ಒಟ್ಟು 2 ಕಡೆಗಳಲ್ಲಿ , 1 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ದೇಹವ ದಂಡಿಸಲೇಕೆ ಮನುಜ ಪ ಶ್ರೀ ಹರಿನಾಮವ ಸ್ನೇಹದಿ ಭಜಿಸೆಲೊ ಅ.ಪ ಭಕುತಿಯೆ ಸಾಧನ ಹರಿಯ ಪ್ರಸಾದಕೆ ಮುಕುತಿಗೆ ಹರಿಯ ಪ್ರಸಾದವೆ ಸಾಧನ ರುಕುಮಿಣೀರಮಣನು ಪೂರ್ಣ ಸ್ವರಮಣನು ಭಕುತಿಗೆ ಸಜ್ಜನ ಸಂಘವೆ ಸಾಧನ 1 ವಾದÀ ವಿವಾದವು ಆಗಿ ಮುಗಿಯಿತೊ ಮೋದತೀರ್ಥರ ಮತ ಸಾಧನ ಕೈಪಿಡಿ ಓದಿ ನೀ ಸುಲಭದಿ ತತ್ವಗಳರಿಯುತ ಮಾಧವನಂಫ್ರಿಯ ಹರುಷದಿ ಭಜಿಸೆಲೊ 2 ಹೃದಯವು ನಿರ್ಮಲವಾಗುವ ತನಕ ಮದ ಮತ್ಸರಗಳ ಸದೆ ಬಡಿಯುತಲಿ ಎದೆಯಗೆಡದೆ ಸದಾ ಹರಿಯ ಭಜಿಸೆಲೊ ಸದಮಲಗುಣನು ಪ್ರಸನ್ನನಾಗುವನು 3
--------------
ವಿದ್ಯಾಪ್ರಸನ್ನತೀರ್ಥರು
ಭಯವುಂಟೆ ಹರಿಯ ಭಕುತರಿಗೆ ಪ ತತ್ವಗಳರಿಯುತ ಕೃತ್ಯವ ಮಾಡುವ ಸಾತ್ವಿಕರಾಗಿರುವ ಸುಜನರಿಗೆ1 ಕಾಲ ವ್ಯರ್ಥಮಾಡದೆ ಪುರು ಪಾರ್ಥಪ್ರದನ ಪದನ ಭಜಿಪರಿಗೆ 2 ಕಾಮ ಕ್ರೋಧಗಳ ಬಿಟ್ಟ ಮನದಿ ಶ್ರೀ ರಾಮನ ಚರಣಗಳ ಭಜಿಪರಿಗೆ 3 ಸಾಧು ಸಂಗದಲಿ ಮೋದವಗೊಳ್ಳುತ ಮಾಧವನನು ಸತತ ನೆನೆವರಿಗೆ 4 ಚಿನ್ಮಯ ರೂಪ ಪ್ರಸನ್ನ ಶ್ರೀಕೃಷ್ಣನ ಉನ್ನತ ಮಹಿಮೆಗಳ ಸನ್ನುತಿಸಲು 5
--------------
ವಿದ್ಯಾಪ್ರಸನ್ನತೀರ್ಥರು