ಬೃಂದಾವನವಿದೆಕೊ ಯತಿವರ ಪ
ನಂದ ನಂದನ ಗೋವಿಂದನ ಪಾದಾರ
ವಿಂದವ ಪೂಜಿಪ ಶ್ರೀರಾಘವೇಂದ್ರನ ಅ.ಪ
ಮಂತ್ರಾಲಯದಿ ಸ್ವತಂತ್ರ ಭೂಮಿಕೆಯಲ್ಲಿ
ಯಂತ್ರ ಸ್ಥಾಪನೆಗೈದು ಸಂತೃಪ್ತಿಯಾಂತು
ಮಂತ್ರಾರ್ಥ ತತ್ವಗಳನುಪದೇಶ ಗೈಯುವ
ಮಂತ್ರ ಸ್ವರೂಪನು ಸೇವಿಪ್ಪ ಪುಣ್ಯದ1
ಗುರುರಾಜರಾಜನು ಕರುಣಾಪಯೋಧಿಯು
ನಿರುತ ಭಕ್ತರಿಗೆಲ್ಲ ವರವೀವ ದೊರೆಯು
ಸರಸೀರುಹಾಕ್ಷ ಮಾಂಗಿರಿವಾಸ ರಂಗನ
ಚರಣವ ತೋರುವ ಕೃಪೆಮಾಡುವಾತನ 2