ಅರಿವೆ ಮಹದ್ವರವೆ ನೀನೆ
ಪರಕೆಪರಮ ಪರಮಸೂತ್ರನು ಪ
ತ್ರಿಕಾಲ ಬಲ್ಲಿ ನೀ ತ್ರಿಲೋಕವನು ಬಲ್ಲಿ
ತ್ರಿದ್ವಿಶಾಸ್ತ್ರವ ಬಲ್ಲಿ ತ್ರಿಯೊಂದ್ವೇದವ ಬಲ್ಲಿ 1
ತ್ರಿವರ್ಗರಳಿಬಲ್ಲಿ ತ್ರಿದ್ವಿಗುಣ ಕಳಿಬಲ್ಲಿ
ತ್ರಿನಾಲ್ಕು ಗೆಲ್ಲಬಲ್ಲಿ ತ್ರಿಸಪ್ತರೊದಿಬಲ್ಲಿ 2
ತ್ರಿಸದ್ವಾರಬಲ್ಲಿ ತ್ರಿಣಯರಸ್ಥಲಬಲ್ಲಿ
ತ್ರಿತ್ರೀಯಬಂಧನ ಬಲ್ಲಿ ತ್ರಿವಿಧದಿ ಹರಿಬಲ್ಲಿ 4
ತ್ರಿದ್ವಯ ಮೂಲವ ಬಲ್ಲಿ ತ್ರಿದಶಸ ಭೇದವ ಬಲ್ಲಿ
ತ್ರಿಕೂಟಕಳೆ ತ್ರಿಪಂಚದುಳಿ ಬಲ್ಲಿ 5
ವರದ ಶ್ರೀರಾಮ ಚರಿತ ಪೊಗಳಬಲಿ ್ಲ
ಕರುಣದಿಂದೆನ್ನೊಳು ಬೆರದೇಕನಾಗೆಲೊ 6