ಒಟ್ಟು 8 ಕಡೆಗಳಲ್ಲಿ , 3 ದಾಸರು , 8 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗೌರೀಶ ಮೃತ್ಯುಂಜಯನುತ ಪಾಲಯ ಗೌರೀಶ ಮೃತ್ಯುಂಜಯ ಪ ಸುಮಶರನಾಶ ಸುಮನರಪೋಷ ಶಮೆಶಾಂತಿದಯಭೂತೇಶ 1 ಶಂಕರ ಶಶಿಧರ ಕಿಂಕರ ಪ್ರಿಯಕರ ಶಂಕರಿಮನೋಹರ 2 ಉಮೆ ಪ್ರಿಯನಾಥ ಅಮಿತವರದಾತ ಅಮರಾದಿಸುರಾರ್ಚಿತ 3 ವರಮಹಲಿಂಗ ಪರಿಭವಭಂಗ ಪರತರ ಪಾವನಾಂಗ 4 ಗಜಚರ್ಮಾಂಬರ ಭುಜಗಾಲಂಕಾರ ಸುಜನಾತ್ಮ ಸುಖಂಕರ 5 ಪುರತ್ರಯ ಸಂಹರ ಪರಿಪಕ್ವರಾಧಾರ ನಿರಂಜನ ನಿರಾಕಾರ 6 ಕೆಂಡನಯನ ರುಂಡಮಾಲನೆ ಹರಣ 7 ಬೇಡುವೆನಭವ ಕಾಡದೆ ಪರಶಿವ ನೀಡು ಎನ್ನಗೆ ವರವ 8 ಭೂಮಿತ್ರಯಕೆ ಘನಸ್ವಾಮಿ ಶ್ರೀರಾಮನ ನಾಮ ಪಾಲಿಸು ಪಾವನ 9
--------------
ರಾಮದಾಸರು
ಜಯ ಜಯಾನಂದ ಕಂದ ಜಯ ನಿರ್ಗುಣ ನಿದ್ರ್ವಂದ್ವ ಧ್ರುವ ಒಳಗೆ ಹೊರಗೆ ನೀನೆ ಪೂರ್ಣ ಬೆಳಗಿ ಬೆಳಗಾಗಿಹುದ ಥಳಥಳಿಸುವ ಗುಣ ಹೊಳವು ಸುಳವು ಪಾವನ 1 ದೇವಾಧಿದೇವ ದೇವ ಭುವನತ್ರಯಕೆ ಜೀವ ಭಾವಿಕರಿಗೆ ಕಾವ ಭವನಾಶಗೈಸುವ 2 ಅಜ ಸುರವರ ಮುನೀಂದ್ರ ನಿಜಘನಸುಖಮುದ್ರ ರಾಜ ರಾಜರಾಜೇಂದ್ರ 3 ಮುನಿಜನರ ಪ್ರಾಣಪದಕ ಅನುಭವದ ನಿಜಸುಖ ಖೂನ ವಿಶ್ವತೋಮುಖ ಅಣುರೇಣು ವ್ಯಾಪಕ 4 ಮೂರು ಗುಣಕೆ ರಹಿತ ಗುರುಮೂರ್ತಿ ಸಾಕ್ಷಾತ ತರಳ ಮಹಿಪತಿದಾತ ಹೊರಿಯೊ ನೀ ಸದೋದಿತ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಧನ್ಯರಿಗನ್ಯರ ಪರಿವ್ಯೇ ದೈನ್ಯಬಿಡುವರೆ ಅವರಿಗಿರುವುದೇ ಅರಿವು ಪ ಮೇಲು ಉಪ್ಪರಿಗೆಯ ಮಾಲಿನೊಳನುದಿನ ಶೀಲಸುಂದರಿಯರ ಲೋಲರಾಗಿರುವಂಥ 1 ನೀಲಕೌಸ್ತುಭಮಣಿ ಮಾಲಾಲಂಕೃತರಾಗಿ ಕಾಲಕಾಲದಿ ಮಹಲೀಲೆಯೊಳಿರುವಂಥ 2 ಮೂರ್ಹತ್ತು ಮೂರುಕೋಟಿ ವಾರಿಜಾಸನ ಸುರರಿಂ ಮೂರ್ಹೊತ್ತು ಬಿಡದಂತೆ ಸಾರಿ ಪೂಜೆಯಗೊಂಬ 3 ಎಂಟುಐಶ್ವರ್ಯಂಗಳಂಟಿಕೊಂಡು ಬಿಡದ್ವೊ ಯ್ಕುಂಠ ಪದವಿಯೊಳು ಬಂಟರಾಗಿರುವಂಥ 4 ಲೋಕೈಕ ಶ್ರೀರಾಮ ಲೋಕತ್ರಯಕೆ ತಾನೆ ಏಕದೇವನು ಎಂಬ ಯಾಕಿಂಥ ಮದವಯ್ಯ 5
--------------
ರಾಮದಾಸರು
ನಮೋ ನಮೋ ಶಂಕರ ಉಮೆಪ್ರಿಯ ಶಶಿಧರ ಕಮಲನಾಭನ ಭಕ್ತಿಕೊಡು ಸುಖಸಾರ ಪ ಹಿಮಗಿರಿಜೇಶ ಸುಮಶರನಾಶ ಅಮಿತಮಹಿಮ ನಿಮ್ಮ ವಿಮಲ ಪಾದದಿಬೇಡ್ವೆ 1 ಕಾಲಮರ್ದನ ತ್ರಿಶೂಲಿಯೆ ಪುರತ್ರಯ ಕಾಲನೊಶವಗೈದ ಫಾಲನಯನ ಕಾಯೊ 2 ಭೂಮಿತ್ರಯಕೆ ತಾನೆ ಸ್ವಾಮಿಯೆನಿಪ ಶ್ರೀ ರಾಮ ನಾಮಾಮೃತ ಪ್ರೇಮದಿ ಕರುಣಿಸು 3
--------------
ರಾಮದಾಸರು
ಪಂಥವ್ಯಾಕೋ ಪ್ರತಿಜ್ಞೆ ಯಾಕೋ ಪ ಸಂತಸದಿ ನಿನ್ನಂತರಂಗದಿ ಕಂತುಪಿತ ನೀನೆನಲು ಸಾಕೊ ಅ.ಪ ಕೋಪವ್ಯಾಕೊ ತಾಪವ್ಯಾಕೋ ತಾಪತ್ರಯಗಳ ಲೋಪ ಸಿರಿವರ ಕಾಪಾಡೆನಲದೊಂದೆ ಸಾಕೊ 1 ಕುಂದು ಯಾಕೋ ನಿಂದೆ ಯಾಕೋ ಸಿಂಧುಶಯನಗೋವಿಂದಗರ್ಪಿ ತೆಂದು ನೋಡ್ಹೆಚ್ದಿಂದ್ಯಾಕೆ ಬೇಕೊ 2 ಕ್ಷೇತ್ರ ಯಾಕೋ ಯಾತ್ರವ್ಯಾಕೋ ಖಾತ್ರಿಯಿಂದ ಜಗತ್ರಯಕೆ ಸು ಸೂತ್ರಾಧಾರಿಯೆಂದ ಮಾತ್ರ ಸಾಕೊ 3 ಸ್ನಾನವ್ಯಾಕೋ ಸಂಧ್ಯಾನವ್ಯಾಕೋ ಜ್ಞಾನವಿಡಿದು ಭಕ್ತಪ್ರಾಣನಾಥನ ಧ್ಯಾನಗೈಯಲದೊಂದೆ ಸಾಕೊ 4 ಜಪವು ಯಾಕೋ ತಪವು ಯಾಕೋ ಕಪಟನೀಗಪರಿಮಿತ ಹರಿಯ ಗುಪಿತದಿಂದರ್ಚಿಸಲು ಸಾಕೊ 5 ಮಂತ್ರವ್ಯಾಕೋ ತಂತ್ರವ್ಯಾಕೋ ಮಂತ್ರಮೂರ್ತಿ ಸರ್ವಾಂತರ್ಯಾಮಿಯ ಅಂತರಂಗ ತಿಳಿಯೆ ಸಾಕೊ 6 ನೇಮವ್ಯಾಕೋ ನಿತ್ಯವ್ಯಾಕೋ ಸ್ವಾಮಿಯೆನುತ ಪ್ರೇಮಿಯ ಶ್ರೀ ರಾಮನ ನಂಬಿಕೊಳ್ಳಲು ಸಾಕೊ 7
--------------
ರಾಮದಾಸರು
ಸತ್ಯವೋ ಏನು ಮಿಥ್ಯವೋ ಚಿತ್ತಜಪಿತ ಭಕ್ತವತ್ಸಲನೆಂಬೋಕ್ತಿ ಪ ಕಷ್ಟನಿವಾರ ಭಕ್ತರಿಷ್ಟದಾಯಕನೆಂದು ಅಟ್ಟಹಾಸದಿ ವೇದ ಕಟ್ಟಳಿಲ್ಲದೆ ಕೂಗ್ವುದು 1 ಧಾತ್ರಿತ್ರಯಕೆ ತಾನೆ ಸೂತ್ರಧಾರಕನೆಂದು ಸ್ತೋತ್ರ ಪೊಗಳಿದು ಮನು ಗೋತ್ರರ್ವಚನಂಗಳು 2 ಭಕ್ತವತ್ಸಲ ನೀನು ಸತ್ಯವಾಗಿರ್ದೊಡೆ ಭೃತ್ಯನ ಮನಕೀಗ ಪ್ರತ್ರ್ಯಕ್ಷಾಗಲಿ ರಾಮ 3
--------------
ರಾಮದಾಸರು
ಹರಿ ಪರದೈವ ಚತುರ್ದಶ ಲೋಕಕೆ | ಉರಗನ ಮುಂಡಿಕೆ ತುಳುಕಿ ಪೇಳುವೆ ನಾನು ಪ ಮುನಿಗಳೆಲ್ಲ ನೆರೆದು ಸದ್ವರವ ಮಾಡುತಲಿ | ಮನ ಬಂದ ಹಾಗೆ ಅರ್ಪಿಸುತಿರಲು | ಮುನಿ ನಾರದನು ಕೇಳೆ ಭೃಗು ಮುನಿಯನು ಕಳುಹಿ | ವನಜನಾಭನೆ ದೈವವೆಂದು ನಿರ್ಣೈಸಿದರು1 ದುರ್ವಾಸ ಮುನಿಪಗೆ ಚಕ್ರ ಎಡೆಗೊಂಡಿರಲು | ಅಜ ಗಿರೀಶಾ || ಗೀರ್ವಾಣರಾದ್ಯರು ಪರಿಹರಿಲಾರದಿರೆ | ಸರ್ವೋತ್ತಮನೆ ಒಬ್ಬ ಹರಿಯೆಂದು ಸಾರಿದರು 2 ಕರಿ ಬಾಧೆಯನು ಬಡುತಲಿ | ಕಾವವಾತನೆ ದೈವ ಎಂದು ಕೂಗೆ || ನಾವು ತಾವು ಎಂದು ಎಲ್ಲರು ಸುಮ್ಮನಿರೆ | ತಾವ ಕಾಕ್ಷನೆ ಕಾಯ್ದಾ ಪರದೇವತೆ ಎಂದು 3 ಹÀಯಮುಖನು ವೇದಗಳು ಕದ್ದೌಯೆ ಸಕಲರು | ಭಯಬಿದ್ದು ನಿತ್ರಾಣರಾಗಿರಲು || ಜಯದೇವಿ ರಮಣನು ವೇದವನು ತಂದು ಜಗ | ತ್ರಯಕೆ ಒಡೆಯನೆನೆಸಿಕೊಂಡ ಪರನೆಂದು 4 ಮೊದಲು ನಿರ್ಣಯವಾಗಿ ಇರಲಿಕ್ಕೆ ಮಂದಮತಿ | ಮದಡ ಮನುಜರೆಲ್ಲ ನೆಲೆಗಾಣದೆ || ಮದನ ಪಿತ ವಿಜಯವಿಠ್ಠಲನ ಒಲಿಸಿಕೊಳ್ಳದೆ | ಮದ ಗರ್ವದಲಿ ನುಡಿದು ನರಕದಲ್ಲಿ ಬೀಳುವರೂ5
--------------
ವಿಜಯದಾಸ
ನಿನ್ನ ಸಮಾನ ದೇವರುಂಟೇನೋ ಎನ್ನಯ್ಯ ರಂಗ ಪನಿನ್ನ ಸಮಾನ ದೇವರುಂಟೇ ಇನ್ನೀ ಭುವನಭವಾಂಡದೊಳಗೆಬನ್ನಬಡಿಸದೆ ದಾಸಜನರ ನಿನ್ನ ಪ್ರಾಣಸಮಮಾಡಿ ಪೊರೆಯುವಿ ಅ.ಪಸೋಮಕಾಸುರ ದೈತ್ಯನ್ನ ವಧಿಸಿ ವೇದವನು ತಂದುನೇಮದಿಂ ಮತ್ತೀ ಸೃಷ್ಟಿ ನಿಲ್ಲಿಸಿ ಸಾಗರವ ಮಥಿಸಿಪ್ರೇಮದಮೃತ ಸುರರಿಗುಣಬಡಿಸಿ ನಿಸ್ಸೀಮನೆನಿಸಿಸೋಮಶೇಖರನಮಿತ ಕಷ್ಟವ ಪ್ರೇಮ ದೃಷ್ಟಿಯಿಂ ದೂರ ಮಾಡಿಭೂಮಿತ್ರಯಕೆ ಕ್ಷೇಮ ನೀಡಿದಿ ಕಾಮಿತ ಭಕ್ತರ್ವರಪ್ರದಾತ 1ಎರಡೆ ಅಡಿಗಿಡಿಭುವನವನು ತುಳಿದಿ ಅಮಿತಮಹಿಮಪರಮಉಗ್ರರೂಪ ಧರಿಸಿದಿ ಭಕುತಗಾಗಿಅರಮನೆಯ ಸ್ತಂಭೊಡೆದು (ಮೂ) ಡಿದಿ ಪರಮದಯಾನಿಧಿಚರಣದಾಸರ ಪೊರೆಯುಲೋಸುಗ ನರನ ರೂಪದಿನಿರುತ ವಿಪಿನಕೆ ತೆರಳಿ ದಕ್ಷಿಣಶರಧಿ ಹೂಳಿಸಿದುರಳರ್ಹಾವಳಿ ದೂರ ಮಾಡಿದಿ 2ದ್ವಾರಕೆಂಬ ಪುರವ ನಿರ್ಮಿಸಿ ಅದಕೊಡೆಯನೆನಿಸಿಸಾರಭಕುತರ ಇಷ್ಟಪೂರೈಸಿ ಮಹಲೀಲೆ ನಡೆಸಿಪರಮಕಂಟಕರನ್ನು ನಾಶಿಸಿ ಧರೆಭಾರಮಿಳಿಸಿಪರಮಸುರಗಣಕ್ಹರುಷವಿತ್ತು ಧಾರುಣಿಯನು ಪರಿಶುದ್ಧಮಾಡಿಕರುಣದಾಳುವಿ ಭುವನತ್ರಯವನು ಶರಣಜನಪ್ರಿಯವರದ ಶ್ರೀರಾಮ 3
--------------
ರಾಮದಾಸರು