ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗುರುಭಕ್ತಿ ಮನವೆ ನೀ ಮಾಡು ಸ್ಥಿರ ಗುರುತಿಟ್ಟು ಬಾಹುದು ಪರಾತ್ಪರ ಸರಿಗಾಣೆನೊ ಪುಣ್ಯಕೆ ನೋಡಿದರ ಕರಕೊಂಬುದಿದೆ ಸುಖ ಸಜ್ಜನರ 1 ಹಿಡಿಬೇಕು ಸದಾ ಗುರುಭಾವದೃಢ ಉಪಾಧಿ ಜಡ ಪಡಕೊಂಬುದು ಮಾಡಬಾರದು ತಡ ಒಡಲ ಹೊಕ್ಕರ ಸದ್ಗುರು ಕೈಯಬಿಡ 2 ಗುರುನಾಮ ನಿಧಾನ ನೆನಿಯೊ ಸದ ಸುರಲೋಕಕೆ ಪಾವನ ಮಾಡುವದ ಪರತತ್ವಕೆ ಪಾರನೆದೋರುವದ ಸ್ಮರಿಸಿನ್ನು ಮಹಿಪತಿ ಮುಖ್ಯವಿದ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಪರಮ ಪುರುಷ ನಿನಗೆ ನಮೋ ನಮೋಪರಮ ಪರಾತ್ಪರಗೆ ನಮೋ ನಮೋ ಪ ಆದಿ ಅನಾದಿಗೆ ನಮೋ ನಮೋ ಮಹದಾದಿ ತತ್ವಕೆ ನಮೋ ನಮೋವಾದರಹಿತನಿಗೆ ನಮೋ ನಮೋ ನಿಜವಾದ ವಸ್ತುವಿಗೆ ನಮೋ ನಮೋ 1 ಲೋಕ ಹಿತಾಖ್ಯಗೆ ನಮೋ ನಮೋ ಜಗದೇಕವಲ್ಲಭನಿಗೆ ನಮೋ ನಮೋನಾಕ ವಂದಿತಗೆ ನಮೋ ನಮೋ ನಿ-ರಾಕಾರ ನಿತ್ಯನಿಗೆ ನಮೋ ನಮೋ2 ಸಿಂಧು ಆನಂದಗೆ ನಮೋ ನಮೋನಾದ ಬಿಂದು ಕಳಾತ್ಮಗೆ ನಮೋ ನಮೋಸುಂದರ ತೇಜಗೆ ನಮೋ ನಮೋಚಿದಾನಂದ ವಿಗ್ರಹಗೆ ನಮೋ ನಮೋ 3
--------------
ಚಿದಾನಂದ ಅವಧೂತರು
ಮನವೆ ಮಾನ್ಯನ ಮನ್ನಿಸು ಶ್ರೀವ್ಯಾಸ ಮುನಿಗೆ ಒಲಿದಿಹ ವಾಯು ನಾ ಪ ಪ್ರತಿ ಸಂಚರ ಕಾಲದಿ ಅವಿಲೀನ ಮತಿಯುಳ್ಳ ದೇವನಿವನು ಸುತ ಜಯಾದೇವಿಗೀತ ತನ್ನ ಸರಿ ಚತುರಾಸ್ಯ ದೇಹದೊಳಿಹ 1 ಚತುರವಿಂಶತಿ ತತ್ವಕೆ ಅಭಿಮಾನಿ ಮತಿಯುಳ್ಳ ಸೂತ್ರನಾಮ ಹರಿರೂಪ ಮಿತಿ ಇಲ್ಲದಲೆ ಕಾಂಬನೊ 2 ಯತಿಯಾಗಿ ಬಂದು ಹರಿಯ ಕಾರ್ಯಗಳ ಕೃತಿಸಿ ತಾ ನಿಂದು ವ್ಯಾಸ ವ್ರತಿಯಿಂದ ಮಾಡಿಸಿದ ಈತಗೆ ಪತಿ ವಾಸುದೇವವಿಠಲ3
--------------
ವ್ಯಾಸತತ್ವಜ್ಞದಾಸರು
ಹನುಮಾನ್ ಕೀ ಜೈ ಹನುಮಾನ್ ಕೀ ಜೈ ಹನುಮಾನ್ ಕೀ ಜೈ ಜೈ ಹನುಮಾನ್ ಪ ಥೈ ಥೈ ಥೈ ಥೈ ಥೈಥಕ ಥೈಥಕ ತಕಿಟ ತಕಿಟ ತಕ ಜೈ ಹನುಮಾನ್ ಅ.ಪ. ಹರಿ ಸರ್ವೋತ್ತಮನೆಂಬುವ ತತ್ವಕೆ ಜಯ ಭೇರಿಯ ಹೊಡೆದೆಯೊ ಹನುಮಾನ್ ಢಣ ಢಣ ಢಣ ಢಣ ಢಣ ಢಣ ಢಣ ಜಯಭೇರಿಯ ನಾದವು ಕೇಳುತಿದೆ 1 ವೈಷ್ಣವ ತತ್ವಗಳನು ಬೋಧಿಸಿ ಜಯ ಭೇರಿಯ ಹೊಡೆದೆಯೊ ಬಲಭೀಮ ಢಣ ಢಣ ಢಣ ಢಣ ಢಣ ಢಣ ಜಯ ಭೇರಿಯ ನಾದವು ಕೇಳುತಿದೆ 2 ಮೋಕ್ಷಕ್ಕೆ ಒಳ್ಳೆಯ ಮಾರ್ಗವ ತೋರುತ ಜಯ ಭೇರಿಯ ಹೊಡೆದೆಯೊ ಮಧ್ವ ಢಣ ಢಣ ಢಣ ಢಣ ಢಣ ಢಣ ಢಣ ಜಯಭೇರಿಯ ನಾದವು ಕೇಳುತಿದೆ 3 ಇಂದು ನುಡಿಯುತಿದೆ ಮಂದಿಗಳೆಲ್ಲರು ಕೇಳುವರು ತಂದೆ ಪ್ರಸನ್ನನ ಮಂದಿರಲಿ ಇದು ಎಂದೆಂದಿಗೂ ಶಾಶ್ವತವಿರಲಿ 4
--------------
ವಿದ್ಯಾಪ್ರಸನ್ನತೀರ್ಥರು