ಒಟ್ಟು 3 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಯಾರಿಗುಸುರಲಿ ಸಾರತತ್ವ ವಿ ಚಾರ ಭವದೂರಾ ಪ ಚಾರು ಸೇರಿ ಮುಕ್ತಿಯ ಸೊರೆವಿಡಿವುದಿನ್ಯಾರಿಗುಸುರಲಿ ಅ.ಪ. ಶ್ರೀ ಗುರುನಾಥನ ಕಟಾಕ್ಷದಿ ತ್ಯಾಗಿಸಿ ಸಂಸಾರದ ಗೊಡವೆಯ ಯೋಗಿಯಂದದೊಳಿದ್ದು ಆಗಮ ನಿಗಮಾರ್ಥಕೆ ಸಿಲುಕದ ಯೋಗ ಘನವನೊಳಗೊಂಡಿಹ ಅಂಗದ ಯೋಗಾನಂದದುಯ್ಯಾಲೆಯ ತೂಗಿ ನೆಲೆಗೆ ನಿಂದಿಹ ನಿಜಸುಖವಿನ್ಯಾರಿಗುಸುರಲಿ 1 ಉದರದ ನಾಭಿಯ ನೀಳದ ತುದಿ ಹೃದಯ ವಾರಿಜದೊಳಗಿಪ್ಪ ಶಿವ ಸದನ ಲಿಂಗವ ಕಂಡು ಅದು ಇದು ಬೇರ್ಪಡಿಸದೆ ಹೃದಯದಿ ಚದುರ ಸಾಧು ಸತ್ಪುರುಷರ ಮತದಲಿ ಮುದದಿ ಮುಕ್ತಿ ಮಾನಿನಿಗೆ ಮಂಗಲ ಮದುವೆಯಾದ ಮನಸಿನ ಮಹಾ ಗೆಲವಿನ್ಯಾರಿಗುಸುರಲಿ 2 ನೆತ್ತಿಯೊಳ್ ಹೊಳೆ ಹೊಳೆವ ಚಿದಾ ದಿತ್ಯನ ಪ್ರಕಾಶವ ಕಂಡು ಚಿತ್ತದಿ ನಲಿದಾಡಿ ಉತ್ತಮಾನಂದಾತ್ಮರಸ ಸವಿ ಯುತ್ತ ಚಪ್ಪರಿದು ಶರಣರ ಮೊತ್ತದೊಡನೆ ಕುಣಿಕುಣಿದು ಬ್ರಹ್ಮನ ಗೊತ್ತು ತಿಳಿದ ಗುರುತಿನ ವಿಸ್ತರವಿನ್ಯಾರಿಗುಸುರಲಿ 3 ಕುಂದುವ ಕಾಯದ ಸುಖಿಕೆಳೆಸದೆ ಹೊಂದಿದ ಸರ್ವಾಂಗದ ಶೋಧಿಸಿ ಒಂದೇ ದೇವನೊಳಾಡಿ ವಂದಿಸಿ ಗುರುಹಿರಿಯರ ಚರಣಕೆ ಹೊಂದಿ ಹೊಂದಿ ಓಲಾಡುವ ಅರಿಗಳ ಬಂದಿಯೊಳಗೆ ಸಿಲುಕದೆ ಬ್ರಹ್ಮಾ ನಂದರಸಾಮೃತ ಸವಿದಿಹ ಸುಖವಿನ್ಯಾರಿಗುಸುರಲಿ 4 ಹಲವು ಯೋನಿಯೊಳಗೆ ಹೊರಳ ಕುಲ ಛಲ ಶೀಲವ ಮೂರಡಗಿಸಿ ಸುಲಭ ವಂಶದೊಳುಂಡು ಮಲಿನ ಮಾಯಾಮೋಹಕೆ ಸಿಲುಕದೆ ಬಲೆಯ ಛೇದಿಸಿ ಮುಕ್ತಾಂಜ್ಯದ ಬಗೆ ಇನ್ಯಾರಿಗುಸುರಲಿ 5
--------------
ಭಟಕಳ ಅಪ್ಪಯ್ಯ
ಶ್ರೀ ಗುರುವಿನ ಮನೆಯ ಮುಂದಣ ಬಾಗಿಲ ಕಾಯ್ದಿರುವೆ ಪ ತ್ಯಾಗಿಸಿ ಸಂಸಾರಾ ಶ್ರೀ ಗುರುವಿನ ಯೋಗಾಸನವಹೆನು ಅ.ಪ. ಕೊಪ್ಪರಿಗೆಯಾಗಿಹೆ ನಾನು ಜಲಹರಿಯಾಗಿಹೆ ನಾನು ಗುರುವಿನ ಚರಣಾಲಂಕರಿಸುವ ಕೇತಕಿ ಗರಿಯಾಗಿದೆ ನಾನು ಗುರು ಮಂತ್ರವನುಚ್ಚರಿಸಿ ಜಪಿಸುವ ಸರವಾಗಿಹೆ ನಾನು 1 ಗುರುವಿನ ಕೊರಳೊಳಗಿಹ ರುದ್ರಾಕ್ಷದ ಸರವಾಗಿಹೆ ನಾನು ಭರಣಿಯಾಗಿಹೆ ನಾನು ಘಟ ಪರಿಯಾಗಿಹೆ ನಾನು ಗುರುವಿನ ಭುಂಜಿಸಿ ಮಿಕ್ಕ ಪ್ರಸಾದಕೆ ಗುರಿಯಾಗಿದೆ ನಾನು2 ನಡೆವ ಹಾವಿಗೆಯಾಗಿಹೆ ನಾನು ಮಿಗೆ ನಿರ್ಮಲದೊಳು ಪವಡಿಸುತ್ತಿಹ ಹಾಸಿಗೆಯಾಗಿಹೆ ನಾನು ಹೊರಜರುಲಿಯ ಸಾರಿಹೆ ನಾನು ಜಗದೀಶ್ವರ ವಿಮಲಾನಂದ ಗುರುವಿಗೆ ಮಗನಾಗಿಹೆ ನಾನು 3
--------------
ಭಟಕಳ ಅಪ್ಪಯ್ಯ
ಹೃದಯ ವೃಂದಾವನದೊಳಿರುವ ಕೃಷ್ಣನ ಸಾಧಿಸಿ ನೋಡ್ವೆನೆಂದು ಪೋದರು ಗೋಪಾಂಗನಾ ಪ ನಾದದ ಕೊಳಲನ್ನು ಊದುವ ವೇಳ್ಯದಿ ಸದ್ಭಕ್ತಿವೆತ್ತಿಗೋಪಾಂಗನಾ ವಿನೋದದಿ ಆಧಾರ ಮಾರ್ಗದಿಂದಾ ಪೋದರು ಬೇಗದಿ ಶೋಧಿಸಿ ನೋಡಲಾಗಿ ತ್ಯಾಗಿಸಿ ಕಾಮನಾ 1 ಉಬ್ಬೇರಿ ಮೆಲ್ಭಾಗದಿಂದಾ ವಿನೋದದಿ ಅಬ್ಬರದಿಂದಲೀ ಆ ಷಟದ್ವಾರ ಭೇದದಿ ಗರ್ಭಿತನಾದ ರಾಜಹಂಸೊಹಂಸ್ವರದಿ ಮುಬ್ಬರದಿಂದಲಿ ಪಾಡುತ್ತಾ ರಂಗನ 2 ನಳಿನ ಚಂಪಕಾದಿ ನಾಗ ಪುನ್ನಾಗವು ಕುಂದ ಬಕುಲವು ಮಾಲತಿ ಜಾಜಿ ಹೂವು ಶ್ರಿಲೋಲನಾಮವೂ ಮೇಳಿತವಾಗಿ ಪೋಗಿ ಏರಿದರು ಸುಮನಾ 3 ಮೂರ್ತಿ ಸಂಗೀತ ಕೇಳುತಾ ಆ ಮಹಾ ಮಕುಟದಾ ಬೆಳಕು ನೋಡುತಾ ಶ್ರೀ ಗುರುಮಹಾದೇವನೊಳ್ ರಮಿಸಿ ಸೂಸದಾ ಪ್ರೇಮದಿ ಶಾಂತಿ ಸುಖದೊಳ್ ಬೆರತು ಸಘನಾ 4
--------------
ಶಾಂತಿಬಾಯಿ