ಬಿನ್ಯೈಪೆ ನಿನಗಾನು ಭೀಮಸೇನ ಪ
ಬನ್ನಬಡುತಿಹ ಜನರ ಭಯವ ಪರಿಹರಿಸೆಂದು ಅ.ಪ.
ನೀಚರಿಂದಲಿ ಬಂದ ಭಯಗಳಿಂದಲಿ ಜನರು
ಯೋಚಿಸುವರೆಮಗಾರು ಗತಿಯೆನುತಲಿ
ಕೀಚಕಾಂತಕ ನಿನ್ನ ಕೀರ್ತಿ ಬಹುವಿಧ ಕೇಳಿ
ಯಾಚಿಸುವೆ ನಿನಗಾನು ಎಲ್ಲರನು ಸಲಹೆಂದು 1
ಭವ ವಿಮೋಚಕನು ನೀನೆ ಸಚ
ರಾಚರಕೆ ಸಂತತ ಪುರೋಚನಾರಿ
ಪ್ರಾಚೀನ ಕರ್ಮಾಬ್ಧಿ ವೀಚಿಯೊಳು ಮುಳುಗಿಹ
ಖೇಚರೇಂದ್ರಾಹಿಪ ತ್ರಿಲೋಚನರ ಗುರುವೆ 2
ಖಚರೋತ್ತಮನೆ ನಿನ್ನ ಸುಚರಿತೆಗಳನು ಕೇಳಿ
ರಚನೆಗೈಯ ಬಲ್ಲೆನೆ ಅಚಲ ಸತ್ವ
ಪ್ರಚಲಿಸುತಿಹ ಮನೋವಚನ ಕಾಯುವ ಘಟೋ
ಪ್ರಚಯ ಮಾಡುವುದೆಂದು 3
ಲೋಚಿತದ ಧರ್ಮಗಳ ಸೂಚಿಸೆಮಗೆ
ಪಾಚಕನೆ ನಿನ್ನಡಿಗೆ ಚಾಚುವೆನು ಶಿರ ಸವ್ಯ
ಸಾಚಿ ಸೋದರನೆ ದಯದಿ ಗೋಚರಿಸಿ ಸಲಹೆಂದು 4
ವಾಚಾಮಗೋಚರ ಜಗನ್ನಾಥ ವಿಠ್ಠಲನ
ಶ್ರೀ ಚರಣ ಭಜಕನೆ ನಿಶಾಚರಾರಿ
ಮೈಚರ್ಮ ಸುಲಿದು ದುಶ್ಯಾಸನನ ರಕುತ ಪರಿ
ಷೇಚನೆಯ ಮಾಡಿದೆ ಮಹೋಚಿತವಿದೆಂದರಿದು 5