ಒಟ್ಟು 5 ಕಡೆಗಳಲ್ಲಿ , 2 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕುಲವೇನೆಂತು ಹೇಳಲಿ ಯೋಗೀಶನಕುಲವೇನೆಂತು ಹೇಳಲಿಕುಲವ ಕೇಳುತಿಹ ಕತ್ತೆಯ ಮಗನಿಗೆ ಪ ಬಲಿದು ಆಧಾರವನು ಕುಂಬಕದೊಳು ನಿಲಿಸಿ ವಾಯುವನುನೆಲೆಯನು ಹತ್ತಿಸಿ ನೆಲೆಯಾಗಿ ನೆಲೆಸಿನೆಲೆಯೊಳು ಕುಳಿತಿಹ ಪುಣ್ಯ ಪುರುಷನಿಗೆ 1 ಜಾಗ್ರತದಿ ಸ್ವಪ್ನವನು ಸುಷುಪ್ತಿಯು ಸಹನಿಗ್ರಹಿಸೆಲ್ಲವನು ಸ್ವರ್ಗದ ಮೇಲೆ ಮಹಾ ಸ್ವರ್ಗವಿರಲುಸುಸ್ವರ್ಗದಿ ನೆಲೆಸಿಹ ಭರ್ಗನಾದವಗೆ2 ಎಣಿಕೆಯ ಜನ್ಮವನು ಕಳೆದು ಮುಂದೆಕ್ಷೀಣಿಸಿ ಪ್ರಾರಬ್ಧವನು ತ್ರಿಣಯನನಾಗಿ ದಿನಮಣಿಯಾಗಿ ಕಣಿಯಾಗಿಗುಣಕಗೋಚರ ಚಿದಾನಂದನಾದವನಿಗೆ 3
--------------
ಚಿದಾನಂದ ಅವಧೂತರು
ಪರಮ ಪುರುಷ ಹರಿ ಗೋವಿಂದ - ಸಿರಿವರ ನಾರಾಯಣ ಗೋವಿಂದ ಪ ನಿಶೆವೆಸರಸುರನ ಉಸಿರ ತೊಲಗಿಸಿದೆಕುಸುಮ ಶರನ ಪಿತ ಗೋವಿಂದವಸು ಪೂರಿತ ಶ್ರುತಿ ಮಸುಳಿಸದೆ ತಂದೆಬಿಸಜ ಸಂಭವನಯ್ಯ ಗೋವಿಂದ 1 ಮಂದರ ಸಿರಿ ಗತವಾಗದ ಮುನ್ನಕ್ಷಿತಿ ಪೆತ್ತನಯ್ಯ ಗೋವಿಂದ 2 ಭೂತಳವೆರಸಿ ರಸಾತಳಕಿಳಿದಿಹಪಾತಕನ ಕಂಡೆ ಗೋವಿಂದಆತನೊಡನೆ ಕಾದಾತನ ಗೆಲಿದು ಮ-ಹೀತಳವನು ತಂದೆ ಗೋವಿಂದ 3 ದುರುಳಾಸುರನ ನಡುಗರುಳ ಮಾಲೆ ಮುಂ-ಗೊರಳೊಳು ಧರಿಸಿದೆ ಗೋವಿಂದಗರಳ ಕೊರಳನು ಬೆರಳೆತ್ತಿ ಪೊಗಳಲುತರಳಗೊಲಿದೆ ನೀ ಗೋವಿಂದ4 ವಾಮನನಾಗಿ ನಿಸ್ಸೀಮ ಬಲಿಯ ಕೈಯಭೂಮಿಯನಳೆಕೊಂಡೆ ಗೋವಿಂದತಾಮರಸ ಪದದಿ ಕನಕ ಗರ್ಭಯೋಗವ್ಯೋಮ ಗಂಗೆಯ ತಂದೆ ಗೋವಿಂದ 5 ಸುರ ಪಶುವಿಗೆ ಋಷಿಯನು ಕೊಂದನ ಬಹುಕರ ಬಲ ಮುರಿದೆಯೊ ಗೋವಿಂದತರ ಹರಿಸದೆ ವಸುಧೆಯ ಒಡೆತನ ಭೂಸುರರಿಗೆ ನೀಡಿದೆ ಗೋವಿಂದ 6 ತ್ರಿಣಯನ ತಾತ್ಪರ್ಯ ರಾವಣನ ಶಿರರಣದೊಳುರುಳಿಸಿದೆ ಗೋವಿಂದಕ್ಷಣಮೆಣಿಸದೆ ಸದ್ಗುಣವಂತ ವಿಭೀ-ಷಣಗಭಯವಿತ್ತೆ ಗೋವಿಂದ 7 ಕ್ರತು ಸಿರಿ ಭೂಭಾರೋತ್ತಾರಣ ಬಲಯುತ ಗೋವಿಂದ 8 ಕಥೆಯನು ನಿರ್ಮಿಸಿ ಪತಿವ್ರತೆಯರ ಘನವ್ರತಗಳ ಕೆಡಿಸಿದೆ ಗೋವಿಂದಜತೆಯಗಲದ ಪುರ ತ್ರಿತಯ ಗೆಲಿದು ದೇ-ವತೆಗಳ ಸಲಹಿದೆ ಗೋವಿಂದ 9 ಜಾಜಿಯ ಮರಕತ ತೇಜಿಯನೇರಿ ವಿ-ರಾಜಿಪ ರಾವುತ ಗೋವಿಂದಸೂಜಿಯ ಬೆನ್ನೊಳು ರಾಜಿಪ ತೆರದಿ ಸ-ಹಜರೊಳಡಗಿರ್ಪ ಗೋವಿಂದ 10 ಮೇದಿನಿಗೋಸುಗ ಕಾದಿ ಕಲಹದಿ ವಿ-ರೋಧಿಗಳ ಕೊಂದೆ ಗೋವಿಂದಸಾಧುಗಳಿಗೆ ಸುಖವೀಯುವ ಬಾಡದಶ್ರೀಧರ ಕೇಶವ ಗೋವಿಂದ 11
--------------
ಕನಕದಾಸ
ಮಕ್ಕಳಿಂದಲೆ ಗತಿಯು ಎಂಬುದೇನಿರಯ್ಯಮಕ್ಕಳಿಲ್ಲದವರಿಗೆ ಗತಿಯಿಲ್ಲವೇ ಪ ಸತ್ಯ ಶೌಚಾಚಾರ ಶಮೆದಮೆಗಳಳವಟ್ಟುನಿತ್ಯ ಕಾಲದಿ ಹರಿಯ ಮನದಿ ನೆನೆದುಅತ್ಯಂತ ಸಂತುಷ್ಟನಾದರಿಂದಲ್ಲದಲೆಹೆತ್ತವರಿಂದ ಗತಿಯು ಎಂಬುದು ನಗೆಯಲ್ಲವೇ 1 ಅಣುಮಹತ್ತಿಲಿ ಶುಚಿಯು ಅಶುಚಿಯಾಗಿಪ್ಪಂಥಎಣಿಕೆ ಎಲ್ಲವನು ತಾಯೆನಿಸಿ ತಿಳಿದುತ್ರಿಣಯನಾಗಿಹೆನೆಂದು ತಾನೆ ತಾನಾಗದಲೆಕ್ಷಣಿಕ ಸುತರಿಂ ಗತಿಯು ಎಂಬುದು ನಗೆಯಲ್ಲವೆ 2 ಸ್ನಾನ ಜಪತಪ ತಿಲೋದಕ ಶ್ರಾದ್ಧ ತರ್ಪಣದಕ್ಷೀಣ ಕರ್ಮಗಳಿಂದ ಮುಕುತಿಯಹುದೇಮಾನನಿಧಿ ಚಿದಾನಂದ ಗುರುಪಾದ ಪದ್ಮವನುನ್ಯೂನವಿಲ್ಲದೆ ನಂಬಿ ಸುಖಿಯಾದರಲ್ಲವೆ3
--------------
ಚಿದಾನಂದ ಅವಧೂತರು
ಬಗಳಾ ಬ್ರಹ್ಮವಾಗಿ ತೋರುತಿದೆ ನೀ ಕಣ್ಮುಚ್ಚಿ ತೆರೆಯೆಬಗಳಾ ಬ್ರಹ್ಮವಾಗಿ ತೋರುತಿದೆ ನೀ ಬಗೆ-ಬಗೆಯ ಜ್ಯೋತಿಯ ಬೆಳಕನು ಕಾಣುತಝಗ ಝಗಿಸುತ ಎರಕದ ಪುತ್ಥಳಿಯಂತೆಪಉಣ್ಣುವಲ್ಲಿ ಉಡುವಲ್ಲಿ ಉಚಿತಂಗಳಲ್ಲಿಮಣಿವಲ್ಲಿ ಏಳುತಿರುವಲ್ಲಿ ಮುಂದಣ ಹೆಜ್ಜೆಯಲಿಘಣ ಘಣ ಘಂಟಾಸ್ವರವನೆ ಕೇಳುತತ್ರಿಣಯನಳಾಗಿ ಒಳಗೆ ಹೊರಗೆ1ತಾಗುವಲ್ಲಿ ತಟ್ಟುವಲ್ಲಿ ತತ್ತರವಾದಲ್ಲಿಹೋಗುವಲ್ಲಿ ನಿಲ್ಲುವಲ್ಲಿ ಶಯನದಲ್ಲಿ ನಿದ್ದೆಯಲ್ಲಿನಾಗಸ್ವರದ ಧ್ವನಿಯಿಂಪನೆ ಕೇಳುತಯೋಗಾನಂದದಿ ಓಲಾಡುತಲಿ2ಇಹಪರವೆರಡದು ಹೋಗಿ ಇರುಳು ಹಗಲನೆನೀಗಿಮಹಾಜೀವವಾಸನೆಗತವಾಗಿ ಮತಿಯಿಲ್ಲವಾಗಿಬಹು ಬೆಳಗಿನ ಬೆಳದಿಂಗಳ ಬಯಲಲಿಮಹಾ ಚಿದಾನಂದ ಬ್ರಹ್ಮಾಸ್ತ್ರವಾಗಿ3
--------------
ಚಿದಾನಂದ ಅವಧೂತರು
ವೀರೆಯ ನೋಡಿರೋ ಅಸುರರ ಮಾರಿಯ ನೋಡಿರೋಶೂರಾದಿ ಶೂರರ ದಾರಿಯ ಹಚ್ಚಿಸಿಮುರಿದ ಮಹಿಷಾಸುರನ ತರಿದಪರಿಶಿಲೋಮನು ಶಕ್ತಿಯ ಪಡೆದು ನಡೆದು ಕಣ್ಕೆಂಪಿಡಿದುಮಸಗುತಲಿಡಲು ಶಕ್ತಿಯ ದೇವಿಯು ಹಿಡಿದೆ ಹಲ್ಲನು ಕಡಿದೆಕೊಸರಿಯೆ ಇಟ್ಟಳು ಅಸುರನ ಎದೆಗೆ ಹೊಯ್ದು ರಕ್ತದಿ ತೊಯ್ದುಬಸವಳಿಯುತ ರಿಶಿಲೋಮನು ಭೂಮಿಗೆ ಬೀಳೆ ಬಹು ಹುಡಿಯೇಳೆ1ವರರುದಗ್ರನು ಗದೆಯನು ಹೊತ್ತು ಬರಲು ದೇವಿಗೆರಗಲುಶರದಿಂದಲಿ ತಲೆಯುರುಳಿಸಿ ಶಿರ ಬೊಬ್ಬಿರಿದು ಡಿಂಬವು ನಡೆದುಭರದಲಿ ಹೊಯ್ದುದು ಗದೆಯಲಿ, ಶರ ಸೋನೆಯ ಸುರಿದು ಖಡ್ಗವಹಿರಿದು ಪರಮೇಶ್ವರಿ ಭಾಪೆನಲು ನಡೆದು ಬಿತ್ತು ಪ್ರಾಣ ಹೋಗಿತ್ತು2ದಳಪತಿಯಹ ಚಿಕ್ಷುರಗೆ ಸಮನೆ ತ್ರಿಣಯನ ಕಾಣೆನು ಎಣೆಯನಹೊಳಕಿದ ನಾನಾಪರಿಆಯುಧದಿ ಮುಂದೆ ಧಿರುಧಿರು ಎಂದೆಒಳ ಹೊಕ್ಕಿರಿದನು ದೇವಿಯ ಶೂಲದಿ ಎದೆಯ ಶೌರ್ಯ ಶರಧಿಯಬಳಿಯದ ದೇವಿಯು ತಪ್ಪಿಸಿ ಶೂಲದಿ ತಿವಿಯೆ ಕಂಗಳ ಮುಗಿಯೆ3ದುಷ್ಟ ಬಿಡಾಲನು ಶರಗಳ ಸುರಿದನು ಮುಚ್ಚೆ ಸುರರೆದೆ ಬಿಚ್ಚೆಎಷ್ಟನು ಹೇಳಲಿ ಮಾಯದಿ ಮುಸುಕಿ ಇರಿದ ಬಹು ಬೊಬ್ಬಿರಿದಮುಷ್ಟಿಯಲಿ ತಿವಿದನು ದೇವಿಯ ಕೋಪವು ಹೆಚ್ಚಿ ತಾನವುಡುಗಚ್ಚಿಬಿಟ್ಟನು ದೇಹವ ದೇವಿಯು ಶೂಲದಿ ತಿವಿಯೆ ರಿಪುಭವವಳಿಯೆ4ಎಡಬಿಡದಲೆ ರೌದ್ರದಿ ಮಹಿಷಾಸುರನೊತ್ತೆ ದೇವಿಯು ಮತ್ತೆಕಿಡಿಕಾರುತ ಹೊಕ್ಕೊದೆದಳು ಬೀಳಲು ಕವಿದು ಶೂಲದಿ ತಿವಿದುಕಡಿದಳು ಕೊರಳನು ತಲೆಯನು ಮೆಟ್ಟಿ ಓಡಿತು ಭಯ ಹಿಮ್ಮೆಟ್ಟಿಮೃಡಚಿದಾನಂದನು ತಾನಾದ ಬಗಳ ಕರುಣಿ ಭಕ್ತರಭರಣಿ5
--------------
ಚಿದಾನಂದ ಅವಧೂತರು