ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಾ ನಿನಗೇನು ಬೇಡುವುದಿಲ್ಲ-ಎನ್ನಹೃದಯಕಮಲದೊಳು ನೆಲೆಸಿರು ಹರಿಯೆ ಪ ಶಿರ ನಿನ್ನ ಚರಣಕ್ಕೆರಗಲಿ-ಚಕ್ಷುಎರಕದಿಂದಲಿ ನಿನ್ನ ನೋಡಲಿ ಹರಿಯೆ ಕರಣ ಗೀತಂಗಳ ಕೇಳಲಿ-ನಾಸಿಕನಿರುಮಾಲ್ಯಾನುದಿನ ಘ್ರಾಣಿಸಲಿ ಹರಿಯೆ 1 ನಾಲಿಗೆ ನಿನ್ನ ಕೊಂಡಾಡಲಿ-ಎನ್ನ ತೋಳು ಕರಂಗಳ ಮುಗಿಯಲಿ ಹರಿಯೆ ಕಾಲು ತೀರ್ಥಯಾತ್ರೆಗೆ ಪೋಗಲಿ-ಮನಬಲ್ಪಿನಿಂದಲಿ ನಿನ್ನ ಸ್ಮರಿಸಲಿ ಹರಿಯೆ 2 ಚಿತ್ತ ನಿನ್ನೊಳು ಮುಳುಗಾಡಲಿ ನಿನ್ನಭಕ್ತ ಜನರ ಸಂಗ ದೊರಕಲಿ ಹರಿಯೆ ವೃತ್ತಿ ತತ್ವಯೋಗಾಭ್ಯಾಸಕ್ಕಾಗಲಿ-ರಂಗ ವಿಠಲ ನಿನ್ನ ದಯವಾಗಲಿ ಹರಿಯೆ 3
--------------
ಶ್ರೀಪಾದರಾಜರು
ಶರಣು ಶರಣು ಶ್ರೀ ದತ್ತಾತ್ರೇಯಾ ಶರಣು ಸಕಲಾ ಭುವನಾಶ್ರಯಾ ಶರಣೆಂಬೆ ಸಿಂಹಾಚಲ ನಿಲಯಾ ಸುರಜನ ರೇಯಾ ಸಲಹಯ್ಯಾ 1 ವನರುಹ ಸಂಭವ ತ್ರಿಲೋಚನ ಸನಕಾದಿ ಮುನಿ ವಂದಿತ ಚರಣ ಜನವನ ವಿಜನ ವ್ಯಾಪಕ ಘನ ಅನಸೂಯಾ ನಂದನ ಯೋಗೀಶಾ 2 ತತ್ವಯೋಗ ಸಿದ್ಧಿ ಬುದ್ಧಿ ದಾತಾರಾ ಸತ್ವ ಗುಣಾಲಂ ಕೃತ ಜ್ಞಾನ ಸಾಗರಾ ಸತ್ಯ ಸನಾತನೇ ಮುನಿ ದಿಗಂಬರಾ ಭಕ್ತ ಸಹಕಾರಾ ಅವಧೂತಾ 3 ಕಂದರ್ಪ ಕೋಟಿ ಸುಂದರಾಕಾರಾ ಹೊಂದಿದಾಭರಣಾನೇಕ ಶೃಂಗಾರಾ ಇಂದು ಸೂರ್ಯಾನಳ ತೇಜ ವ್ಯಾಪಾರಾ ಎಂದೆಂದೆಚ್ಚರಾ ಕಂಡು ನಿನ್ನಾ 4 ಮಂದಮತಿ ಬಾಲನ ಬಿನ್ನಾಹದ ಸ್ತುತಿ ಬಂದು ಅರ್ಪಿಸಿಕೋ ದುದಿ ಶ್ರೀಪತಿ ಇಂದು ಮೊರೆ ಹೊಕ್ಕೆನು ಅನನ್ಯಾಗತಿತಂದೇ ಮಹಿಪತಿ ಸುತ ಸ್ವಾಮೀ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು