ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತತ್ವಚಿಂತನೆ ಅತಿಭಯಪುಟ್ಟುವುದಡವಿಯ ನೋಡಲ್ ಪ ಮತಿ ಮಂದವಾಗಿಯೆ ಮಾರ್ಗತಪ್ಪುವುದು ಅ.ಪ ಹುಲಿಸಿಂಹಶಾರ್ದೂಲ ಗಂಡಭೇರುಂಡ ಬಲುದುಪ್ಪೆ ಆನೆ ಕಾಡ್ಗೋಣದ ತಂಡ 1 ಝಿಲ್ಲಿಕದಿಂದೆದೆ ತಲ್ಲಣಿಸುವದು ಎಲ್ಲೆಲ್ಲಿಗಿಡಮರ ಮುಳ್ಳುಕಲ್ಲುಗಳು 2 ನಿಲ್ಲಗೊಡದ ದುಷ್ಟಕೀಟಕ ವೃಂದ 3 ಸಂಸಾರಟವಿಯನ್ನು ಸೇರಿ ನಾ ಕೆಟ್ಟೆ ಬಟ್ಟೆ 4 ದೇಹ ಸಂಬಂಧ ಮೋಹ ಕಾಡ್ಗಿಚ್ಚು ದಾಹಗೊಳಿಸಿ ಕೊಲ್ಲುತಿರುವುದು ಹೆಚ್ಚು 5 ಹಗಲು ಇರುಳು ಇದರೊಳಗಿದೆಚಿಂತೆ 6 ದಾರಿಯ ತೋರುವ ಗುರುರಾಮ ವಿಠಲಾ ಕಾರಣ ಕರ್ತನ ನಾ ನೋಡಲಿಲ್ಲ 7
--------------
ಗುರುರಾಮವಿಠಲ
ತತ್ವಚಿಂತನೆ ಅರಿಯಲಳವೇ ಜ್ಞಾನಿಯ ಹೊರಗಿನ ಬಡರೂಪದಿ ಪ ಧರೆಯು ಉದರದಿ ನೆಲಸಿಹ ಪರಿಪರಿ ವಿಧ ಸಿರಿಯನು ಅರಿವುದು ಬಲುಸುಲಭವೆ ಅ.ಪ ಹುಚ್ಚರಂದಿ ಕಾಂಬೋರು ಜನ ಮೆಚ್ಚಿಗೆಯನು ಬಯಸರು ಅಚ್ಚರಿಯಲಿ ನಡೆವರು ಎಚ್ಚರಿಕೆಯ ಪೊಂದದಂತೆ 1 ಒಡವೆ ವಸನಗಳೆಲ್ಲವ ಸಡಗರವನು ಅರಿಯರು ಕಡು ಬಡತನ ಕ್ಲೇಶಕೆ ನಡುಗಲರಿಯರು ಸುಲಭದಿ 2 ಮೇದಿನಿಯಲಿ ದಿನಗಳ ಮೋದದಿಂದಲಿ ಕಳೆವರು ಮಾಧವನಲಿ ಭಕುತರು ಬೂದಿ ಮುಚ್ಚಿದ ಕೆಂಡದಂತೆ 3 ಮರುಳು ಮೋಸವನರಿಯರು ಸರಳಮನದಲಿ ಇರುವರು ಕೆರಳಿದ ಸುಮದಂದದಿ ತಿರುಳುಗಳನು ಸುಲಭದಿ 4 ಭಕ್ತ ಪ್ರಸನ್ನನೊಳು ಆಸಕ್ತ ಸನ್ಮನ ಯುಕ್ತರು ಯುಕ್ತಿ ಚತುರತೆಯರಿಯರು ಹುತ್ತದೊಳಿಹ ಸರ್ಪದಂತೆ 5
--------------
ವಿದ್ಯಾಪ್ರಸನ್ನತೀರ್ಥರು
ತತ್ವಚಿಂತನೆ ಪೇಳಬಹುದೊಬ್ಬರಿಗೆ ವ್ಯಾಸನೆ ಪೇಳಲು ನಿಮಗೆ ಮಾಡಲಶಕ್ಯವಲ್ಲ ಪ ಶ್ರವಣ ಕ್ಷಣಬಿಡದೆ ಮಾಡು ನೀಯೆಂಬಿ ಶ್ರವಣ ಬವಣೆಯು ಬಲ್ಲರೇ ಬಲ್ಲರೊ ಶ್ರವಣ ಮತಿಯೆಂದು ವಾಕ್ಯದಿಂದಲಿ ನಿಮಗಿ ಲ್ಲವರ ಗುರುವಾದಿ ವಾಯು ವಿರಂಚಿಗೆ 1 ಮನನ ಮಾಡೆಂದು ಮಂದಿಗೆ ನೀ ಬೋಧಿಸುವೆ ಮನನ ನಿಮಗೆ ಎಂದಿಗೆ ಇಲ್ಲವೊ ಮನನ ಶಾಸ್ತ್ರಗಳ ಮಾಡಿ ಹ್ಯಾಗ ತಿಳಿಯದೊ ಮನವೆ ಬಲ್ಲುದು ನಿನ್ನ ಮಹಿಮೆ ಎಲ್ಲ 2 ಧ್ಯಾನ ಮಾಡೆಂಬಿ ತಾ ಒಂದೆರೆಡು ವಿಷಯಗಳ ಜ್ಞಾನ ಬಿಡಲಾರೆನೊ ಬಹಳ ಬಿಡುವೆ ನೀನು ಒಂದನ್ನ ಒಮ್ಮೆನ್ನ ಬಿಡಲಾರಿಯೊ ಏನೊ ನೀ ಮಾಡುವುದು ಮಾತ್ರ 3 ನಿನ್ನ ಖಳಗುಣಗಳ ಪರೋಕ್ಷ ನಿಗಮನುದಿನ ಅನ್ಯ ಸಾಧನಗಳಿಂದಲ್ಲದಾಗಿ ನಿತ್ಯ ಮುಕುತಿ ಪೂರ್ಣ ತಾ ಅನ್ಯ ಜನರಿಗೆ ಬಂದ ದಣುವು ತಿಳಿಯೊ 4 ಏಸು ತಾನಂದರು ಖರಿಯ ಪುಸಿವೊಂದಿಲ್ಲ ಲೇಸು ಕೊಡುವವನೊಬ್ಬನಿಲ್ಲ ವಾಸುದೇವವಿಟ್ಠಲ ಒಲಿದು ಸಜ್ಜನರಿಂದ ಈಸು ಸಾಧನೆಗಳಿಂದ ನೀ ಮಾಡಿಸೊ 5
--------------
ವ್ಯಾಸತತ್ವಜ್ಞದಾಸರು
ತತ್ವಚಿಂತನೆ ಮತವೆಂದರೆ ಮಧ್ವ ಮತವೇ ಮತವು ಶ್ರುತಿ ಸ್ಮøತಿ ತತಿಗೆ ಸಮ್ಮತವಾದುದರಿಂದ ಪ ಮಧುವೆಂದರಾನಂದ ಒದಗಿ ಬರುವುದು ಸತ್ಯ ಮಧುವೈರಿ ಒಲಿದು ಪಾದವ ತೋರುವ ಸದಮಲ ಭಾವದಲಿ ಮೇದಿನಿಯೊಳಗಿನ್ನು ಮದಮತ್ಸರಿಲ್ಲದೆಲೆ ಮುದದಿಯೋಚಿಸಲಾಗಿ 1 ವ ವರ್ಣವೆಂದರೆ ಶ್ರೀ ವರನ ಜ್ಞಾನವು ಪವನಪಿತ ತಾ ಒಲಿದು ಈವನದನು ಹೇವವಿಲ್ಲದೆ ಶುದ್ಧ ಭಾವದಿಂದಾಚರಿಸೆ ಭವ ದೂರಗೈಸಿ ಪಾವನಮಾಳ್ಪೊದದರಿಂದ 2 ಪತಿ ಪಿತಭಾವ ಸತತ ಸಮ್ಮತಿಯಿತ್ತು ಖತಿಯಳಿವದೈ ಕ್ಷಿತಿಯೊಳಗೆ ಪಿತ ಶ್ರೀ ನರಹರಿಯ ಪದಪದುಮ ಅತಿ ತೀವ್ರದಲಿ ತೋರಿ ಖ್ಯಾತಿ ತಂದೀವುದಕೆ 3
--------------
ಪ್ರದ್ಯುಮ್ನತೀರ್ಥರು