ಒಟ್ಟು 10 ಕಡೆಗಳಲ್ಲಿ , 4 ದಾಸರು , 10 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಂದನ ಕಂದ ಬಂದ ಗೋವಿಂದ ಇಂದಿರಾನಂದ ರಾಧೆ ಮುಕುಂದ ಪ ವೃಂದಿತ ಬೃಂದಾರಕ ಖಗವೃಂದ ಸುಂದರ ಮುರಳೀ ನಾದಾನಂದ ಅ.ಪ ಘಣಿಮಣಿ ಭೂಷಣ ಮುನಿತೋಷಣ ಗಣಿಕಾಗಣ ಮನಮೋಹನ ತರುಣ ಝಣ ಝಂಝಣರವ ಕಿಣಿಕಿಣಿಚರಣ ಕುಣಿ ಕುಣಿವನು ಮಾಂಗಿರಿರಂಗ ಕರುಣ 1
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಅಕ್ಷಯವಾಗುವುದು ನಿಮಗೆ ಪ ಕುಕ್ಷಿಯೊಳೆಲ್ಲವ ಪೊಂದಿರುವಾತನ ಕುಕ್ಷಿಗೆ ಹಿತಕರ ಭಿಕ್ಷೆಯೆಂದೆನ್ನುತ ಅ.ಪ ಹೊಟ್ಟಿಗೆ ಇಲ್ಲದೆ ಬಂದಿಲ್ಲ ಕೊಟ್ಟರೆ ಪುಟ್ಟದ ಕಟ್ಟನು ತರುವೆವು ಅಷ್ಟು ಪಾಪಗಳ ಮಾಡಲು ಕೃಷ್ಣ ದಯೆಯ ತಂಬಿಟ್ಟನು ಕೊಡುವೆವು 1 ಶ್ರಾವಣ ಮಾಸದ ಶನಿವಾರ ಯಾವನು ಕೊಡುವನೊ ಮನಸಾರ ಜೀವನ ಕ್ಲೇಶದ ಪರಿಹಾರ ಭಾವದಿ ಪೊಂದುವ ಸುಖಸಾರ 2 ಮೋಸವಿಲ್ಲದವು ದಾಸ ಪ್ರಸನ್ನ ತೋಷಣ ವೈಭವ ಶ್ರೀಶನೆ ಬಲ್ಲನು ಸಾಸಿರ ಸಾಸಿರ ನಾಣ್ಯದ ಕಾರ್ಯವ ವೀಸಕೆ ಮಾಡುವ ದಾಸರ ಗುಂಪಿದು3
--------------
ವಿದ್ಯಾಪ್ರಸನ್ನತೀರ್ಥರು
ಅಂಬಾ ಮಹೇಶ್ವರ ಮನಮೋಹಿನಿ ಪ ರಮಾವಿನುತ ಹರಿಸಹೋದರೀ ನಮಾಮಿ ಶಂಕರೀ ಲೋಕೇಶ್ವರೀ 1 ಮಾರವೈರಿರಾಣಿ ನೀರಜಾತಪಾಣಿ ಶಾರದೇ ಶರ್ವಾಣಿ ಗೌರಿ ಕಲ್ಯಾಣಿ ಸಾರ ಮಧುರವಾಣಿ ನಾರಿ ಭುಜಗವೇಣಿ ಘೋರದೈತ್ಯ ಸಂಹಾರಿಣಿ ದೇವಿ ರುದ್ರಾಣಿ 2 ಈಶ ಮನೋಹರೆ ಪಾಶಾಂಕುಶಧರೇ ಶ್ರೀಶಿತಿಕಂಠ ವಿಲಾಸ ವಿಹಾರೆ ಕ್ಲೇಶನಾಶಕರೇ ಭಾಸುರ ಮುಕುರೇ ಶ್ರೀಶ ಮಾಂಗಿರಿವಾಸ ತೋಷಣಚತುರೆ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಕೌಸಲ್ಯಾ ಸುಕುಮಾರ ಭಾಸಿತ ಕೋದಂಡಧರ ವಾಸವನುತ ರಣಧೀರ ಭೂಮಿಸುತಾ ಮೋಹಕ 1 ಮುನಿಕೌಶಿಕ ಮಖಪಾಲನ | ಜನಕಸುತಾ ಮನಮೋಹನ ಭವ ಖಂಡನ ಘನದಾನವ ಸತಿಭಂಜನ 2 ಭರತಾರ್ಚಿತ ವರಚರಣ | ಖರದೂಷಣ ಸಂಹರಣ ಮರುತಾತ್ಮಜ ಮಣಿಭೂಷಣ | ಶರಣಾಗತ ಮನತೋಷಣ3 ಲಂಕಾಧಿಪಕುಲನಾಶಕ | ಕಿಂಕರವಾನರಪೋಷಕ ಪಂಕೇರುಹ ಲೋಚನಾಕಳಂಕ [ಶಮನ] ಮಾಂಗಿರಿ ನಾಯಕ 4
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಜಯರಾಘವ ಜಯರಾಘವ ಜಯರಾಘವ ರಾಮಾ| ಶ್ರಯಕಾರಣಸುಖಪೂರಣ ಭವತಾರಣ ನಾಮಾ ಪ ಜಗಪೋಷಣ ಮೃದುಭಾಷಣ ಸುರತೋಷಣಕಾರಿ| ಅಘಶೋಷಣ ಕುಲಭೂಷಣ ಖರದೂಷಣ ಹಾರಿ 1 ಅತಿಸುಂದರ ಗುಣ ಮಂದಿರ ದಶಕಂದರ ಹರಣಾ| ಧೃತಮಂದಿರ ಗಜೇಂದರ ಪ್ರಯಾ ಸಾಂದರ ಕರುಣಾ 2 ಪತಿ ವಾಣೀಪತಿ ದಿವಸಾಪತಿ ಧೇಯ| ಗುರುಮಹೀಪತಿ ಸುತಸಾರಥಿ ಸೀತಾಪತಿರೇಯಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಪರಮೇಶ್ವರಾ ಕರುಣಾಕರಾ ಗಿರಿಜಾಪ್ರಿಯ ಸೋಮಶೇಖರಾ ಪ ಸಾರ ಶರನಿಧಿ ಗಂಭೀರ ಸ್ಮರಹರಾ ಉದಾರ, ಪಾಹಿಶಂಕರ ಅ.ಪ ಕಮಲಾಕ್ಷ ಮಿತ್ರ ಕಮನೀಯಗಾತ್ರ ಅಮರಾರಿ ವೇತ್ರ ವಿಮಲಾ ತ್ರೀನೇತ್ರಾ ರಮಣೀಯ ಚಾರಿತ್ರ ಹಿಮಶೈಲಜಾಪಾತ್ರ ಅಮರೇಂದ್ರನುತ ಗೋತ್ರ ಶರಣಾತಪತ್ರ 1 ಉರಗ ವಿಭೂಷಣ ಪರಿಜನ ತೋಷಣ ಸುರನದಿ ರಮಣಾ ಭವಭಯ ಭೀಷಣ ದುರಿತ ನಿವಾರಣ ಪರಮ ಕೃಪಾಗುಣ ಪರಶಿವ ಮಾಂಗಿರಿಶೃಂಗಾಭರಣಾ 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಪಾವನಕರ ನಾಮಾ ಪರಮ ಪುರುಷ ರಾಮಾ ಪ ದೇವೋತ್ತಮ ಸಾರ್ವಭೌಮ | ದಾನವಕುಲ ಭೀಮ ಅ.ಪ ನಿಗಮಾಗಮ ಪರಿಪೂರಣ | ಸುಗುಣಾಕರ ಮುನಿತೋಷಣ ಖಗಮಾನಸ ಮಣಿಭೂಷಣ | ಸುರನರಶರಣಾ 1 ಜಗಜೀವನ ಲಯಕಾರಣ | ಪವನಾತ್ಮಜ ಕರುಣಾ ಸುಗುಣಾಕರ ಭವತಾರಣ | ಮಾಂಗಿರೀಶ ಕಮಲಚರಣ2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಭಗವಂತನ ಸಂಕೀರ್ತನೆ ಅನುದಿನ ನೆನೆಯಲೊ ಹನುಮನಿಗತಿ ಪ್ರಿಯ ಪರಮ ಪಾವನ ರಾಮನಾಮ ಪ ಇನಕುಲ ಭೂಷಣ ಮುನಿಜನ ತೋಷಣ ಜಾನಕಿರಮಣನ ನಾಮ ಅ.ಪ ಗೌತಮ ಸತಿಯೆ ಪುನೀತಳ ಮಾಡಿ ಪ್ರ- ಖ್ಯಾತಿ ಪೊಂದಿದ ದಿವ್ಯನಾಮ ಶೀತಲ ಕಿರಣ ಭೂಷಣನ ಧನುವ ಮುರಿದು ಸೀತೆಯ ಪೊಂದಿದ ನಾಮ 1 ಜನಕನ ವಚನವನುಳಿಸುವ ನೆವದಲಿ ವನವಾಸ ಮಾಡಿದನ ನಾಮ ವನದಲಿ ಖರದೂಷಣ ಮುಖ ದನುಜರ ಹನನ ಮಾಡಿದ ದಿವ್ಯನಾಮ2 ಶರಭಂಗಮುನಿಗೆ ಪರಮ ಪದವನಿತ್ತ ಪರಮ ಪವಿತ್ರನ ನಾಮ ನಾಸಿಕ ಕರ್ಣ ಮುರಿಸಿದವನ ಶುದ್ಧ ನಾಮ 3 ಭೂಮಿಜೆಯನು ಮೋಸದಿಂದ ಅಗಲಿಸಿದ ಮಾರೀಚನ ಕೊಂದ ನಾಮ ಸ್ವಾಮಿಯ ಪ್ರೇಮಕ್ಕೆ ಮಡಿದ ಜಟಾಯುಗೆ ಅಭಯ ಹಸ್ತವನಿತ್ತ ನಾಮ 4 ಆ ಮಹಾ ಹನುಮನ ಕಾಮಿತದಂತೆ ಮಹೇಂದ್ರ ಸುತನ ಕೊಂದ ನಾಮ ಕಮಲ ಸುಹೃದತನಯನಿಗೆ ಸಾಮ್ರಾಜ್ಯವನಿತ್ತ ನಾಮ 5 ಪರಿಪರಿವಾರದಿಂ ಶರಧಿಯೊಳ್ ಸೇತು ಬಂಧನವ ಮಾಡಿದ ರಾಮನಾಮ ದುರುಳ ರಾವಣ ಮುಖ ರಕ್ಕಸರನೆ ಕೊಂದು ಧರಣಿ ಸುತೆಯ ಕಂಡ ನಾಮ6 ಶರಣವ ಪೊಂದಿದ ಭಕುತ ವಿಭೀಷಣಗೆ ತರುಣಿ ಸೀತೆ ಲಕ್ಷ್ಮಣರಿಂದ ಕೂಡಿ ಪು ಷ್ಪಕವನೇರಿದ ಸಾಧು ನಾಮ 7 ಉರುತರ ತಪದಲಿ ನಿರತನಾದ ತಮ್ಮ ಭರತನ ಉಳಿಸಿದ ನಾಮ ದೊರೆತನವೊಂದಿ ಸಕಲ ಸುಜನರುಗಳಿಗೆ ಪರತರ ಸುಖವಿತ್ತ ನಾಮ 8 ತನ್ನ ಭಕುತರೊಳು ಉನ್ನತನೆನಿಸಿದ ಘನ್ನಮಾರುತಿಗೊಲಿದ ನಾಮ ಪ್ರ ಸನ್ನನಾಗಿ ಸಂತತ ಇವನಿಗೆ ತನ್ನ ಸಹ ಭೋಗ ಸುಖವಿತ್ತ ನಾಮ 9
--------------
ವಿದ್ಯಾಪ್ರಸನ್ನತೀರ್ಥರು
ಭಜರೆ ಮಾನಸ ದ್ವಿಜವರಗಮನಂ ಪ ದ್ವಿಜಕುಲ ತೋಷಣಂ ಗಜವರ ಪೋಷಣಂ ಅ.ಪ ವಿಜಯ ಸಾರಥಿಂ ಭಜಕೃಷ್ಣಮೂರುತಿಂ ಭಜಕಾಮರತರುಂ ಕುಜನಕುಠಾರಂ 1 ಹರಿಪದ ಸ್ಮರಣಂ ದುರಿತನಿವಾರಣಂ ಭವ ಮುಖಸುರನುತ ಚರಣಂ 2 ಜಲಧಿಜಾರಮಣಂ ಬಲಿಕೃತ ಕರುಣಂ ವಿಲಸತ್ಕಾರ್ಪರ ನಿಲಯ ನರಹರಿಂ 3
--------------
ಕಾರ್ಪರ ನರಹರಿದಾಸರು
ರಾಮ ರಘೋತ್ತಮ ಕೃಷ್ಣ ಘನ | ಶಾಮಸುಂದರ ತ್ರಿಭುವನ ಜೀವನ ಪ ಪತಿ | ವಸುದೇವ ಸುತ ರುಕ್ಮಿಣಿ ರಮಣಾ 1 ಋಷಿ ಮಖದಾಲನ ಸಾಂದೀಪ ತೋಷಣ | ದಶಶಿರ ಕಂಸಾಸುರ ದಮನಾ 2 ಅಹಲ್ಯೋದ್ದಾರಣ ಕುಜಕೃತ ಪಾವನ | ಮಹಿಪತಿ ಸುತ ಪ್ರಭು ಶುಭಚರಣಾ3
--------------
ಕಾಖಂಡಕಿ ಶ್ರೀ ಕೃಷ್ಣದಾಸರು