ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕೊಡು ಸುಖವ ಜಗಪಾಲಯ ಒಡೆಯ ವೈಕುಂಠದಾಲಯ ಪ ಕೊಡು ಸುಖ ನಿಮ್ಮಯ ಅಡಿಯದಾಸರ ಸೇವೆ ಸಡಗರ ಸಂಪದ ಎಡೆಬಿಡದೆ ಅ.ಪ ಜಡಮತಿಯನು ಕೆಡಿಸಿ ಜಡದೇಹಮೋಹ ಬಿಡಿಸಿ ಜಡಭವತೊಡರನು ಕಡೆಹಾಯ್ಸಿ ಅಡಿಗಡಿಗೆ ನಿನ್ನಡಿದೃಢ ಭಕುತಿ 1 ಸಾಗರಸಂಸಾರಭೋಗದ ಬಲುಘೋರ ನೀಗಿಸಿ ನಿಜಜ್ಞಾನ ಪಾಲಿಸಿ ಬೇಗನೆ ನೀಡು ತವದರುಶನವ 2 ಮನಸಿನ ಹರಿದಾಟ ಘನಘನ ದುಶ್ಚಟ ವನು ಪರಿಹರಿಸಿ ದಯಮಾಡು ಮನಶಾಂತಿ ಸದುಗುಣವ 3 ತನುತ್ರಯದಲಿ ನಿನ್ನ ನೆನಹನು ನಿಲಿಸೆನ್ನ ಬಿನುಗು ತ್ರಿದೋಷ ದೂರಮಾಡಿ ಜನನ ಮರಣಂಗಳ ಗೆಲಿಸಭವ 4 ಭೂಮಿಯೊಳಧಿಕೆನಿಪ ಸ್ವಾಮಿ ಶ್ರೀರಾಮಭೂಪ ನೇಮದಿ ಬೇಡುವೆ ವರ ನೀಡು ಆ ಮಹಕೈವಲ್ಯ ಪದವಿಯ 5
--------------
ರಾಮದಾಸರು
ತಾರಕುಪದೇಶವೆಂಬ ಸಾರಣಿಯ ಕೊಟ್ಟು ಪೂರ್ವ ಕರ್ಮಗಳೆಂಬ ಕಿಲ್ಮಿಷಗಳ ತೊಳೆದು ಧ್ರುವ ನಿಜ ಬೋಧವೆಂಬ ಚೂರ್ಣ ಕೊಟ್ಟು ಭವಬೀಜವೆಂಬ ವ್ಯಾದಿಯ ಮೂಲನೆ ಸುಟ್ಟು ಙÁ್ಞನಾಮೃತವೆಂಬ ಕಷಾಯದಲಿ ಉತ್ಪತ್ತಿ ಸ್ಥಿತಿ ಲಯವೆಂಬ ತ್ರಿದೋಷವನು ಪರಿಹರಿಸಿದ ನಮ್ಮ ಗುರು ಭವರೋಗವೈದ್ಯ 1 ಕಾಯವೆ ಕೋವಿಯನೆ ಮಾಡಿ ಭಾವನೆಯ ಮದ್ದನೆ ತುಂಬಿ ಸೋಹ್ಯ ಸೊನ್ನೆಯ ರಂಜನಸಿಕ್ಕಿ ಲಯಲಕ್ಷವೆಂಬ ಗುಂಡಿನಲಿ ಭವಪಾಶವೆಂಬ ಗುರಿಯ ಕೆಡಹಿದ ನಮ್ಮ ಗುರುನಾಥ ಮಹಿಪತಿಯ 2
--------------
ಕಾಖಂಡಕಿ ಶ್ರೀ ಮಹಿಪತಿರಾಯರು