ಒಟ್ಟು 6 ಕಡೆಗಳಲ್ಲಿ , 6 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಮ್ಮಮ್ಮ ಗೋಪಿಯೆನೆ ಏನೆಂಬೆ ಪರ ಬೊಮ್ಮ ಮಗನೆಂಬೊ ಧೈರ್ಯಕೆ ಪ. ಬೊಮ್ಮನಯ್ಯನ ಸಿರಿರಮ್ಮೆ ಪತಿಯ ಘನ ಪೆರ್ಮೆ ಗುಣಗಣನಿಲಯನ ಅ.ಪ. ಹೊಳೆವ ಶ್ರೀರೂಪು ವಟಪತ್ರದಲ್ಲಿ ಪ್ರಳಯಜಲಧಿಯ ಶಯನನ ಸೆಳೆಮಂಚದ ಮ್ಯಾಲೆ ಮಗ್ಗುಲೊಳಿಟ್ಟು ತನ್ನ ಗೋಪಿ 1 ಚರಾಚರಂಗಳ ಸೃಷ್ಟಿ ಸ್ವಯಿಚ್ಛೆಯಿಂದ ಪುರುಷರೂಪವ ಧರಿಸಿದ ಪರಮಮಂಗಳ ಮೂರುತಿಯ ತನ್ನ ಗೋಪಿ 2 ಕತ್ತಲೆಯನು ನುಂಗಿ ತತ್ವಂಗಳನು ಕೊಂಡು ಮತ್ತೆ ಬೊಮ್ಮಾಂಡದೊಳಗೆ ಪೊಕ್ಕು ತತ್ವಸಾರದಿಂದೊಪ್ಪುವ ಕೊಮರನ ಗೋಪಿ 3 ಅದಭ್ರಸೃಷ್ಟಿಗಳಿಗಗೋಚರನಾದ ಆದಿಮೂರುತಿ ¸ಚ್ಚಿದಾನಂದನ ಸದಾ ತನಯನೆಂದೆತ್ತಿ ಮುದ್ದಿಸಿ ಸುಖ ಗೋಪಿ 4 ಚತುರುಭುಜ ಶಂಖ ಚಕ್ರ ಗದೆ ಪದುಮ ಸುತಪ ಪ್ರಶ್ನೆಗೆ ವರವಿತ್ತ ಶ್ರುತಿಶಿರೋಮಣಿಯೆಂದರಿಯದೆ ತಾ ಗೋಪಿ 5 ಬೊಮ್ಮಕಲುಷಾನಂತ ಸಹಸ್ರಗಳ ನಿಮಿಷಮಾತ್ರದಿ ಪಡೆದನ ಬೊಮ್ಮಾಂಡವೆ ತನ್ನ ರೋಮಕೂಪದಲ್ಲಿಪ್ಪ್ಪ ರನ್ನವೆ ಮಗನೆಂದಳೆ ಗೋಪಿ6 ಅನ್ನಂತ ರವಿತೇಜಕಿರೀಟದ ಅನ್ನಘ್ರ್ಯ ಸರ್ವಾಭರಣ ಪೊನ್ನ ವಸ್ತ್ರವನ್ನುಟ್ಟ ಅದ್ಭ್ಬುತ ಬಾಲಕನ ಗೋಪಿ 7 ಅನ್ನಂತಾನಂತ ಜೀವಗಣಗಳು ಅನ್ನಂತಾನಂತ ಕರ್ಮಗಳು ಅನ್ನಂತಾನಂತ ಗಾಯತ್ರಿಗೆ ಕÀರ್ತೃ ವಿಷ್ಣು ಗೋಪಿ 8 ಅನ್ನಂತಾಸನ ಶ್ವೇತದ್ವೀಪ ವೈಕುಂಠ ದನ್ನವರತ ವಾಸವಾಗಿಪ್ಪನ ಅನ್ನಿಮಿಷರ ಯೋಚನೆಗೆ ಒಲಿದನ ಗೋಪಿ 9 ಧರ್ಮದÀ ವೃದ್ಧಿಗೆ ಧರ್ಮದ ಹಾನಿಗೆ ತನ್ನಿಚ್ಛೆಯಲವತರಿಸಿದ ಮಮ ಪ್ರಾಣಾಹಿ ಪಾಂಡವನೆನಿಸಿದ ಗೋಪಿ 10 ಉದ್ದಾಮ ಕಾಂಚೀದಾಮ ಕಂಕಣ ಶ್ರೀ- ಮುದ್ರೆಯ ಶ್ರೀವತ್ಸಕೌಸ್ತುಭಧರನ ಮಧ್ವಮುನಿಗೆ ತಾನೊಲಿದು ಬಂದನ ಗೋಪಿ 11 ಸರಸಿಜಬೊಮ್ಮಾಂಡ ಒಡೆದಾಗ ವಿರಿಂಚಿ ತೊಳೆದ ಪಾದೋದಕವ ಹರ ಸೇವಿಸಲಾಗ ಶಿವನ ಮಾಡಿದ ಹರಿಯ ಮಗನೆಂದಳೆ [ಗೋಪಿ] 12 ದೇವಕಿ ಉದರದಲ್ಲಿದ್ದಾಗ ಬ್ರಹ್ಮಾದಿ ದೇವರಿಂದಲ್ಲಿ ಕೀರ್ತಿಸಿಕೊಂಡು ಭಾವಕಿ ದೇವಕಿ ವಸುದೇವನಲ್ಲಿ ಪಿತೃ ಗೋಪಿ 13 ಶಿಶುರೂಪವ ತೋರಿದ ಬೊಮ್ಮನ ಕಂಡು ವಸುದೇವಗೆ ನದಿ ಎಡೆ ಬಿಡೆ ಸಾಸಿರನಾಮ ಚಿತ್ರವಾಗಿದ್ದ ಜಗ- ಗೋಪಿ 14 ಪಾಲಗಡಲಲ್ಲಿ ಪವಡಿಸಿಪ್ಪನ ಕಾಲಮೇಲೆ ಮಲಗಿಸಿಕೊಂಡು ನೀಲಮೇಘಶ್ಯಾಮಯೆಂದು ಬಣ್ಣಿಸುತಲಿ ಗೋಪಿ 15 ಆದಿದೇವನು ಬ್ರಹ್ಮಸೂತ್ರವ ಕಲ್ಪಿಸಿ ವೇದ ವಿಭಾಗವ ಮಾಡಿದನ ಆದರದಿಂತುಂತೆಂದು ಕಲಿಸಿ ಸಂ ಗೋಪಿ 16 ಭಾನುಶತಕೋಟಿತೇಜಪ್ರಕಾಶನ್ನ ಆನಂದವನೆ ನೋಡಿ ಮನ ಉಬ್ಬಿ ಆನಂದನಿಧಿಯ ತೊಡೆಯ ಮ್ಯಾಲೆಯಿಟ್ಟು ಗೋಪಿ 17 ಶೃಂಗಾರನಿಧಿಯನ್ನು ಬಾಯೆಂದು ಕರೆದು ರ- ಥಾಂಗಪಾಣಿಯನೆ ಎತ್ತಿಕೊಂಡು ತಿಂಗಳನೋಡಯ್ಯ ಕಂದ ಎಂದಾತನ ಗೋಪಿ 18 ಸನ್ನಕಾದಿಗಳಯ್ಯನ ಪಿತನ ಕರೆ ದೆನ್ನ ಮಾಣಿಕವೆಯೆಂದಪ್ಪಿಕೊಂಡು ಹೊನ್ನ ತಾ ಗುಬ್ಬಿಯೆಂದಾಡು ಎನ್ನಯ್ಯನೆ ಗೋಪಿ 19 ಗಂಭೀರವಾರಿಧಿಗೆ ಅಂಬಾ ಹೂಡಿದ ತೋಳು ಇಂದಿರೆಯನೆ ಅಪ್ಪಿದ ತೋಳು ಶಂಭರಾರಿಯ ಪಿತ ತೋಳನ್ನಾಡೈ ಎಂದು ಗೋಪಿ 20 ಪಾದ ಉ- ದ್ದಂಡ ಬಲಿಯಮೆಟ್ಟಿದ ಪಾದ ಪುಂಡರೀಕಾಯತವಾದ ಪಾದದಿ ಪ್ರ- ಗೋಪಿ 21 ನಿತ್ಯತೃಪ್ತನು ಹಸ್ತ (ಸಿದ?) ನೆಂದೆನುತಲೆ ಇತ್ತ ಬಾ ಹೊರೀಯೆಂದಾದರಿಸಿ ಹೊತ್ತಾರಿಂದಮ್ಮೆ ಉಣ್ಣದಿರಲು ಹೊಟ್ಟೆ ಗೋಪಿ 22 ಅಮ್ಮೆ ಉಂಬುವ ಪುಟ್ಟ ಬಾಯ ಮುದ್ದಿನ ಮಾ ರಮ್ಮೆಯನರಸುವನಚ್ಚರಿಯ ಅಮ್ಮೆ ನೋಡಿ ನಗುವ ಮುದ್ದು ಬಾಲಕನ ಪರ ಗೋಪಿ 23 ತಾಯ ಮೊಗವ ನೋಡುತ್ತಾಕಳಿಸುತ ಬಾಯಲ್ಲೀರೇಳುಲೋಕವ ತೋರೆ ಆಯತೆ ನೋಡಿ ಮರಳಿ ಕಂಗೆಟ್ಟು ವಿಶ್ವ- ಗೋಪಿ 24 ಜ್ಞಾನಘನನ ವಿಶ್ವತೋನಯನನ ಆನಂದಚರಿತ್ರನ ಅವ್ಯಕ್ತನ ಜ್ಞಾನಿಗಳ ಹೃತ್ಕಮಲದೊಳಿಹನ ಕಣ್ಣಮುಚ್ಚಿ ಗೋಪಿ 25 ಹಾಲ ಹರವಿಯ ಒಡೆದು ಬಂದು ಗೋ- ಪಾಲ ನೀನೆಲ್ಲಿಗೆ ಪೋದೆಯೆಂದು ಕಾಲಕರ್ಮಂಗಳಿಗೆ ಕಾರಣವಾದೋನ ಗೋಪಿ 26 ಜಗದುದರ ಜಂಘಿಸುತ ಅಡಿಯಿಡೆ ಮೃಗಲೋಚನೆ ಮೈಮರೆದಿರೆ ಅಗಣಿತಮಹಿಮನು ಚರಿಸುತ ಬರ ಗೋಪಿ 27 ಆಮ್ಮಹಾ ಮತ್ತಿಯ ಮರನ ಮುರಿದು ಸುರರು ಜಯವೆನ್ನೆ ಶ್ರೀಮಣಿ ಶಿವರಿಂದ ಕೀರ್ತಿಸಿಕೊಂಬ ಗೋಪಿ 28 ಕತ್ತಲೆಯೊಳಗಿದ್ದು ಅಂಜಿದ ಮಗನೆಂದು ಶ್ರುತಿಮಂತ್ರಗಳಿಂದುಚ್ಚರಿಸಿ ಮೃತ್ಯುಂಜಯನ ಪಿರಿಯನೆತ್ತಿಕೊಂಡು ಗೋಪಿ 29 ಶೇಷಶಾಯಿಯ ಹಾಸಿ ಮಲಗಿಸಿ ಚಾರು- ವೇಷನ್ನ ನಿದ್ರಿಗೈಸುವೆನೆಂದು ಸಾಸಿರಮುಖಭೂಷಣನ ಪಾಡುತ್ತ ಸಂ- ತೋಷದಿ ಮೈಮರೆದಳೆ ಗೋಪಿ30 ತ್ರಿಗುಣಾತೀತನ್ನ ಪೊಂದೊಟ್ಟಿಲೊಳ್ಮಲಗಿಸಿ ಜೋಗುಳ ಪಾಡುವ ಯಶೋದೆÉಯ ಎಸೆವ ನೀಲವಸ್ತ್ರನು ಪಾಡೆನ್ನೆ ಕೃಷ್ಣ ಅನು- ಗೋಪಿ 31 ಹರಿಯ ಹೊರಿಸುವಳಲ್ಯಲ್ಲಿ ನಿಮ್ಮಣ್ಣ ವರ ಸಿಂಹಾಸನವಾಗಿಪ್ಪನೆಂದು ಸಿರಿಯಕೂಡೇಕಾಂತದಲಿಪ್ಪನ್ನ ಗೋಪಿ 32 ಪಾದ ನಿಮ್ಮಣ್ಣನ ಶಿರದಲೊಪ್ಪಿದೆÀಯೆಲೆ ಕಂದ ಸುರವರರ ಭಾಗ್ಯನಿಧಿಯೆ ಬಲರಾಮ ಗೋಪಿ 33 ಕಣ್ಣಮುಚ್ಚಿದ ಕೃಷ್ಣನೆಂದು ತೊಟ್ಟಿಲ ಬಿಟ್ಟು ಪುಣ್ಯಾಂಗನೆ ಮೈಮರೆದಿರೆ ಅಣ್ಣ ಆಶನು ಬೆಣ್ಣೆಯ ಕಳಹೋದ ಚಿಣ್ಣನ ಕಾಣೆನೆಂದಳೆ ಗೋಪಿ34 ನೀಲಾಂಬರನ ಬೆನ್ನ ಮೆಟ್ಟಿ ನೆಲವಿನ ಮ್ಯಾಲಿನ ಬೆಣ್ಣೆಯ ಮೆಲ್ಲೆ ಕೃಷ್ಣ ಬಾಲಕಿಯರು ಕೂಡಿ ಕಳ್ಳ ಸಿಕ್ಕಿದನೆಂದು ಗೋಪಿ 35 ಹುಟ್ಟ್ಟದ ಬೆಳೆಯದ ಹಸುಳೆ ಅಣ್ಣನ ಬೆನ್ನ ಮೆಟ್ಟಿ ನೆಲವು ಜಗ್ಗಿದನೆಂದು ರಟ್ಟು ಮಾಡಿದಿರೆಲ್ಲ ನೋಡಿರವ್ವಾ ಎನ್ನ ಗೋಪಿ 36 ಕಂದನ ಎತ್ತಿಕೊಂಡು ರಾಜ್ಯದಂಗನೆಯರ ಮಂದಿರವನೆ ಪೊಕ್ಕು ಬರುತಿರೆ ಒಂದೊಂದು ಕೌತುಕವನೆ ಕಂಡಾನಂದ ಗೋಪಿ 37 ಶಶಿಮುಖಿಯಂಗಳದ ಹಾಲಹಳ್ಳ ಮೊಸರ ಮಡುವು ಬಾಗಿಲ ಮುಂದೆ ಪ್ರಸಾದವೆಲ್ಲ ಬೆಣ್ಣೆ ಫಲಿತವಾಗಿರೆ ಗೋಪಿ 38 ವಾರಿಧಿಯೊಳಗಿದ್ದ ಪನ್ನಗಶಾಯಿಯ ತೇರ ಮೇಲೆ ಇದ್ದ ಬಾಲಕನ ಮೂರುತಿ ಒಂದೆಂಬೋ ಅ- ಗೋಪಿ 39 ದ್ರೌಪದಿಗಕ್ಷಯವಿತ್ತನ ಗುರು ಸಾಂ- ದೀಪಗೆ ಸುತನ ತಂದಿತ್ತನ ಪ್ರೀತಿಯಿಂದಲಿ ಯಜ್ಞಪತ್ಯರಿಗೊಲಿದ ಸುಪ್ರ- ಗೋಪಿ 40 ಘಾತಪುತ್ರರ ಆರು ಮಂದಿಯ ತರಹೇಳಿ ಮಾತೆಯೆಚ್ಚರಿಸೆ ಅಂಗೀಕರಿಸಿ ಅತಿ ಬೇಗದಿಂದಣ್ಣನ ತಂದು ತೋರಿದ ಅ- ಗೋಪಿ 41 ಭಕುತ ಶ್ರುತದೇವ ಬಹುಳಾಶ್ವರಾಯಗೊಲಿ ದೇಕ ಕಾಲದಿ ರೂಪೆರಡಾಗಿ ಆ ಕರುಣಾಬ್ಧಿಯ ಮಾಯಾರೂಪಿÀನ ಪರಿ- ಗೋಪಿ 42 ಪೂತನಿ ಶಕಟವತ್ಸಾಸುರ ವೃಷಭÀನ ಪಾತಕಿ ಚಾಣೂರ ಕುಂಜರನ ಘಾತಿಸಿ ಕಂಸನ್ನ ರಂಟೆಯಾಡಿದ ಬಲು ಭೂತನ್ನ ಮಗನೆಂದಳೆ ಗೋಪಿ43 ಬಾಲತನದಲ್ಲಿ ಸಖನಾಗಿ ಬಂದು ಕು- ಚೇಲ ತಂದವಲಕ್ಕಿಯ ಧರಿಸಿ ಮೇಲುತನದಿಂದ ಸೌಭಾಗ್ಯವಿತ್ತ ಶ್ರೀ ಲೋಲನ್ನ ಮಗನೆಂದಳೆ ಗೋಪಿ&ಟಿbsಠಿ
--------------
ವಾದಿರಾಜ
ಜರಿಯಬೇಡ ಹರಿಯ ಮರೆಯಬೇಡೆಂದೆಂದು |ತಿರಿಯಬೇಡ ಖಳರ ಮನೆಗೆ ಪೋಗಿ ||ಪ||ಒರೆಯಬೇಡನ್ಯರಿಗೆ ರಹಸ್ಯ ತತ್ವಗಳನು |ಬೆರೆಯಬೇಡ ಪರರ ಸತಿಯ ಸ್ವಪ್ನದಲೂ ||ಅ|| ||ಪ|| ಮೂಕವಾರ್ತೆಯ ನಿನ್ನ ಕಿವಿಗೆ ಕೇಳಿಸಬೇಡ |ಶ್ರೀಕಾಂತ ಚರಿತೆಯನು ಕೇಳದಿರಬೇಡ |ಪಾಕವನು ಮಾಡಿ ಏಕಾಂಗಿಯಾಗುಣಬೇಡ|ಭೂಕಾಂತರನುಸರಿಸಿ ಬೆಸಗೊಳ್ಳಬೇಡ || ಪಂಡಿತರು ಪಾಮರರು ಆರಿಗಾದರೂ ನಿನ್ನ |ಕಂಡವರಿಗೆಲ್ಲ ಕೌತುಕವು ತೋರಿದರೂ |ಹೆಂಡಿರು ಮಕ್ಕಳು ಅಳಿಯ ಸೋಸೆ ಮೊಮ್ಮಕ್ಕಳು |ಉಂಡುಟ್ಟು, ದ್ವಿಜರು ಸಹ ಗಂಡುಗಲಿಯಾದರೂ|| ಮಂದಮತಿಗಳ ಕೂಡೆ ಮಾತಾಡಲಿ ಬೇಡ |ನಿಂದಕರ ಕಣ್ಣೆತ್ತಿ ನೋಡಬೇಡ |ಇಂದಿರೆಯರಸ ಶ್ರೀ ವಿಜಯ ವಿಠಲರ ಚರಣ|ದ್ವಂದ್ವದಲಿ ಮಸ್ತಕವನಿಡದಿರಬೇಡ ||
--------------
ವಿಜಯದಾಸ
ಬೂದಿಯ ಹಚ್ಚಿರೊ ಶುದ್ಧ ವೈಷ್ಣವರಿದ- ರಾದಿಯ ತಿಳಿಯಲು ಕೇಳಿ ಬಲ್ಲವರು ಪ ಮೂಲಾಗ್ನಿಯಿಂದಲೆ ಸುಟ್ಟಿಹ ಬೂದಿ ಮೂಲ ಮಂತ್ರಂಗಳ ಜಪಿಸುವ ಬೂದಿ ಮೂಲಾಧಾರವ ತೋರುವ ಬೂದಿ ಕಾಲ ಕರ್ಮಂಗಳ ಕಡಿವಂಥ ಬೂದಿ 1 ಏಳು ಸುತ್ತಿನ ಒಳಗೆ ಇರುವಂಥ ಬೂದಿ ಏಳು ವೈರಗಳನ್ನು ಕಳೆವಂಥ ಬೂದಿ ಏಳು ಅಗಳ ದಾಟಿ ಹಾರುವ ಬೂದಿ ಬ- ಹಳ ಜ್ಞಾನಿಗಳೆಲ್ಲ ಧರಿಸುವ ಬೂದಿ 2 ಒಂಭತ್ತು ಕಡೆಯಿಂದ ಒಲಿದಿಟ್ಟ ಬೂದಿ ಕುಂಭಕದೊಳಗದ ಇರಿಸುವ ಬೂದಿ ಸಂಭ್ರಮದಿ ಅರಸನ ಗೆಲುವಂಥ ಬೂದಿ ಅಂಬರಕಾಗಿಯೆ ಲಂಬಿಪ ಬೂದಿ 3 ಪಂಚಾಗ್ನಿಯಿಂದಲೆ ಬೆಂದಿಹ ಬೂದಿ ಪಂಚತತ್ವಂಗಳನು ಗೆಲುವಂಥ ಬೂದಿ ಪಂಚ ಮೃತ್ಯುಗಳನ್ನು ಕಳೆವಂಥ ಬೂದಿ ವಂಚಿಸಿಕೊಳ್ಳದೆ ಧರಿಸುವ ಬೂದಿ 4 ಆರು ವೈರಿಗಳನ್ನು ತೂರುವ ಬೂದಿ ಆರು ಭಾವಗಳನ್ನು ಬೇರಿಟ್ಟ ಬೂದಿ ಆರು ಭ್ರಮೆಗಳನ್ನು ಕಡಿದಿಟ್ಟ ಬೂದಿ ಆರಿಗೂ ತೋರದೆ ಹಾರುವ ಬೂದಿ 5 ಅಷ್ಟಮದಂಗಳ ಕಟ್ಟುವ ಬೂದಿ ದುಷ್ಟಾತ್ಮರನ್ನು ಅಟ್ಟುವ ಬೂದಿ ಕುಟ್ಟೆ ಹಿಡಿವ ಬೀಜಕಿಟ್ಟಿಹ ಬೂದಿ ಭ್ರಷ್ಟಕರ್ಮಗಳನ್ನು ಸುಟ್ಟಂಥ ಬೂದಿ 6 ಸಕಲ ಋಷಿಗಳೆಲ್ಲ ಧರಿಸುವ ಬೂದಿ ತ್ರಿಕರ್ಣ ಶುದ್ಧದಿ ತುಂಬಿದ ಬೂದಿ ಮಕರಕುಂಡಲಧರ ಮರುಳಹ ಬೂದಿ ಸಖನಹ ವರಾಹತಿಮ್ಮಪ್ಪ ಬೂದಿ 7
--------------
ವರಹತಿಮ್ಮಪ್ಪ
ವಂದಿಪೆ ಶ್ರೀಮನ್ನಾರಾಯಣಗೆ ವಂದಿಪೆ ಅಮ್ಮ ಲಕ್ಷ್ಮೀದೇವಿಗೆ ಪ ವಂದಿಪೆ ವಿಶ್ವಕ್ಸೇನರಿಗೆ ಕುಂದದಿರಲಿ ಎನ್ನ ಸನ್ಮತಿ ಎಂದು ಅ.ಪ ವಂದಿಪೆ ನಾ ಮೊದಲಾಳ್ವಾರರಿಗೆ ಅಂದದಿ ಹರಿಯ ತೋರಿಕೊಟ್ಟರಿಗೆ ಕಂದಮಿಳಲಿ ಸೊಲ್ವ ನುಡಿಗಳಿಗೆ ಪ್ರ- ಬಂಧದಿವ್ಯಗಳ ಬೆಳಗಿಸಿದವರಿಗೆ 1 ವಂದಿಪೆ ವಂದಿಪೆ ಆಚಾರ್ಯರಿಗೆ ಚಂದದಾ ಯತಿತ್ರಯರುಗಳಿಗೆ ಸುಂದರ ಶ್ರೀವೈಷ್ಣವ ತತ್ವಗಳನು ಹೊಂದಿಸಿ ಬಂಧಿಸಿ ಸ್ಥಾಪಿಸಿದವರಿಗೆ 2 ಇನ್ನು ವಂದಿಪೆ ಗುರುಪೀಠಕ್ಕೆ ಚೆನ್ನ ತಿರುನಾರಾಯಣಪುರಕೆ ಉನ್ನತ ರಂಗದಾಸಯತಿವರ್ಯಗೆ ಸನ್ನುತ ಪಿತಾನುಜ ಶಾಮದಾಸರಿಗೆ 3 ಸಾಜದಲೆನ್ನಲಿ ಅರಿವನು ಮೂಡಿಸಿ ಓಜನನಾಗಿಸೆ ಕೇಶವ ನಾಮದಿ ಆರ್ಜಿಸಿ ಉಪಾದಾನದಿ ಬಳಲಿದ ಪೂಜ್ಯಪಿತ ವೆಂಕಟರಂಗಾರ್ಯರಿಗೆ 4 ವಂದಿಪೆ ಕೊನೆ ಮೊದಲಿಲ್ಲದೆ ವಂದಿ- ಪೆಂ ದಾಸನ ಮಾಡಿದ ದೇವನಿಗೆ ತಂದೆ ಜಾಜಿಪುರಾಧೀಶನಿಗೆ ಮುದ- ದಿಂದ ಶ್ರೀ ಚೆನ್ನಕೇಶವಗೆ 5
--------------
ನಾರಾಯಣಶರ್ಮರು
ಶೃಂಗಾರ ಬೇಕಾಯಿತೆ ಶ್ರೀಕಾಂತ ನಿನಗೆ ಶೃಂಗಾರವಾರ್ಧಿ ವೇಲಾಪುರದ ಚೆನ್ನಾ ಪ ಕರದಲ್ಲಿ ದಂಡ ಕೋಲು ಕಮಂಡಲನೀವ ಪರಿ ಹೇಗೆ ದಾಸಾನುದಾಸನಲ್ಲ ಇರಲಿಯಂತದುವೆ ಶ್ರೀಧರನೆಂಬ ಪೆಸರು ಬಿ ಟ್ಟುರದ ಲಕ್ಷ್ಮಿಯನು ಕಡೆಗಿರಿಸು ನೋಡುವೆನೊಮ್ಮೆ 1 ಎನ್ನ ಬಿನ್ನಪವೊಂದುಂಟು ಕೇಳೆಲೊ ಸ್ವಾಮಿ ನಿನ್ನ ಬಾಲಬ್ರಹ್ಮಚಾರಿಯೆಂದು ಸನ್ನುತಿಸುತಿದೆ ವೇದ ಶಾಸ್ತ್ರಾಗಮಗಳೆಲ್ಲ ಇನ್ನದಕುಪಾಯವೇನಯ್ಯ ಚೆನ್ನಿಗರಾಯ 2 ಶೃಂಗಾರಗಳನು ತತ್ವಂಗಳನು ಪೇಳುವಡೆ ಗುಂಗುರುಹಿನೊಳಲ್ಪ ಮನುಜನಲ್ಲ ಮಂಗಳಾತ್ಮಕನೆ ಆಡಿಸಿದೊಡಾಡುವೆ ಎನಗೆ ಭಂಗವೇಕಯ್ಯ ವೈಕುಂಠ ಚೆನ್ನಿಗರಾಯ 3
--------------
ಬೇಲೂರು ವೈಕುಂಠದಾಸರು
ಹನುಮಾನ್ ಕೀ ಜೈ ಹನುಮಾನ್ ಕೀ ಜೈ ಹನುಮಾನ್ ಕೀ ಜೈ ಜೈ ಹನುಮಾನ್ ಪ ಥೈ ಥೈ ಥೈ ಥೈ ಥೈಥಕ ಥೈಥಕ ತಕಿಟ ತಕಿಟ ತಕ ಜೈ ಹನುಮಾನ್ ಅ.ಪ. ಹರಿ ಸರ್ವೋತ್ತಮನೆಂಬುವ ತತ್ವಕೆ ಜಯ ಭೇರಿಯ ಹೊಡೆದೆಯೊ ಹನುಮಾನ್ ಢಣ ಢಣ ಢಣ ಢಣ ಢಣ ಢಣ ಢಣ ಜಯಭೇರಿಯ ನಾದವು ಕೇಳುತಿದೆ 1 ವೈಷ್ಣವ ತತ್ವಗಳನು ಬೋಧಿಸಿ ಜಯ ಭೇರಿಯ ಹೊಡೆದೆಯೊ ಬಲಭೀಮ ಢಣ ಢಣ ಢಣ ಢಣ ಢಣ ಢಣ ಜಯ ಭೇರಿಯ ನಾದವು ಕೇಳುತಿದೆ 2 ಮೋಕ್ಷಕ್ಕೆ ಒಳ್ಳೆಯ ಮಾರ್ಗವ ತೋರುತ ಜಯ ಭೇರಿಯ ಹೊಡೆದೆಯೊ ಮಧ್ವ ಢಣ ಢಣ ಢಣ ಢಣ ಢಣ ಢಣ ಢಣ ಜಯಭೇರಿಯ ನಾದವು ಕೇಳುತಿದೆ 3 ಇಂದು ನುಡಿಯುತಿದೆ ಮಂದಿಗಳೆಲ್ಲರು ಕೇಳುವರು ತಂದೆ ಪ್ರಸನ್ನನ ಮಂದಿರಲಿ ಇದು ಎಂದೆಂದಿಗೂ ಶಾಶ್ವತವಿರಲಿ 4
--------------
ವಿದ್ಯಾಪ್ರಸನ್ನತೀರ್ಥರು