ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆಳ್ವಾರ್-ಆಚಾರ್ಯ ಸ್ತುತಿಗಳು ನೀರಾಟವ ನೋಡಿದೆ ನೀರಜಾಕ್ಷನ ರಾಣಿ ಗೋದಾದೇವಿಯ ಪ ಶ್ರೀವಿಲ್ಲಿಪುತ್ತೂರ ಶ್ರೀತುಳಸಿವನದಲ್ಲಿ ಶ್ರೀವಿಷ್ಣುಚಿತ್ತರಾ ಪುತ್ರಿಯೆಂದೆನಿಸಿ ಸುಪುತ್ರಿಯೆಂದೆನಿಸಿ ಶ್ರೀ ದೇವಿ ತಾನುದಿಸೆ ಬೇಗ ತೀವ್ರ ಹರುಷದಿಂ ಬೆಳೆಯುತ್ತಲಿದ್ದಾಳಲು 1 ಪುತ್ರಿಗೆ ತಕ್ಕಂಥ ವರವಿಲ್ಲವೆನುತಾಲೆ ಚಿತ್ತದೊಳಗೆ ಯೋಚಿಸಿದ ಆಳ್ವಾರರು ಪೆರಿಯಾಳ್ವರರು ಭಕ್ತವತ್ಸಲನಾ ವರಿಸಬೇಕೆನುತಾನೆ ಅರ್ಥಿಯಿಂದಲೆ ನೀರಾಟವನೆನೆದಾಳು 2 ಶ್ರೀಶವಾಸನೆಗಳ ಭಾವಿಸೀ | ಗೊಲ್ಲ ವಾಸನೆಗಳ ಭಾವಿಸೀ ವಾಸುದೇವನಾ ವರಿಸಬೇಕೆನುತಾಲೆ ಉ ಲ್ಲಾಸದಿಂದಲೆ ಹೆಂಗಳ ಕೂಡೆ ಪೊರಟಾಳು 3 ಮುತ್ತು ಮಾಣಿಕದಾಭರಣವನಿಟ್ಟು ಸುತ್ತೆಣೆ ಗಂಟನ್ಹಾಕಿ ದೇವಿ ಸುತ್ತೆಣೆ ಗಂಟನ್ಹಾಕಿ ಉತ್ತಮನಾಗಿದ್ದ ಪುಷ್ಪಗಳನೆ ಮುಡಿದು ಚಿತ್ತದೊಳೊಲ್ಲಭನಪ್ಪಣೆಗೊಂಡು ಪೊರಟಾಳು 4 ಮಾರ್ಗಶಿರ ಮಾಸದಿ ಪೊತ್ತೊಂದು ದಿವಸಾದಿ ಬೇಗ ತಾ ಪೊರಟೂ ಮಹಾಲಕ್ಷಿ ತಾ ಪೊರಟ ಳಾಗ ಬೀದಿಯನು ಸುತ್ತಿ ಮಂಟಪದಲಿ ನಿಂದು ಮಂಗಳಾರತಿಯನೆತ್ತೀ ಮಾರು ವಸ್ತ್ರವ ತೆಗದಾರು 5 ದಂತಧಾವನ ಮಾಡಿ ಕಂತುಪಿತನರಸೀಗೆ ಅಂತರಂಗದ ಭಕ್ತರು ಬೇಗ ಅಂತರಂಗದ ಭಕ್ತರು ಸಂತೋಷದಿಂದಲೆ ಮುಖವನ್ನು ತೊಳೆದು ಶ್ರೀ ಕಾಂತಗೆ ವಸ್ತ್ರದಿಂ ಮುಖವನೊರೆಸಿದಾರು 6 ಭಾಪು ಛತ್ರಿಚಾಮರ ಸೂರೆಪಾನವಾ ಜನ ಬೀಸಿ ಗೋಪಿ ಮುಕ್ತಿದಾಯಕಿಗಾಗ ಮುಕ್ತಿದಾಯಕಿಗಾಗ ದರ್ಪಣವನು ತೋರಿ ಕಂದರ್ಪನ ಮಾತೆಗೆ ಧೂಪ ದೀಪ ಕರ್ಪೂರದಾರತಿಯೆತ್ತಿದರು 7 ಬೇಗಾದಿಲಕ್ಷಿಗೆ ಆಭರಣ ಸಡುಲಿಸಿ ಆಗ ಮುಡಿಯ ಬಿಚ್ಚಿ ದೇವೀಗೆ ಆಗ ಮುಡಿಯ ಬಿಚ್ಚೀ ಬೇಗಾದಿಂ ಕಂಮೆಣ್ಣೆ ಕಸ್ತೂರಿತೈಲ ಮೈಗೆ ತಾಳಮೇಳದ ಗತಿಯಿಂದಲೊತ್ತಿದ್ದರೂ 8 ಶ್ವೇತವರ್ಣದ ದಿವ್ಯ ನಾಗವಲ್ಲಿಗಳಿಂದ ಖ್ಯಾತಿ ಪಡೆದಿರುವಾ ಕ್ರಮುಕಾ ಬೇಗ ಖ್ಯಾತಿ ಪಡೆದಿರುವಕ್ರಮುಕಾ ನೂತನವಾದ ಕರ್ಪೂರವರ್ಣಗಳಿಂದ ಜಗ ನ್ಮಾತೆಗೆ ತಾಂಬೂಲವ ನೀಡಿದರೂ 9 ಸಣ್ಣವಾದ್ಯದೊಳಗೆ ನುಡಿಸೇ ಬೇಗ ವಾದ್ಯದೊಳಗೆ ನುಡಿಸÉೀ ಹಣೆಯೊಳಗೆ ಬಾಚಿ ಮಣಿಗಂಟನಿಕ್ಕಿ ಉಳಿದ ಎಣ್ಣೆ ಭಕ್ತರಿಗೆಲ್ಲ ಯಿತ್ತಾರು 10 ಮಿಂದು ಮಡಿಯನುಟ್ಟು ಚಂದದಿಂದಲೆ ದೇವಿ ತಂದ ನೈವೇದ್ಯವುಂಡೂ ಬೇಗ ನೈವೇದ್ಯವುಂಡು ಬಂದ ಭಕ್ತರಿಗೆಲ್ಲ ತೀರ್ಥಪ್ರಸಾದವಿತ್ತು ಮಂದಗಮನೆ ತನ್ನ ಮಂದಿರಕೆ ನಡೆದಾಳು 11 ಬೈತಲೆಗೆ ರಾಗಟೆ ಹೆರಳಿಗೆ ಭಂಗಾರಗೊಂಡೆಯವ ನಿತ್ತು ಪಾನುಪಟ್ಟಿಯು ಮುತ್ತಿನಬಟ್ಟೆ ಕಟ್ಟಿ ಬೇಗ ಮುತ್ತಿನಬಟ್ಟೆ ಕಟ್ಟಿ ಕತ್ತುರಿ ಬಾವುಲಿ ಕಮಲಸರಗಳೂ ಮುತ್ತಿನ ಮೂಗುತಿ ಮುಕುರಾವನಿಟ್ಟಳೂ 12 ಹಾರಪದಕ ಹಸ್ತಕಡಗ ಹರಡಿ ವಂಕಿ ಶೀರೆಕುಪ್ಪಸ ತೊಟ್ಟೂ ಬೇಗ ಶೀರೆಕುಪ್ಪಸ ತೊಟ್ಟು ಅಂದುಗೆ ಇಂದೀರಾದೇವಿ ತಾನಿಟ್ಟು ಬಂದಳು ಆಗಾ 13 ಭಾಷ್ಯಕಾರರು ಮೊದಲಾದ ಭಕ್ತರುಯೆಲ್ಲ ಲಕ್ಷ್ಮಿದೇವಿಗೆ ಆಗ ಭಾಗ್ಯಲಕ್ಷ್ಮಿಗೆ ಆಗಾ ಭಾರಿ ಯಾ ಶೀರೆ ಕುಪ್ಪುಸವನಿತ್ತು ಪುಷ್ಪ ಮರ್ಯಾದೆಗಳ ಮಾಡೀ ಕರೆತಂದರು ಬೇಗಾ 14 ಮಂದಗಮನೆ ಅಂದು ಗೋವಿಂದನ ಎದುರಲ್ಲಿ ಆ ನಂದದಿಂದಲೆ ಕುಳಿತೂ ಬೇಗ ಆನಂದದಿಂದಲೆ ಕುಳಿತು ಚಂದದಿಂ ಮಲ್ಲಿಗೆಮಾಲೆಯ ಕಳುಹಲು ಮಂದರೋದ್ದರ ತನ್ನಾ ಮಡಿದೀಗೆ ಕಳುಹಿದ 15 ಕೂಡಾರವಲ್ಲಿಯೆಂತೆಂಬೊ ದಿವಸದಲ್ಲಿ ಕೂಡಿ ಮನ್ನಾರುರಂಗನಾ ಬೇಗ ಮನ್ನಾರುರಂಗನಾ ಕ್ಷೀರಾನ್ನ ಭೋಜನಂಗಳ ಮಾಡಿದರು ಭೋಗಿಯ ದಿನದಿ ಕಲ್ಯಾಣವ 16 ಮಕರ ಸಂಕ್ರಾಂತೀಲಿ ಮಂದರೋದ್ದಾರ ಸಹಿತ ಚೊಕ್ಕ ಪಲ್ಲಕ್ಕಿಯೇರಿ ಬೇಗ ಚೊಕ್ಕ ಪಲ್ಲಕ್ಕಿಯೇರಿ ಪಕ್ಕ ಮೆರವಣಿಗೆಯಲಿ ಬಂದು ಹರುಷದಿಂದ ವೆಂಕಟಕೃಷ್ಣನ ಎಡದಲ್ಲಿ ಕುಳಿತಾಳು 17
--------------
ಯದುಗಿರಿಯಮ್ಮ
ಕಾವವನೆ ಕರ್ಮಜಯ ಬಳಿಕಂ ಸಾವವನೆ ಉಣ್ಣುವರು ಜನರು ಭಾವವನೆ ಅರಿದಿರಿಸು ಜೀವರ ನಿನ್ನಂಘ್ರಿಯಲಿ ಪ ದಾಸವೃಂದವು ತೋಷದಿಂದಲೆ ಪೂಶರಯ್ಯನ ವಿಡಿದು ಘನ ಸಂ- ಸುಕೃತ ಫಲವಿಹುದೋ ಶ್ರೀಶನಲಿ ನಿಜದಾಸ ಭಕುತಿಯ ಮೀಸಲಿರಿಸೀ ಮನವ ಮೋಹದೆ ಆಶೆ ಗಳಿಸದೆ ಶ್ರೀಹರಿಯ ನಿಜವಾಸ ಕೈಯ್ಯುವರು 1 ಮೃಗಜಲಕೆ ನೀರೆಂದು ಭಾವಿಸಿ ಪೊಗಲೆಳಿಸುವೆರಳೆಗಳ ಪರಿಯಲಿ ಮೃಗನಯನೇರತಿ ಚೆಲ್ವಿಕೆಗೆ ಜಗವೆಳಸಿ ಬಳಲುವದು ಮಿಗಿಲಾಗಿದ ವಿಷಯಲನಲದಿ ಧಗಧಗಿಸಿ ಜನಗಳು ಪೋಪರಲ್ಲದೆ ಖಗಪತೀ ವಾಹನನ ನೆನೆಯರು ಜಗವ ಪಾವನನು 2 ನೀರಜಾಸನ ಪಿತನೆ ಅಕ್ಷಯ ಶ್ರೀ ರಮಾವಲ್ಲಭನೆ ತವ ಪರಿ ವಾರವಲ್ಲದೆ ಸತಿಸುತರು ಮೇಣ್ ದೇಹ ಬಾಂಧವರು ಸಾರಸುಮತಿಯನಿತ್ತೆಮಗೆ ಹರೆ ಸೇರಿಸೆಮ್ಮನು ನಿನ್ನ ಅಡಿಯಲಿ ಧೀರ ಶ್ರೀ ನರಸಿಂಹವಿಠ್ಠಲ ಪಾರಗಾಣಿಪುದು 3
--------------
ನರಸಿಂಹವಿಠಲರು
ವಿಜಯದಾಸರ ಭಜನೆ ಮಾಡಿರೊ |ವಿಜಯದಾಸರ ಭಜನೆ ಮಾಡಲುಅಜನ ಜನಕ ನಿಜನಿಗೊಲಿದುಕುಜನ ಸಂಗತಿ ತ್ಯಜನ ಮಾಡಿಸಿಸುಜನರ ಪಾದಾಂಬುಜದಲ್ಲಿಡುವ ಪ ಶುದ್ಧ ಮಂದರನ್ನ ಉದ್ಧಾರಾರ್ಥವಾಗಿಮಧ್ವರಾಯರ ಮತಾಬ್ಧಿಯೊಳು ಪುಟ್ಟಿಸಿದ್ಧಾಂತ ಸ್ಥಾಪಿಸಿ ಗೆದ್ದು ವಾದಿಗಳಹೆದ್ದೈವವೇ ಅನಿರುದ್ಧನು ಯೆಂದು ||ಪದ್ಧತಿಂದ ಪೇಳಿಸಿದಿ ವೈಷ್ಣವರನ್ನಶುದ್ಧಾತ್ಮರ ಮಾಳ್ಪ ಉದ್ಯೋಗದಿಂದಲಿಹದ್ದನ್ನೇರಿ ಬಪ್ಪ ಪದ್ದುಮನಾಭನ್ನಹೃದ್ದಯದೊಳಗಿಟ್ಟ ಸದ್ಗುರುರಾಯ 1 ಭೂಸುರಾಬ್ಧಿಗೆ ತಾರೇಶನಂತೊಪ್ಪುವಸಾಸಿರ ನಾಮದ ಶೇಷಗಿರಿ ಶ್ರೀ ನಿ-ವಾಸನ ಯಾತ್ರೆಯ ಲೇಸಾಗಿ ಮಾಡ್ಯೆತಿ ಸ- |ಹಾಸ ಸಂತೋಷದಿಂದಲೆ ||ವಾಸುದೇವನ ಮಾನಸದೊಳಿಟ್ಟು ದು-ರಾಶೆಯ ತೊರೆದು ಕ್ಲೇಶವ ಪಡದಲೆಮೀಸಲ ಪುಣ್ಯದ ರಾಶಿ ಘಳಿಸಿಕೇಶವನ ನಿಜ ದಾಸನೆಂದೆನಿಪ2 ಪಾದ ನಿತ್ಯ ಸಿರಿ ಮೋಹನ್ನ ವಿಠಲನೆಪರನೆಂದರುಹು ಮಾಡಿದ ಸುರ ತರುವಾದ 3
--------------
ಮೋಹನದಾಸರು