ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬಿಟ್ಟಿರಲಾರೆ ಬಾ ಗೋವಿಂದಾ ಸೃಷ್ಟಿಶಾನಂದ ಪ ಬಿಟ್ಟಿರಲಾರೆ ಮನಮುಟ್ಟಿ ಭಜಿಪೆನಯ್ಯ ಅಷ್ಟಮಹಿಷೇರ ಸಹಿತ ನಾಟ್ಯವಾಡುತ ಬೇಗ ಬಾ ಅ.ಪ ಗೊಲ್ಲರ ಮನೆ ಪೊಕ್ಕು ಪಾಲ್ಬೆಣ್ಣೆಗಳ ಮೆದ್ದು ಚೆಲ್ವ ಲಲನೇರ ಗಲ್ಲ ಮುದ್ದಾಡುತ ಬೇಗ 1 ಮಂದಗಮನೆಯರ ಮಂದಹಾಸದಿ ಅಪ್ಪಿ ದ್ವಂದ್ವ ಕುಚದಲ್ಲಿಟ್ಟ ನಂದಜ ಕರಗಳಿಂದ 2 ಮಿರಿಮಿರಿ ಮಿಂಚುವ ಕಿರೀಟ ಕುಂಡಲ ಧರಿಸಿ ವಾರೆ ನೋಟದಿ ನಾರೇರ ಮನ ಸೆಳೆವ 3 ಸುಮನಸರೊಂದಿತ ಯಮುನಾ ಪುಳಿನದಿ ವಿಮಲ ವೇಣುಸ್ವರದಿ ಕಮಲಾಕ್ಷಿಯರೊಲಿಸಿದ 4 ಶ್ರೀವತ್ಸ ಕೌತ್ಸುಭ ಪವಳ ಮುತ್ತಿನಹಾರ ನ್ಯಾವಳ ಸರಿಗಿಟ್ಟು ಗೋವಳರೊಡಗೂಡಿ 5 ತುತ್ತೂರಿ ಝಾಂಗಟೆ ಒತ್ತಿ ಪಿಡಿದಿಹ ಕಹಳೆ ಬತ್ತೀಸ ರಾಗದಿ ತತ್ಥೈವಾದ್ಯದೀ 6 ಎತ್ತಿ ಪಿಡಿದಿಹ ಛತ್ರಿ ಸುತ್ತು ಮಾಗಧ ಮಂದಿ ಸ್ತೋತ್ರವ ಮಾಡೆ ನೇತ್ರೋತ್ಸವ ತೋರುತ 7 ದಿವಪನ ಸೋಲಿಪ ನವ ಪೀತಾಂಬರ ಧರಿಸಿ ಭುವನವ ಮೋಹಿಪ ನವ ಸುವಿಶೇಷನೆ 8 ವಿಜಯ ರಾಮಚಂದ್ರವಿಠಲರಾಯನೆ ನಿಜ ಪರಿವಾರದಿಂ ಭಜಕರ ಪಾಲಿಪ 9
--------------
ವಿಜಯ ರಾಮಚಂದ್ರವಿಠಲ