ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಅಮ್ಮೆಂಬಳದ ಕುರ್ನಾಡು ಸೋಮನಾಥ) ಕಾಮಿತ ಫಲದಾತ ಕಟ್ಟೆಯ ಸ್ವಾಮಿ ಸೋಮನಾಥಾ ಪೂಜೆಯ ನಿರುತದಿ ಕೊಳ್ಳುವ ಪ. ಅಂಬಿಕೆಯನು ವರಿಸಿ ಗಜಚ ರ್ಮಾಂಬರವನು ಧರಿಸಿ ಶಂಬರಾರಿಯನು ಸುಲಭದಿ ಗೆಲಿದಂ- ಮ್ಮೆಂಬಳಜನರನು ನಂಬಿಸಿ ಸಲಹುವ 1 ಒಡೆಯನು ನೀನೆಂದೂ ಊರಿನ ಬಡ ಜನರುಗಳಿಂದೂ ಕೊಡುವ ಪೂಜೆಯನು ಮಡದಿಸಮೇತೀ- ಗಿಡದ ಬುಡದಿ ಕೊಂಬುಡುಪತಿಶಿಖರ 2 ದೋಷಗಳನು ತರಿವಾ ಪನ್ನಗ ಭೂಷಣನೀ ಬರುವಾ ತೋಷಪಡುವ ಸಜ್ಜನರಿಗೆ ಶೇಷಗಿ ರೀಶನು ಸಕಲಭಿಲಾಷೆಯ ಸಲಿಸುವ 3
--------------
ತುಪಾಕಿ ವೆಂಕಟರಮಣಾಚಾರ್ಯ
ಇನ್ಯಾತಕನುಮಾನವಯ್ಯಾ ಪ ಅನ್ಯಥಾ ಗತಿ ಕಾಣೆ ನಿನ್ನ ಚರಣಗಳಾಣೆ ಅ.ಪ. ನಾಶರಹಿತನೆ ನಮಗೆ ಏಸೇಸು ಕಲ್ಪಕ್ಕು ವಾಸ ಏಕತ್ರದಲ್ಲಿ ನೀ ಸಾಕ್ಷಿಯಾಗಿದ್ದು ದಾಸನಾದವಗಪ್ರ- ಯಾಸದಿ ಫಲಗಳುಣಿಸಿ ಲೇಶ ಘನಮಾಡಿ ಸಂತೋಷಪಡುವಾ ನಿನ್ನ ದ್ವೇಷಿ ನಾನಲ್ಲವಯ್ಯ ದೇಶಕಾಲಾದಿಗಳಿಗೀಶ ನೀನೆಂದರಿದು ದಾಸನಾಗಿರುವೆನೆಂದಾಶೆ ಪುಟ್ಟಿದ ಬಳಿಕ 1 ನಿತ್ಯ ತೃಪ್ತನೆ ನಿನ್ನ ಕೃತ್ಯಕೇನೆಂಬೆನೋ ಸತ್ಯಸಂಕಲ್ಪ ಹರಿಯೇ ಮೃತ್ಯುಮಾರಿಗಳೆನಗೆ ಹತ್ತಿಕೊಂಡದರಿಂದ ಸತ್ತುಪುಟ್ಟುವೆಯಿನ್ನು ದತ್ತಕರ್ತೃತ್ವ ಬೆನ್ಹತ್ತಿಕೊಂಡದರಲ್ಲಿ ಅತ್ಯಪರಾಧಿಯಂದತ್ತ ಮೊಗದಿರುಗದಿರು ಭೃತ್ಯವತ್ಸಲನೆಂದಗತ್ಯ ಮನಸೋತ ಬಳಿಕ 2 ವೇದವೇದ್ಯ ಸ್ವಗತ ಭೇದವರ್ಜಿತ ಪೂರ್ಣ ಮಾಧವ ಮಹಿದಾಸ ಆದಿನಾರಾಯಣ ವಿನೋದ ವಿಷ್ವಕ್ಸೇನ ಶ್ರೀದವಿಠಲಾ ನಿನ್ನ ಕ್ರೋಧ ವರರೂಪ- ವಾದ ವಾರ್ತೆಯು ಕೇಳಿ ಧೈರ್ಯಬಿಡದಾ ಬಳಿಕಿನ್ನು 3
--------------
ಶ್ರೀದವಿಠಲರು
ಮನ್ನಿಸಯ್ಯ ಮದನಜನಯ್ಯ ಘನ ಮುನ್ನೀರಶಯ್ಯ ಸ್ವಾಮಿ ಹಯವದನರಾಯಾ ಪ ಬಾರಿಬಾರಿಗೂ ಈತನ ಮಂದಿರದಲಿ ನಿನ್ನ ಚೆನ್ನಿಗ ರೂಪವ ತೋರೋ ನಿನ್ನ ಕರುಣದಿ ಅ.ಪ. ಈಶಾ ಭವಪಾಶಾ ಎಂಬೋ ಬೀಸಿದ ಬಲೆಯೊಳು ಗಾಸಿಗೆರೆದೆನೂ ರಂಗಾ ಕೃಪಾರಿಣ ವಾಸಿ ಪಂಥಗಳು ವಾಸುದೇವನೆ ಲೇಸ ಮಾರ್ಗವ ಕಾಣೆ ನಿನ್ನಾಣೆ ದಾಶರಥಿಯೇ ನಿನ್ನ ದಾಸರ ಕೂಡಿ ಸಂತೋಷಪಡುವ ಸಿರಿಯೆನಗಿತ್ತು ಸಲೆ ಮೀಸಲವ ಮಾಡೋ ದೇವರ ದಯಾಳೊ1 ಪಂಚಭೂತಗಳಲಿ ಪಂಚಾಗ್ನಿಗಳಲಿ ಪಂಚದ್ವಿಗುಣ ಪಂಚರಲಿ ಮತ್ತೆ ಪಂಚಪ್ರಾಣದಲಿ ಪಂಚವಿಂಶತಿ ಮಾರ್ಗ ತೋರೋ ಶ್ರೀಕಾಂತಾ ಪಂಚ ಹಿಡಿಸಿ ಪಂಚೊಂದೋಡಿಸಿ ಪಂಚನಾಲಕು ಭಕ್ತಿ ಕೊಂಚವಾಗದ ಹಾಗೆ ಸಂಚಿತಾಗಮಾ ಮುಂಚೆ ಓಡಿಸೋ ಶ್ರೀವತ್ಸಲಾಂಛನನೇ2 ಶ್ರೀನಿವಾಸನೇ ನಿನ್ನ ಧ್ಯಾನಮಾತ್ರದಿ ಬರುವೋ ಬಿಗನು ಅಘನಾಶÀನವೆಂದೊ ನಾನಿಂದೂ ಬೆಂಬಿದ್ದ ಅಬಲನ ಮನ್ನಿಸೋದಲ್ಲದೆ ಹೀಗೆ ಮುನಿಸೋರೇನೋ ಶ್ರೀಹರೆ ನಿನ್ನ ಸನ್ನಿಧಿಗೊಪ್ಪಿಸಿದೆನೊ ಮನ ಬಂದುದು ಮಾಡೊ ಘನತೆ ನಿನ್ನದು ದೇವಾ ದೀನ ದಯಾನಿಧೆ ಉರಗಾದ್ರಿವಾಸಾ 3
--------------
ಮಹಾನಿಥಿವಿಠಲ
ಮನೆಯೊಳಗಾಡೊ ಗೋವಿಂದ-ನೆರೆ-|ಮನೆಗಳಿಗೇಕೆ ಪೋಗುವೆಯೊ ಮುಕುಂದ ಪನೊಸಲಿಗೆ ತಿಲಕವನಿಡುವೆ-ಅಚ್ಚ-|ಹೊಸಬೆಣೆಯಿಕ್ಕಿ ಕಜ್ಜಾಯವ ಕೊಡುವೆ ||ಹಸನಾಧಾಭರಣಗಳಿಡುವೆ-ಚಿಕ್ಕ-|ಹಸುಳೆ ನಿನ್ನನು ನೋಡಿ ಸಂತೋಷಪಡುವೆ 1ಅಣ್ಣಯ್ಯ ಬಲರಾಮಸಹಿತ-ನೀ-|ನಿನ್ನೆಲ್ಲಿಯಾದರೂ ಆಡುವುದು ವಿಹಿತ ||ಹೆಣ್ಣುಗಳೇಕೋ ಸಂಗಾತ-ರಂಗ |ಬಿನ್ನಪಪರಿಪಾಲಿಸೊ ಜಗನ್ನಾಥ2ಜಾರನೆನಿಸಿಕೊಳಲೇಕೆ-ರಂಗ-|ಚೋರನೆನಿಸಿಕೊಂಬ ದೂರು ನಿನಗೇಕೆ ||ವಾರಿಜಾಕ್ಷಿಯರ ಕೂಡಲೇಕೆ-ನಮ್ಮ-|ಪುರಂದರವಿಠಲರಾಯ ಎಚ್ಚರಿಕೆ 3
--------------
ಪುರಂದರದಾಸರು