ಒಟ್ಟು 4 ಕಡೆಗಳಲ್ಲಿ , 3 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತಾಯೆ ಲಕ್ಷುಮಿ ದೇವಿಯೇ | ನೀನೇ ಗತಿತಾಯೆ ಲಕ್ಷುಮಿ ದೇವಿಯೇ ಪ ಕಾಯ ಮಮತೆಯ ಕಳೆದು ಬೇಗನೆ | ತೋಯಜಾಕ್ಷನ ತೋರಿ ಪೊರೆಯುವದಾಯ ನಿನ್ನದು ತಾಯೆ ಶ್ರೀಹರಿ | ಪ್ರೀಯೆ ನಿನ್ನನು ನಮಿಸಿ ಬೇಡುವೆ ಅ.ಪ. ಗೋಪಿ ನಂದನೆ ಹೇ ದುರ್ಗೇ | ಕಠೋರೆ ಉಗ್ರೆತಾಪತ್ರಯಗಳ ವಿನಾಶೇ | ಮೋಕ್ಷ ಪ್ರದಾತೇ ||ಶ್ರೀಪತಿಯ ಪಾದಾಬ್ಜ ಮಧುಪೆ | ಪಾಪಹರ ತವ ಪತಿಯ ನಾಮವಪ್ರಾಪಿಸುತ ದಿನದಿನದಿ ಯನ್ನನು | ಕೈ ಪಿಡಿದು ಕಾಪಾಡು ದೇವಿ 1 ಭವ ವಂದಿತೇ | ತ್ರಿಜಗನ್ಮಾತೆಹರಿಗೆ ಸಮಾಸಮವ್ಯಾಪ್ತೆ | ಹರಿಯಂಕ ಸಂಸ್ಥೇ ||ಅರಿದರಾಂಕುಶ ಪರಶು ಶಕ್ತಿ | ಧರಿಸಿ ಮೆರೆಯುವ ಹರಿಯ ರಾಣಿಯೆವಾರೆ ನೋಟದಿ ಬ್ರಹ್ಮ ಭವರಿಗೆ | ವರ ಸುಪದವಿಗಳಿತ್ತು ಪೊರೆವಳೆ 2 ಭವ ಚಾರು ಚರಣವ ತೋರು ಎನಗೆ 3
--------------
ಗುರುಗೋವಿಂದವಿಠಲರು
ಪೂಜಾ ಮಾಡೋಣ ಬಾರೆ ಶ್ರೀ ಲಕುಮಿಯ ಪೂಜಾ ಮಾಡೋಣ ಬಾರೆ ಪ. ವನಜನ ನೇತ್ರೆಯ ತ್ರಿಜಗನ್ಮಾತೆ ಪ್ರಖ್ಯಾತೆ ಅ.ಪ. ಅರ್ಥಿಯಿಂದಲಿ ಇಟ್ಟು ಚಿತ್ತದೊಲ್ಲಭನ ಸ್ತುತಿಸಿ ಬೇಡಿಕೊಂಡು ಮತ್ತೆ ನಿಮಗೆ ಕರವೆತ್ತಿ ಪ್ರಾರ್ಥಿಸುತಲಿ 1 ಗಂಧಪುಷ್ಪ ವಸ್ತ್ರಾಭರಣ ಆನಂದ ದೀಪಗಳಿಂದ ಇಂದು ನಾ ಪೂಜಿಪೆ ಮಂದಿರದೊಳು ಆನಂದಭರಿತಳಾಗಿ ಬಾ 2 ರುಕ್ಮೀಶವಿಠಲನ ಪಟ್ಟದ ರಾಣಿ ವಕ್ಷಸ್ಥಳದಲಿನಿಂತು ನಲಿಯುತ ಬಾ ಭಕ್ತಜನರ ಮನೋಭೀಷ್ಟವ ಸಲಿಸುತ ಬಾ 3
--------------
ಗುಂಡಮ್ಮ
ಬಿಜಯಂಗೈವುದು ತ್ರಿಜಗನ್ಮಾತೆಯೆ ದ್ವಿಜರಾಜಾನನೆಯೇ ಅಜರಾಜಾತ್ಮಜಸುತನರಸಿಯೇ ಶ್ರೀ ಜಾನಕಿಯೇ ಪ. ಪವನಜ ಗರುಡರ ಬಗೆಯಿಂ ನಿನ್ನಂ ಸೇವಿಸಲಾನರಿಯೆ ಕವಿಕುಲ ಚೂಡಾಮಣಿಯೋಲ್ ನಿನ್ನನು ಭಾವಿಸಲೆನಗಳವೇ 1 ನೆಲದೊಳು ನಿನ್ನೀ ನೆಲೆಯಂ ತಿಳಿಯಲ್ ಬಲುಮೆಯದಾರೊಳು ಪೇಳ್ ಚಲದಿಂ ಪೇಳ್ವರು ಕೆಲವರು ನಿನ್ನಂ ಚಂಚಲೆಯನುವೋಲ್ 2 ಎಂತಾದರು ಸುಸ್ವಾಂತದಿ ನಿನ್ನೀ ಸಂತಾನದೊಳನಿಶಂ ಶಾಂತ್ಯೌದಾರ್ಯ ಗುಣಾನ್ವಿತೆ ನೀ ಮೆರೆ ಸಂತತಮುಂ ನಲವಿಂ3 ಎಣಿಸಲ್ಕರಿಯದ ಋಣತಾಪದೊಳಕಟಾ ಹೆಣಗಾಡುತಲಿರುವೀ ಅಣುಗರ ನೋಡಿ ಕ್ಷಣದೊಳೂ ನಿನ್ನ ಘನತೆ ತೋರಿಸು ದೇವಿ 4 ತಳುವುದಿದೇತಕೆ ನಳಿನÀದಳಂಬಕೆ ಗಳಿಲನೆ ಬಾರೆಂಬೆ ಜಲಜಲೋಚನ ಶೇಷಗಿರೀಶನ ಲಲನಾಮಣಿ ಜಗದಂಬೆ 5
--------------
ನಂಜನಗೂಡು ತಿರುಮಲಾಂಬಾ
ಭಜಿಸಬಾರದೆ ಹರಿಯ [ಮನವೇ] ಭಜಕರಕ್ಷಕ ದೊರೆಯ ಪ. ಗಜಪತಿ ವರದನ ತ್ರಿಜಗಜ್ಜನಕನ ಅಜಮಿಳ ವರದನ ವಿಜಯನ ಸಖನಾಅ.ಪ. ಕಾಮಕ್ರೋಧವ ಸುಟ್ಟು [ಶ್ರೀರಾಮನೋಳ್ ಮನನೆಟ್ಟು] ನೇಮಧರ್ಮದಿ ಬುದ್ಧಿಯನಿಟ್ಟು ತಾಮಸ ಬುದ್ಧಿಯ ಬಿಟ್ಟು 1 ಸತ್ಯಮಾರ್ಗವ ಬಿಡದೆ ದುಷ್ಕøತ್ಯದೊಳ್ ಮನಗೊಡದೆ ಸತ್ವಗುಣಭರಿತ ಜರಾಮೃತ್ಯುರಹಿತ ನಿತ್ಯತೃಪ್ತನನೀಂ 2 ನ್ಮಂದಿರದೊಳಗಾನಂದದಿ ನೆಲಸಿರುವಂದವ ಮರೆಯದಿನ್ನು 3 ಪರಮಾಚಾರ್ಯರುಗಳ ನಾಮಸ್ಮರಣೆಯ ಸೌಭಾಗ್ಯದಲಿ ವರಗುರುಗಳ ಘನ ಕರುಣಾಕಟಾಕ್ಷದಿ ಸಿರಿವರನ ನೆಲೆಯರಿವತನಕ 4 ವಾತಾತ್ಮಜ ಸಂಸೇವಿತೆಯ ಭೂಜಾತೆಯ ಜನಕಸುತೆಯ ಸೀತೆಯ ನಿಮಿಕುಲಪೂತೆಯ ತ್ರಿಜಗನ್ಮಾತೆಯ ಶುಭಗುಣಯುತೆಯ [ನಿಗೆ] 5 ತರುಣಿ ಕುಲಾಂಬುಧಿ ಸೋಮರಾಮ ತ್ರಿಭುವನ ಮೋಹನ ಶ್ಯಾಮ ವರದ ಶೇಷಾಚಲಧಾಮನ ಸತ್ಯವಿಕ್ರಮ ರಘುರಾಮನ ನೀ 6
--------------
ನಂಜನಗೂಡು ತಿರುಮಲಾಂಬಾ