನ | ಜಯಪತಿಬಾಲಾನೆ ಜಗತ್ರಾಣಾ ಪ ಕಾಳೀರಮಣ ಹೃತ್ಕೀಲಾಲಜದಿ ತೋರೊಲೀಲಾಮಾನುಷನ | ಬಾಲ ಗೋಪಾಲನ ಅ.ಪ. ಶ್ವಾಸ ರೂಪಕ ಪ್ರಾಣಾ | ತತುವರಿ | ಗೀಶಾ ಭಕ್ತ ಪೋಷಣ ||ವಾಸೀಸಿ ತ್ರಿವಿಧರೊಳ್ | ತಾಸೀಗ್ವಂಭೈನೂರುಶ್ವಾಸ ಜಪಂಗಳ | ಲೇಸಾಗಿ ನೀ ಗೈದೆ 1 ಸಕಲ ಜಗವು ವ್ಯಾಪ್ತಾ | ಜೀವರ | ಅಖಿಲ ಕರ್ಮದಿ ಶಕ್ತಾ ||ಸೃಕು ಸೃವಾದ್ಯಂಗ | ಪ್ರಕಾರದೊಳಗಿದ್ಯುಕುತಿಯಲಿ ಯಜ್ಞ | ಭೋಕ್ತøವ ಸೇವಿಸುವ 2 ಕೂರ್ಮರೂಪಿ ಜಗಭಾರ | ಪೊತ್ತಿಹೆ | ಪೇರ್ಮೆಯಲಿಂದ ಸಮೀರ ||ಧರ್ಮನನುಜ ಸೂ | ಶರ್ಮಾನ ಬಿಗಿದು ಗೋ-ಧರ್ಮಾ ಕಾಯ್ದ ಭಾವಿ | ಬ್ರಹ್ಮಾನೆ ಸಲಹೆನ್ನ 3 ಬೃಹತೀ ನಾಮಕಗನ್ನಾ | ನಾಗುತ | ಮಹಾ ಪುರುಷ ಸೇವೆಯನ್ನಾ ||ವಿಹಿತ ಮಾರ್ಗದಿ ಗೈದೆ | ಮಹಾ ಮಹಿಮ ವಾಯು ಸಹೋಬಲೌಜ ಭ್ರಾಜ | ಪಾಹಿ ತೇಜೋರೂಪಿ 4 ತರಾತಮದ ಸೊಲ್ಲಾ | ಶ್ರೀಹರಿ | ಗುರು ಗೋವಿಂದ ವಿಠಲಾ ||ಪರಮ ಪರಾಧ್ರ್ಯನುತ | ಪರಮ ರಸನು ಎನುತೊರೆವ ಮರುತ ಪದ | ಸರಸೀರುಹಕೆ ನಮೊ 5
--------------
ಗುರುಗೋವಿಂದವಿಠಲರು