ಒಟ್ಟು 3 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪಾಲಿಸು ಮರೆಯದೆನ್ನ ಪಾಲ ತ್ರಿಜಗಮೋಹ ಮಾಲಕೌಸ್ತುಭ ಸತ್ಯಭಾಮಾ ಲೋಲ ಭಕ್ತಜನರ ಪ್ರೇಮ ಕಾಲಕಾಲದಿ ನಿಮ್ಮ ಭಜನಲೋಲಜನರೊಳಿರಿಸಿ ಎನ್ನ ಬಾಲನೆಂದು ಕರುಣದಾಳು ಕಾಳರಕ್ಕಸಕುಲಸಂಹಾರ ಪ ವಾರಿಧಿಯೊಳು ಮುಳುಗಿದ ವೇದಗಳ ತಂದು ವಾರಿಜಾಸನಗೊಪ್ಪಿಸಿದಿ ಸಾಧುಗಳ ಬಂಧು ವಾರಿಧಿಯೊಳು ವಾರಿಧಿಯ ಕಡೆದಿ ವಾರಿಧಿಯೊಳು ವಾಸನಾದಿ ವಾರಿಧಿಸುತೆಪತಿ ನೀನಾದಿ ವಾರಿಧಿಯನು ಬಂಧಿಸಿ ಮತ್ತೆ ವಾರಿಧಿಯ ಮಧ್ಯದ ಪುರವ ಸೂರೆಗೈದಾಪಾರಮಹಿಮ ಘೋರತಾಪದಿ ಬಿಡದೆ ದೇವ1 ಮಾಯಾಜಗವ ತುಂಬಿದಿ ಮಹರಮಣ ಹರಿಯೆ ಮಾಯದ ಮರುಣುಣಿಸಿದಿ ವೈಕುಂಠಪತಿಯೆ ಮಾಯೆಗೆ ಮಾಯೆಯೆನಿಸಿದಿ ಮಾಯೆಹರನಾದಿ ಮಾಯದಿಂ ಬಲಿಯನ್ನು ತುಳಿದಿ ಕಶ್ಯಪನ ಅಳಿದಿ ಮಾಯದ್ಹಿರಣ್ಯಕನ ಸೀಳಿದಿ ಮಾಯದಿಂ ಮಾಯೆಮೂಗು ಕುಯ್ಸಿದಿ ಮಾಯಮೃಗವನು ಮಾಯದಿಂ ಕೊಂದಿ ಮಾಯದೆನ್ನ ನೂಕದೆ ದೇವ 2 ಕಪಟಕೋಟಿಗಳನ್ನಳಿದಿ ಚಪಲಸುರಪನ ಕಪಟಗರುವವ ಮುರಿದಿ ಲಕುಮಿರಮಣ ಕಪಟನಾಟಕ ನೆನಿಸಿದಿ ಕಪಟಹರನಾದಿ ಕಪಟ ಅಸುವ ಸೆಳೆದಿ ಕಪಟ ಕಂಸನ ಶಿರವಮೆಟ್ಟಿದಿ ಕಪಟಿಗಳ ಮಹ ಕಪಟದಿಂ ಕೊಂದಿ ಶ್ರೀರಾಮ3
--------------
ರಾಮದಾಸರು
ಭಜಿಸಿರೋ ಮನದಣಿಯ ಸುಜನಾಬ್ಜ ದಿನಮಣಿಯ ಭುಜಗಾರಿಗಮನ ತಿಂಥಿಣಿಯ ಸತ್ಕಣಿಯ ಪ ರಜನೀಕರ ಗುಣಶ್ರೇಣಿ ಅಜಭವ ಸುರಾಗ್ರಣಿಯ ತ್ರಿಜಗಮೋಹನ ಮಣಿಯ ಸೊಬಗಿನ ಕಣಿಯ ಅ.ಪ ಪೊಳೆವ ಮಕುಟದ ಫಣಿಯ ತಿಲಕದಲಿ ರಂಜಿಸುವ ಪ್ರಣವ ಗೋಚರ ಸುಧಾಮಯದ ಕದಪಿನಲಿ ತೊಳಪ ಕುಂಡಲದ ನಾಸಿಕದ ಮೂಗುತಿಯೆಸೆಯೆ ಸುಲಿಪಲ್ಲ ನಗೆಮೊಗದ ಸುಲಭಸೌಂದರÀನ 1 ಪದಕ ಮಣಿಮಯ ಮೌಕ್ತಿಕದ ಹಾರ ತ್ರಿಸರ ಕಂ ಧರ ವೈಜಯಂತಿಯೊಲವಿನ ಬಾವುಲಿ ಮುದದ ಕಂಕಣ ಕರದ ಮುದ್ರೆಯೆಸೆವಾ ಬೆರಳ ಕಂಬು ಮದನಶರಧನು 2 ತರಣಿ ಶತಕೋಟಿ ಕಿರಣತತಿ ಕುಮುದ ವರ್ಣದ ತನುರುಚಿಯಾ ಹರಸುರೇಶ್ವರ ವಿರಿಂಚ್ಯಾದಿ ವಂದಿತಚರಣ ಸರಸಿರುಹ ವರದೇವಪುರದ ಸಿರಿವರನ 3
--------------
ಕವಿ ಲಕ್ಷ್ಮೀಶ
ಪಾದಕಂಡು ಪಾವನಾದೆನು ಶ್ರೀಗಿರಿಯ ನಿಲಯನಪಾದಕಂಡು ಪಾವನಾದೆನು ಪಪಾದಕಂಡು ಪಾವನಾದೆನುಮಾಧವನ ಪ್ರಸಾದ ಪಡೆದೆನುಹಾದಿಗಾಣದೆಪರಮದುರ್ಭವಬಾಧೆಯೊಳು ಬಿದ್ದು ತೊಳಲಿ ಬಳಲುತಮೇದಿನಿಯೊಳು ಜನುಮ ತಾಳಿಭೇದಮತದ ಹಾದಿಬಿಟ್ಟು ಅ.ಪನೀಲಬಣ್ಣದೊಪ್ಪುವ ಸುಂದರ ಶುಭಕಾಯಇಂದಿರೆಲೋಲತ್ರಿಜಗಮೋಹನಾಕಾರ ಕೊರಳಪದಕಮಾಲಕೌಸ್ತುಭಮುಕುಟಮಣಿಹಾರ ರತ್ನದುಂಗುರಕಾಲೊಳ್ಹೊಳೆಯುವ ಗೆಜ್ಜೆಸರಪಳಿಶೀಲವೈಷ್ಣವ ನಾಮ ಪಣೆಯಲಿಕಾಳರಕ್ಕಸಕುಲಸಂಹಾರನಪಾಲಸಾಗರಕನ್ನೆವರನಪಾಲಮೂಲೋಕಸಾರ್ವಭೌಮನಮೇಲು ಭೂವೈಕುಂಠದಲ್ಲಿ 1ಉಟ್ಟದುಕೂಲ ಶಲ್ಯ ಜರತಾರ ಕೈಯಲ್ಲಿ ಕಂಕಣಪಟ್ಟ ರತ್ನದ ನಡುವಿಗುಡಿದಾರ ವರ್ಣಿಸುವರಾರುಸೃಷ್ಟಿಯೊಳಗೀತ ಮೀರಿದವತಾರ ಇನಕೋಟಿ ಪ್ರಭಾಕರಬಿಟ್ಟು ವೈಕುಂಠ ಇಹ್ಯಕೆ ಸಾಗಿಬೆಟ್ಟದ ಮೇಲೆ ವಾಸನಾಗಿಕೊಟ್ಟು ವರಗಳ ಮೂರು ಜಗಕೆಶೆಟ್ಟಿಯಂದದಿ ಕಾಸುಕೊಳ್ಳುವದುಷ್ಟಭ್ರಷ್ಟ ಶಿಷ್ಟರೆಲ್ಲರಇಷ್ಟದಾಯಕದಿಟ್ಟ ದೇವನ 2ಒಂದೆ ಮನದಲಿ ಸಕಲ ಸೇವಕರು ಭಯಭಕುತಿಯಿಂದಬಂದು ಹರಕೆಯ ತಂದು ನೀಡುವರು ತುಂಬರನಾರದರೊಂದಿಗಾನದಿಂ ಪಾಡಿ ಪೊಗಳುವರು ಆನಂದ ಕೋರುವರುಹೊಂದಿ ಭಜಿಸುತ ಸಪ್ತಋಷಿಗಣಬಂದು ಇಳಿವರು ಬಿಡದೆಅನುದಿನವಂದ್ಯ ನಿಗಮಾದಿಬಂಧು ಭಜಿಪರಕಂದುಗೊರಳಾದಿ ಬ್ರಹ್ಮಸುರರಿಂಗಂಧಪರಿಮಳಕುಸುಮದ್ರವ್ಯಗಳಿಂದ ಸೇವೆಯ ಗೊಂಬದೇವನ 3ಉದಯಕಾಲದಿ ಬಾಲನವತಾರ ಮಧ್ಯಾಹ್ನಕಾಲದಿಸದಮಲಾಂಗ ಯೌವನಾಕಾರಸುಸಂಧ್ಯಾಕಾಲದಿಮುದುಕನಾಗಿ ಕಾಂಬ ಮನೋಹರ ಬಹುಮಹಿಮಗಾರಪದುಮವದನ ಮದನನಯ್ಯಪದುಮವತಿಯ ಪ್ರಾಣಪ್ರಿಯಒದಗಿಬಂದ ಭಕುತಜನರನುಸುದಯದಿಂದ ಕರೆದು ಪ್ರಸಾದಮುದದಿ ನೀಡುತ ಕೃಪೆಯದೋರಿಸದಮಲಸಂಪದವನೀವನ 4ತೀರದೀತನ ಲೋಕಶೃಂಗಾರ ಏರಿ ನೋಡಲುಪಾರಗಿರಿತುದಿ ಗಾಳಿಗೋಪುರ ಮುಂದೆ ನಡೆಯಲುದಾರಿಯಲಿಕೊಳ್ಳಏಳು ವಿಸ್ತಾರ ಪರಮಪರತರತೋರುವ ಮಹ ಗುಡಿಯು ಗೋಪುರದ್ವಾರ ಚಿನ್ನದ ಕಳಸ ಬಂಗಾರಗಾರುಮಾಡದೆ ದಾಸಜನರನುತಾರತಮ್ಯದಿ ಪೊರೆಯಲೋಸುಗುಸೇರಿಧಾರುಣಿ ವೈಕುಂಠವೆನಿಸಿದಧೀರವೆಂಕಟ ಶ್ರೀಶ ರಾಮನ 5
--------------
ರಾಮದಾಸರು