ಒಟ್ಟು 6 ಕಡೆಗಳಲ್ಲಿ , 5 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ರಂಗ ನಿನ್ನಯ ಮುಖ ತೋರಯ್ಯ ಪ ಅರ್ಧರಾತ್ರಿಯಲ್ಲವತರಿಸಿದ್ಯೊ ಹೋಗಿ ಮುದ್ದು ಗೋಪಿಯ ಸುತನೆನಿಸಿದ್ಯೊ ಭದ್ರದೇವಿಯರ ನೀ ಕಳಿಸಿದ್ಯೊ ಬಂ ದಿದ್ದ ಪೂತಣಿಯ ಸಂಹರಿಸಿದ್ಯೊ 1 ವತ್ಸಕಾಯುತಲ್ಹೋಗಿ ವನದೊಳು ಬಂದ ಕಿಚ್ಚು ನುಂಗಿದೆ ನಿನ್ವದನದೊಳು ಸ್ವಚ್ಛಮಾಡಿದಿ ಕಾಳಿಜಲಗಳು ತೋರೆ ಕುಕ್ಷಿಯೊಳಗೆ ತ್ರಿಜಗಂಗಳು 2 ದೇವಕ್ಕಿದೇವಿ ಯಶೋದಾನೆ ವಸು ದೇವ ನಂದ ಬಲರಾಮಗೆ ಎದುರು ಬಾರೋ ಭೂದೇವಿರಮಣನೆ ಭೀಮೇಶ ಕೃಷ್ಣನೆÀ ಶ್ಯಾಮವರಣನೆ3
--------------
ಹರಪನಹಳ್ಳಿಭೀಮವ್ವ
ಪಾದುಕೆಗಳ ದಯಪಾಲಿಸು ಪರಮ ಪಾವನ ಮಹಿಮ ಸುದೇವ ಲಲಾಮ ಪ ನೀ ದಯದಿಂ ತವಪಾದ ಪಯೋಜಗ ಳಾದರದಲಿ ಕೊಡು ಹೇ ದಯಧಾಮ ಅ.ಪ. ಅಜನವ್ಯಯನಪ್ರಾಕೃತ ಮಹಿಮನು ಅಜನಪಿತನು ತನ್ನಿಚ್ಛೆಯೊಳು ಅಜಸುತ ದಶರಥ ಸುತನೆಂದೆನಿಸಿದ ತ್ರಿಜಗ ನೋಡೆ ಆಶ್ಚರ್ಯದೊಳು 1 ತುಂಗಮಹಿಮ ತವ ಮಂಗಳಕರ ಚರ ಣಂಗಳು ಈ ತ್ರಿಜಗಂಗಳ ಪಾಲಿಪುವು ಅಂಗಜಕೋಟಿ ಶುಭಾಂಗನೆ ತವಪದ ಭೃಂಗನೆನಿಸಿ ಕೃಪಾಪಾಂಗದಿ ಈಕ್ಷಿಸೊ ಮಂಗಳಕರ ರಘುಪುಂಗವ ಕರಿಗಿರಿ ರಂಗ ನೃಸಿಂಹ ಸೀತಾಂಗನೆಯರಸ 2
--------------
ವರಾವಾಣಿರಾಮರಾಯದಾಸರು
ಬಂದ ಗೋವಿಂದ ವಾರಣೇಂದ್ರನ ಬಳಿಗಾಗ ಸಿಂಧು ವೈಕುಂಠದಿಂದ ಪ ಇಂದಿರೆಯೊಡನೇನೊಂದನೂ ನುಡಿಯದೆ ನಿಂದು ಕಾದಿಹ ವಿಹಗೇಂದ್ರನ ನೋಡದೆ ಒಂದೇ ಸಡಗರದಿಂದೋಡುತೆ ನಾ ಗೇಂದ್ರಶಯನ ನಾಗೇಂದ್ರನ ಪೊರೆಯಲು 1 ಬಂಗಾರ ಮಕುಟೋತ್ತಮಾಂಗದಿ ಶೋಭಿಸೆ ಶೃಂಗಾರ ಫಣಿಯೊಳು ಮಂಗಳಕರ ತಿಲಕ ಕಂಗಳ ಕಾಂತಿ ತ್ರಿಜಗಂಗಳ ಬೆಳಗಲು ಹಿಂಗದೆ ಶಂಖ ಚಕ್ರಾಬ್ಜಂಗಳು ಕರದಲ್ಲಿ 2 ಅಂಗಜನಯ್ಯ ಶುಭಾಂಗ ಅಮರ ತ ಭವ ಭಂಗ ಸುರಕುಲೋ ತ್ತುಂಗ ರಂಗ ಉತ್ತುಂಗ ಮಹಿಮ ಮಾ ತಂಗ ಗಿರಿಯ ನರಸಿಂಗನು ಬೇಗದಿ 3
--------------
ವರಾವಾಣಿರಾಮರಾಯದಾಸರು
ಮಂಗಲಂ ಜಯಮಂಗಲಂತ್ರಿಜಗಂಗಳ ಪೊರೆವ ಶ್ರೀಮೂಕಾಂಬೆಗೆ ಪ ಗೌರಿಗೆ ಗುಹಜನನಿಗೆ ಗಿರಿಜಾತೆಗೆಧೀರಮಹಿಷ ದೈತ್ಯಮರ್ದಿನಿಗೆಕಾರುಣ್ಯನಿಧಿಗೆ ಕಾಮಿತಫಲದಾತೆಗೆನಾರದನುತೆಗೆ ನಾರಾಯಣಿಗೆ 1 ಶರದಿಂದುಮುಖಿಗೆ ಶಂಕರಿಗೆ ಶರ್ವಾಣಿಗೆದುರಿತ ದಾರಿದ್ರ್ಯಹರ್ತೆಗೆ ದುರ್ಗಿಗೆಪರಮೇಶ್ವರಿಗೆ ಪಾವನಚರಿತೆಗೆ ಶುಭಕರಿಗೆ ಸಮಸ್ತಮಂತ್ರೇಶ್ವರಿಗೆ 2 ರಾಜಶೇಖರಿಗೆ ರಾಜೀವನೇತ್ರಗೆ ರಕ್ತಬೀಜ ಶಾಸಿನಿಗೆ ಭುವನಮಾತೆಗೆತೇಜೋಮಯಿಗೆ ತರಣಿಕೋಟಿ ಭಾಷೆಗೆಶ್ರೀ ಜನಾರ್ದನನ ಸಹೋದರಿಗೆ 3 ಕಾಳಿಗೆ ಕಾಮರೂಪಿಣಿಗೆ ಕೌಮಾರಿಗೆಕಾಳರಾತ್ರಿಗೆ ಕಾತ್ಯಾಯನಿಗೆವ್ಯಾಳಭೂಷಿಣಿಗೆ ಯೋಗಿನಿಗೆ ರುದ್ರಾಣಿಗೆಭಾಳನೇತ್ರೆಗೆ ಭಯಹಾರಿಣಿಗೆ4 ಚಂಡಿಗೆ ಚಕ್ರಪಾಣಿಗೆ ಚಾತುರ್ಭುಜೆಗೆಮುಂಡಿಗೆ ಧೂಮ್ರಲೋಚನಹತ್ರ್ರೆಗೆಚಂಡಮುಂಡಾಸುರರಸುರಣರಂಗದಿದಿಂಡುದರಿಂದ ಸರ್ವಮಂಗಲೆಗೆ5
--------------
ಕೆಳದಿ ವೆಂಕಣ್ಣ ಕವಿ
ಸೇವೆ ಮಾಳ್ಪೆ ನಾರಾಯಣಈವುದಯ್ಯ ನಿನ್ನ ಚರಣ ಪ ಸುರಮುನಿಗಳಿಗಿದು ದುರ್ಲಭಸಿರಿದೇವಿಗೆ ಮಾತ್ರ ಸುಲಭಕರುಣಿಸು ಹೇ ಕಮಲನಾಭಇರದೆ ಭೌವ್ಯ ನಿನ್ನ ಚರಣ 1 ತ್ರಿಜಗಂಗಳ ಗೆಲ್ದ ಚರಣಭಜಕ ಗುಹಕಗೊಲಿದ ಚರಣರಜತ ನದಿಯ ಹೆತ್ತ ಚರಣಕಲ್ಲಹಲ್ಯೆ ಪೊರೆದ ಚರಣ2 ಕುರುನೃಪನನು ಕೆಡೆದ ಚರಣಉರಗ ಕಾಳಿ ಹಣಿದ ಚರಣಧರೆಗೆ ಮೆರೆದ ಗದಗು ವೀರನಾರಾಯಣ ನಿನ್ನ ಚರಣ 3
--------------
ವೀರನಾರಾಯಣ
ಹಟವ ಮಾಡದಿರು ಕೇಳೆಲೊ ಮೂಢ ಪ ಕುಟಿಲವ ಬಿಡು ನೀ ಗಾಢ ಅ.ಪ. ಹರಿ ಸರ್ವೋತ್ತಮ ವಾಯು ಜೀವೋತ್ತಮ ಹರ ವೈಷ್ಣವೋತ್ತಮನೆನ್ನೊ 1 ಮಧ್ವ ಸಿದ್ಧಾಂತದ ಪದ್ಧತಿ ಬಿಡದಲೆ ಶುದ್ಧ ವೈಷ್ಣವರೊಳಾಡೊ 2 ಹರಿ ಶರಣರ ಚರಣ ಕಮಲಂಗಳಿಗೆ ಗರುವಪಡದೆ ನೀ ಬೀಳೊ 3 ಸಂತತದಲಿ ಶ್ರೀಕಾಂತನ ಗುಣಗಳ ಚಿಂತನೆ ಮಾಡುತ ಬಾಳೊ 4 ಮಂಗಳಾಂಗ ತ್ರಿಜಗಂಗಳ ಪೊರೆವವ ರಂಗೇಶವಿಠಲನೆನ್ನೊ 5 ನೆಲವಿತ್ತ ದಯವಂತ ಶ್ರೀಕಾಂತ 3
--------------
ರಂಗೇಶವಿಠಲದಾಸರು