ಒಟ್ಟು 21 ಕಡೆಗಳಲ್ಲಿ , 12 ದಾಸರು , 21 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಜಯಜನನೀ ಶಾರದೆ ಜನನಮೃತಿಭಯಭಿದೆ ಪ. ನಯವಿದೆ ತ್ರಿಜಗನ್ಮಯೆ ವೀಣಾವಿನೋದೆ ಅ.ಪ. ಭಕ್ತಿಜ್ಞಾನ ಮಾನದೆ ಭಗವತ್ಪ್ರಾಪ್ತ ಪ್ರಸಾದೆ ಮುಕ್ತಿಶಕ್ತಿಪ್ರದೆ ನಿಜ ಭೃತ್ಯವತ್ಸಲೆ ಪ್ರಬುದ್ಧೆ 1 ವೇದಾರ್ಥತತ್ವಪ್ರಬೋಧೆ ಆದಿತೇಯಾನತಪದೆ ಶ್ರೀಧರೆ ಸದಾನಂದೆ ಸಾಧು ಸೌಭಾಗ್ಯನಿಧೆ 2 ಅನಘ ಲಕ್ಷುಮಿನಾರಾಯಣನ ಭಕ್ತ ಪ್ರಹ್ಲಾದ ಸನಕನುತೆ ಸನ್ನುತೆ ಘನಪಾಪಾಪಹ್ನುತೆ 3
--------------
ತುಪಾಕಿ ವೆಂಕಟರಮಣಾಚಾರ್ಯ
ಜಯಜಯ ಜಲದುರ್ಗೆ ತ್ರಿಜಗನ್ಮಯೆ ಸದ್ಗುಣವರ್ಗೆ ಪ. ದಯಾಸಾಗರೆ ದಾರಿದ್ರ್ಯದುಃಖ ಭವ- ಭಯನಾಶಿನಿ ಮಣಿಮಯಕೃತಭೂಷಿಣಿಅ.ಪ. ಗಜವದನನ ಮಾತೆ ಸುಜನ- ವ್ರಜಸತ್ಫಲದಾತೆ ಕುಜನಭಂಜನಿ ನಿರಂಜನಿ ಶೈಲಾ- ತ್ಮಜೆ ಮಹೋಜೆ ನೀರಜದಳಲೋಚನಿ1 ಇಂದ್ರಾದ್ಯಮರನುತೆ ಪೂರ್ಣಾ ನಂದೆ ನಂದಜಾತೆ ಚಂದ್ರಾಸ್ಯೇ ಯೋಗಿವೃಂದವಂದಿತೆ ಮೃ- ಗೇಂದ್ರವಾಹಿನಿ ಮದಾಂಧರಿಪು ಮಥನಿ2 ಅಂಗಜಶತರೂಪೆ ಸದಯಾ- ಪಾಂಗೆ ಸುಪ್ರತಾಪೆ ಗಂಗಾಧರವಾಮಾಂಗಶೋಭೆ ಸಾ- ರಂಗನೇತ್ರೆ ಶ್ರೀರಂಗಸಹೋದರಿ3 ದಾಸಜನರ ಪೋಷೆ ರವಿಸಂ- ವಾಸುದೇವನ ಸ್ಮರಣಾಸಕ್ತಿಯ ಕೊಡು ಭಾಸುರಜ್ಞಾನಪ್ರಕಾಶವಿಲಾಸಿನಿ4 ಸೌಖ್ಯವು ಭಕ್ತರ್ಗೆ ಸಲಿಸಲು ಸೌಖ್ಯವು ನೀ ಭರ್ಗೆ ಲಕ್ಕುಮಿನಾರಾಯಣನ ಭಗಿನಿ ನಿ- ರ್ದುಃಖಪ್ರದಕಟಿಲಾಖ್ಯಪುರೇಶ್ವರಿ5
--------------
ತುಪಾಕಿ ವೆಂಕಟರಮಣಾಚಾರ್ಯ
ಜಾನಕೀಮನೋಹರ ಪ್ರಭೋ ಜರಾಮರಣವಿದೂರ ರಾಮ ಪ ನಾನಾವತಾರ ಚಿದಾ ನಂದಾತ್ಮ ಶರೀರ ಅ.ಪ ಧರ್ಮಾತ್ಮ ಸತ್ಯಸಂಧ ದಿನಕರ ವಂಶಾಬ್ಧಿಚಂದ್ರ 1 ಶಾಶ್ವತ ತ್ರಿಜಗನ್ಮೋಹನ 2 ಶಿವಚಾಪಖಂಡನ ಆ ಶ್ರಿತಲೋಕ ಮಂಡನ 3 ರಾವಣಾದಿ ದನುಜ ಮಥನ ದೇವಪರಾತ್ಮರ ರಘುವರ 4 ತಾಮಸಗುಣ ವಿರಹಿತ ಗುರು ರಾಮವಿಠಲ ನಮೋ ನಮೋ 5
--------------
ಗುರುರಾಮವಿಠಲ
ತಾಯೆ ಲಕ್ಷುಮಿ ದೇವಿಯೇ | ನೀನೇ ಗತಿತಾಯೆ ಲಕ್ಷುಮಿ ದೇವಿಯೇ ಪ ಕಾಯ ಮಮತೆಯ ಕಳೆದು ಬೇಗನೆ | ತೋಯಜಾಕ್ಷನ ತೋರಿ ಪೊರೆಯುವದಾಯ ನಿನ್ನದು ತಾಯೆ ಶ್ರೀಹರಿ | ಪ್ರೀಯೆ ನಿನ್ನನು ನಮಿಸಿ ಬೇಡುವೆ ಅ.ಪ. ಗೋಪಿ ನಂದನೆ ಹೇ ದುರ್ಗೇ | ಕಠೋರೆ ಉಗ್ರೆತಾಪತ್ರಯಗಳ ವಿನಾಶೇ | ಮೋಕ್ಷ ಪ್ರದಾತೇ ||ಶ್ರೀಪತಿಯ ಪಾದಾಬ್ಜ ಮಧುಪೆ | ಪಾಪಹರ ತವ ಪತಿಯ ನಾಮವಪ್ರಾಪಿಸುತ ದಿನದಿನದಿ ಯನ್ನನು | ಕೈ ಪಿಡಿದು ಕಾಪಾಡು ದೇವಿ 1 ಭವ ವಂದಿತೇ | ತ್ರಿಜಗನ್ಮಾತೆಹರಿಗೆ ಸಮಾಸಮವ್ಯಾಪ್ತೆ | ಹರಿಯಂಕ ಸಂಸ್ಥೇ ||ಅರಿದರಾಂಕುಶ ಪರಶು ಶಕ್ತಿ | ಧರಿಸಿ ಮೆರೆಯುವ ಹರಿಯ ರಾಣಿಯೆವಾರೆ ನೋಟದಿ ಬ್ರಹ್ಮ ಭವರಿಗೆ | ವರ ಸುಪದವಿಗಳಿತ್ತು ಪೊರೆವಳೆ 2 ಭವ ಚಾರು ಚರಣವ ತೋರು ಎನಗೆ 3
--------------
ಗುರುಗೋವಿಂದವಿಠಲರು
ದೋಷ ರಾಸಿಯಳಿದು ಪ ಭಾಸುರ ಗುಣಗಣ ಭವ್ಯ ಶರೀರ ಅ.ಪ ಚಿತ್ತ ನಿನ್ನ ಪದ ಸೇವೆಯೊಳಿರಲಿ-ಚಿಂತೆ ಇತರ ಬಿಡಲಿ ಅಂತರಂಗದಲ್ಲಾನಂದಿಸಲಿ-ಅಹಂಕೃತಿಯನ್ನೆ ಬಿಡಲಿ ಪಂಕಜ ಪಂಥವ ಪಾಲಿಸೊ ಪರಮ ಪುರುಷ ಹರಿ 1 ಅರಿಷಡ್ವರ್ಗಗಳಟವಿಯ ಖಂಡಿಸು-ಆನಂದದಲಿರಿಸು ದುರ್ಮತಿಯನೆ ಬಿಡಿಸು ಸನ್ನುತ ನಿರುತವು ನಿಲ್ಲಿಸೋ ನೀರಜಾಕ್ಷ ಹರಿ2 ತ್ರಿಜಗನ್ಮೋಹನಾಕಾರ ತ್ರಿ-ಗುಣಾತೀತ ತೀರ್ಥಪಾದ ಭಜಕರ ಪಾವನ ಭವನುತ ಚರಣ-ಋಜಗಣನುತಾಭರಣ ವಿದಾರಣ ಕೋವಿದನುತ ಹರಿ 3
--------------
ವಿಜಯದಾಸ
ನೋಡು ನೋಡು ನಾರೀಮಣಿಯೆ ಪ ನೋಡು ನೋಡು ನಿನ್ನಾ ಕಣ್ಮನ ದಣಿಯಾ ಅ.ಪ. ಮುದ್ದು ಸೂಸುವ ಸಲೆ ಮುಗುಳ್ನಗೆ ಮೊಗವಾ ತಿದ್ದಿದ ಕಸ್ತೂರಿ ತಿಲಕದ ಫಣಿಯಾ 1 ಸಾರ ಗಂಭೀರ ಶೃಂಗಾರ ವಿಹಾರಾ ಚಾರು ಸೌಂದರ್ಯವೈಯ್ಯಾರ ಸುಗುಣಿಯಾ 2 ಶ್ರೀದವಿಠ್ಠಲ ಸಾಕ್ಷಾತ್ತ್ರಿಜಗನ್ಮಯಾ ಇಂದ್ರಶರಾ ಜಗನ್ಮೋಹನ ಖಣಿಯಾ 3
--------------
ಶ್ರೀದವಿಠಲರು
ಪಾಲಯ ಗಂಗಾಧರಪ್ರಿಯ ರಮಣಿ ಬಾಲಾಂಬಿಕೆ ಫಣಿವೇಣಿ ಕಲ್ಯಾಣಿ ಪ ಶ್ರೀಲಲಿತೆ ವರದಾಯಕ ಮಹಿತೆ ಬಾಲಗೋಪಾಲ ಸೋದರಿ ಶುಭಚರಿತೆ 1 ದೇವಿ ಭವಾನಿ ಶಿವೆ ಕಾತ್ಯಾಯಿನಿ ಪಾವನಿ ಭಾಮಿನಿ ತ್ರಿಜಗನ್ಮೋಹಿನಿ 2 ಮಂಗಳದಾಯಕಿ ಶಂಕರನಾಯಕಿ ಮಾಂಗಿರಿರಂಗ ಕೃಪಾಂಬರದಾಯಕಿ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಪೂಜಾ ಮಾಡೋಣ ಬಾರೆ ಶ್ರೀ ಲಕುಮಿಯ ಪೂಜಾ ಮಾಡೋಣ ಬಾರೆ ಪ. ವನಜನ ನೇತ್ರೆಯ ತ್ರಿಜಗನ್ಮಾತೆ ಪ್ರಖ್ಯಾತೆ ಅ.ಪ. ಅರ್ಥಿಯಿಂದಲಿ ಇಟ್ಟು ಚಿತ್ತದೊಲ್ಲಭನ ಸ್ತುತಿಸಿ ಬೇಡಿಕೊಂಡು ಮತ್ತೆ ನಿಮಗೆ ಕರವೆತ್ತಿ ಪ್ರಾರ್ಥಿಸುತಲಿ 1 ಗಂಧಪುಷ್ಪ ವಸ್ತ್ರಾಭರಣ ಆನಂದ ದೀಪಗಳಿಂದ ಇಂದು ನಾ ಪೂಜಿಪೆ ಮಂದಿರದೊಳು ಆನಂದಭರಿತಳಾಗಿ ಬಾ 2 ರುಕ್ಮೀಶವಿಠಲನ ಪಟ್ಟದ ರಾಣಿ ವಕ್ಷಸ್ಥಳದಲಿನಿಂತು ನಲಿಯುತ ಬಾ ಭಕ್ತಜನರ ಮನೋಭೀಷ್ಟವ ಸಲಿಸುತ ಬಾ 3
--------------
ಗುಂಡಮ್ಮ
ಬಂದನು ಕೃಷ್ಣ ಗೋವಿಂದ ಮುಕುಂದ ಭವ ಬಂಧನ ಪರಿಹಾರ ಶೌರಿ ಪ ಸಾರಸಪತ್ರನೇತ್ರ ಅನಘ ಘನನೀರದÀ ನಿಭಗಾತ್ರ ಶಕಟಾಂತಕ ಧೀರ ಕರುಣಾ ಪಾತ್ರ ಮುರಹರ ಜಂಭಾರಿಸನ್ನುತ ಗೋತ್ರಾ ಧಾರಿ ಮುನಿಜನ ಮಂದಾರ ಗೋಪಾಲ ಘನ ಸಾರ ಶೋಭಿತ ಯದುವೀರ ನಾರಾಯಣ 1 ಪಂಡಿತ ಕುಸುಮಪಾಣೆ ಜನಕ ಶ್ರೀ ಅಂಡಜಗಮನ ಗಾನಲೋಲನೆ ತಂಡ ರಕ್ಷಕ ಪುರಾಣಪುರುಷ ಕೋ ದಂಡ ಪಾಣಿ ಧುರೀಣ ಕುಂಡಲಿಶಯನ ಭೂಮಂಡಲಾಧಿಪ ಬಲೋ- ದ್ದಂಡ ಪರಾಕ್ರಮ ಚಂಡಮಹಿಮ ರಾಮ 2 ವೇದವೇದ್ಯ ಸುನಾಮಾ ತ್ರಿಜಗನ್ನುತ ಯಾದವ ಸಾರ್ವಭೌಮ ಪರಮಾತ್ಮ ಆದಿತೇಯಾಬ್ಧಿ ಸೋಮ ರಮೇಶಾಂಬುಜೋದರ ಸುಗುಣಧಾಮ ಮಾಧವ ನರಮೃಗ ಪ್ರಹ್ಲಾದ ವರದ ಸನÀಕಾದಿ ವಂದಿತ ಚರಣ 3
--------------
ಹೆನ್ನೆರಂಗದಾಸರು
ಬಿಜಯಂಗೈವುದು ತ್ರಿಜಗನ್ಮಾತೆಯೆ ದ್ವಿಜರಾಜಾನನೆಯೇ ಅಜರಾಜಾತ್ಮಜಸುತನರಸಿಯೇ ಶ್ರೀ ಜಾನಕಿಯೇ ಪ. ಪವನಜ ಗರುಡರ ಬಗೆಯಿಂ ನಿನ್ನಂ ಸೇವಿಸಲಾನರಿಯೆ ಕವಿಕುಲ ಚೂಡಾಮಣಿಯೋಲ್ ನಿನ್ನನು ಭಾವಿಸಲೆನಗಳವೇ 1 ನೆಲದೊಳು ನಿನ್ನೀ ನೆಲೆಯಂ ತಿಳಿಯಲ್ ಬಲುಮೆಯದಾರೊಳು ಪೇಳ್ ಚಲದಿಂ ಪೇಳ್ವರು ಕೆಲವರು ನಿನ್ನಂ ಚಂಚಲೆಯನುವೋಲ್ 2 ಎಂತಾದರು ಸುಸ್ವಾಂತದಿ ನಿನ್ನೀ ಸಂತಾನದೊಳನಿಶಂ ಶಾಂತ್ಯೌದಾರ್ಯ ಗುಣಾನ್ವಿತೆ ನೀ ಮೆರೆ ಸಂತತಮುಂ ನಲವಿಂ3 ಎಣಿಸಲ್ಕರಿಯದ ಋಣತಾಪದೊಳಕಟಾ ಹೆಣಗಾಡುತಲಿರುವೀ ಅಣುಗರ ನೋಡಿ ಕ್ಷಣದೊಳೂ ನಿನ್ನ ಘನತೆ ತೋರಿಸು ದೇವಿ 4 ತಳುವುದಿದೇತಕೆ ನಳಿನÀದಳಂಬಕೆ ಗಳಿಲನೆ ಬಾರೆಂಬೆ ಜಲಜಲೋಚನ ಶೇಷಗಿರೀಶನ ಲಲನಾಮಣಿ ಜಗದಂಬೆ 5
--------------
ನಂಜನಗೂಡು ತಿರುಮಲಾಂಬಾ
ಭಜ ಭಜ ಮಾನಸ ಅಜಸುರ ನಮಿತಂ ಭಜ ಶಯನಂ ತ್ರಿಜಗನ್ನಾಥಂ ಪ ಪಾದ ಸರೋಜಂ ಭಜನಾರಾಧನ ನಂದಿತ ಭೂಜಂ ಅ.ಪ ವೇಣು ವಿನೋದಂ ಪ್ರಣವಾಕಾರಂ ಭ್ರೂಣಪಾಲನ ತ್ರಾಣಸಮೀರಂ 1 ವೀಣಾರವ ಸಂಪ್ರೀತಮುದಾರಂ ವಾಣಿವಿನುತ ಮಾಂಗಿರಿರಂಗಾಖ್ಯಂ 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಭಜಿಸಬಾರದೆ ಹರಿಯ [ಮನವೇ] ಭಜಕರಕ್ಷಕ ದೊರೆಯ ಪ. ಗಜಪತಿ ವರದನ ತ್ರಿಜಗಜ್ಜನಕನ ಅಜಮಿಳ ವರದನ ವಿಜಯನ ಸಖನಾಅ.ಪ. ಕಾಮಕ್ರೋಧವ ಸುಟ್ಟು [ಶ್ರೀರಾಮನೋಳ್ ಮನನೆಟ್ಟು] ನೇಮಧರ್ಮದಿ ಬುದ್ಧಿಯನಿಟ್ಟು ತಾಮಸ ಬುದ್ಧಿಯ ಬಿಟ್ಟು 1 ಸತ್ಯಮಾರ್ಗವ ಬಿಡದೆ ದುಷ್ಕøತ್ಯದೊಳ್ ಮನಗೊಡದೆ ಸತ್ವಗುಣಭರಿತ ಜರಾಮೃತ್ಯುರಹಿತ ನಿತ್ಯತೃಪ್ತನನೀಂ 2 ನ್ಮಂದಿರದೊಳಗಾನಂದದಿ ನೆಲಸಿರುವಂದವ ಮರೆಯದಿನ್ನು 3 ಪರಮಾಚಾರ್ಯರುಗಳ ನಾಮಸ್ಮರಣೆಯ ಸೌಭಾಗ್ಯದಲಿ ವರಗುರುಗಳ ಘನ ಕರುಣಾಕಟಾಕ್ಷದಿ ಸಿರಿವರನ ನೆಲೆಯರಿವತನಕ 4 ವಾತಾತ್ಮಜ ಸಂಸೇವಿತೆಯ ಭೂಜಾತೆಯ ಜನಕಸುತೆಯ ಸೀತೆಯ ನಿಮಿಕುಲಪೂತೆಯ ತ್ರಿಜಗನ್ಮಾತೆಯ ಶುಭಗುಣಯುತೆಯ [ನಿಗೆ] 5 ತರುಣಿ ಕುಲಾಂಬುಧಿ ಸೋಮರಾಮ ತ್ರಿಭುವನ ಮೋಹನ ಶ್ಯಾಮ ವರದ ಶೇಷಾಚಲಧಾಮನ ಸತ್ಯವಿಕ್ರಮ ರಘುರಾಮನ ನೀ 6
--------------
ನಂಜನಗೂಡು ತಿರುಮಲಾಂಬಾ
ಭಾರತೀಶನ ಸೇರಿರೋ ಭವವಾರಿಧಿ ದಾಟುವರೆ ಸಾರ ತೋರುವ ಪ. ತುಂಗ ವಿಷಯಾಂಗಜನಿತೋತ್ತುಂಗ ತರಂಗದೊಳು ಅಂಗಜಾತ ತಿಮಿಂಗಿಲನು ತಾನುಂಗುವ ನಿಮಿಷದೊಳು ಮಂಗಳಾತ್ಮಕ ಮಾರುತನ ಸದಪಾಂಗಲೇಶವನೈದೆ ಸುಲಭದಿ ರಂಗನಿರವನು ತೋರಿ ಸಲಹುವ 1 ತ್ರೇತೆಯೊಳಗಿನ ಜಾತನಿಗೆ ರಘುನಾಥನ ತೋರಿಸಿದ ಕಾತುರದ ಪುರಹೂತನನು ಯದುನಾಥನಿಗೊಪ್ಪಿಸಿದಾ ಭೂತನಾಥನ ವಾಕ್ಯಬಲದಿಂದಾತ್ಮ ಜೀರಿಗೈಕ್ಯಪೇಳುವ ಪಾತಕಿಗಳನು ಗೆದ್ದು ತ್ರಿಜಗನ್ನಾಥ ಮುತ್ತಿದನೆಂದು ಮೆರಸಿದಿ 2 ಸೂತ್ರನಾಮಕ ಪ್ರಣವನಾಯಕ ಕ್ಷತ್ರಪುರದೊಳಿರುವಾ ಶತ್ರುತಾಪನ ಶೇಷಗಿರಿ ಪತಿಪುತ್ರನೆನಿಸಿ ಮೆರೆವಾ ಚಿತ್ರಕರ್ಮ ಚಿರಂತನಾಣುಗ ಪುತ್ರಮಿತ್ರಕಳತ್ರ ಭಾಗ್ಯದ ನೇತ್ರ ವಿಷಯ ಪರತ್ರ ರಕ್ಷಕ ಧಾತ್ರಪದಸತ್ಪಾತ್ರನೆನಿಸುವ 3
--------------
ತುಪಾಕಿ ವೆಂಕಟರಮಣಾಚಾರ್ಯ
ಮೋಹನ ನವ ಭವನ ಪರೇಶನ ಪ ದುರಿತ ಭವ ಭಯ ವಿಮೋಚನನ ನೇಹದ ಗೇಹವು ಸಕಲ ಭುವನ ಸನ್ ಅ.ಪ. ಮಣಿ ಸ್ತಂಭಗಳು ಲಲಿತಕಾಂತಿಗಳ ಬೀರುತಲಿರ್ಪ 1 ನಿರುಪಮಾದ್ಭುತ ಶರೀರವಾಂತಿಹ ಉರಗಾಧಿಪನಿರವು ಕಾಣುವ ತ್ರಿಜಗನ್ 2 ಭೋಗಿರಾಜಶಯನೆ ವರಮೇಘಕಾಯನೆನಿಸಿ ಯೋಗಿವಿನುತ ನಿಜ ಲೀಲೆಯ ಪಾರ್ಥನಿ ಗಾಗಿ ತೋರಿಸಿದ ಶ್ರೀ ಕರಿಗಿರೀಶನ 3
--------------
ವರಾವಾಣಿರಾಮರಾಯದಾಸರು
ವೇಶ ನಿಜ ವಿಲಾಸ ಪ. ಭಾಸುರ ಮಣಿಗಣಭೂಷಣ ದಿತಿಸುತ- ಭೀಷಣ ಸಜ್ಜನಪೋಷಣ ಕಪಿವರ ಅ.ಪ. ಕಂಜಸಖೋಪಮ ಕಮಲಾನನಾನತ ಸಂಜೀವನ ಹನುಮಾ ಮಂಜುಳ ವಜ್ರಶರೀರ ವೀರ ಹರಿ- ರಂಜನಾಂಜನಾಸುತ ಸದ್ಗುಣಯುತ 1 ನಿಗಮಾಗಮ ಪಾರಂಗತ ರಾಮಾ- ನುಗ ಪಾವನರೂಪ ಭಗವಜ್ಜನ ಭಾಗ್ಯೋದಯ ಭಾರತಿ ದೃಗುಚಕೋರಚಂದ್ರಮ ತ್ರಿಗುಣಾತ್ಮಕ 2 ಅಜಪದನಿಯತ ಭೂಭುಜಪತಿ ಪಾಂಡುತ- ನುಜ ಸುರವ್ರಜವಿನುತ ಕುಜನಧ್ವಾಂತನೀರಜಸಖ ಗರುಡ- ಧ್ವಜಶರಣ್ಯ ಶಾಶ್ವತ ತ್ರಿಜಗನ್ಮಯ 3 ವರಕಾರ್ಕಳಪುರ ಗುರು ವೆಂಕಟಪತಿ ಚರಣಾಗ್ರೇ ವಿರಾಜ ಶರಣಭರಣಯುತ ಕರುಣಾಕರ 4
--------------
ತುಪಾಕಿ ವೆಂಕಟರಮಣಾಚಾರ್ಯ