ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತಾನಾ ತಂದನಾನಾ ತಾನಾ ತಂದನಾನಾ ತಾನಾ ತಂದನಾನಾ ತಾನಾ ತಂದನಾನಾ ಧ್ರುವ ಬಲ್ಲೆ ಬಲ್ಲೆನೆಂಬರು ಬಲ್ಲರಿಯದಿಹದನು ಬಲ್ಲರೆ ನೀವಿನ್ನು ಹೇಳುವುದು ತಾನಾ 1 ಕಣ್ಣು ಕಾಂಬುವದೇನು ಕಣ್ಣಿನೊಳಿಹುದೇನು ಕಣ್ಣು ಕಾಂಬುವ ಗತಿ ತಿಳಿಯುವುದು ತಾನಾ 2 ಕಿವಿಯ ಕಿವಿಯೆಂಬುದೇನು ಕಿವಿಯ ಕೇಳುವುದೇನು ಕಿವಿಯ ಕೇಳುವ ಗತಿ ತಿಳಿಯುವದು ತಾನಾ 3 ಮೂಗು ಮೂಗೆಂಬುದೇನು ಮೂಗಿನೊಳಾಡುವದೇನು ಆಡುವ ಗತಿಗಳ ತಿಳಿಯುವದು ತಾನಾ 4 ಬಾಯಿ ಬಾಯೆಂಬುದೇನು ಬಾಯಿಯೊಳ ನುಡಿವದೇನು ಬಾಯಿ ನುಡಿವ ಗತಿ ತಿಳಿಯುವದು ತಾನಾ 5 ದೇಹ ದೇಹೆಂಬುದೇನು ದೇಹದೊಳಿಹುದೇನು ದೇಹದೊಳಿಹ ವಸ್ತು ತಿಳಿಯುವದು ತಾನಾ 6 ಪ್ರಾಣವೆಂಬುದೇನು ಕರಣವೆಂಬುದೇನು ತತ್ತ್ವವೆಂಬುದೇನು ತಿಳಿಯುವದು ತಾನಾ 7 ಜೀವ ಅಂಬುದೇನು ಜೀವಭಾಗಗಳೇನು ಜೀವ ಶಿವದ ಗತಿ ತಿಳಿಯುವದು ತಾನಾ 8 ಆರುವ್ಹೆಂಬುದೇನು ಮರವ್ಹುವೆಂಬುದೇನು ಇದರೊಳು ಖೂನ ಕುರುಹು ತಿಳಿಯುವುದು ತಾನಾ 9 ಕನಸುವೆಂಬುದೇನು ಕನಸು ಕಾಂಬುವದೇನು ಕನಸು ಹೇಳುವದೇನು ತಿಳಿಯುವುದು ತಾನಾ 10 ಹಗಲು ಎದ್ದಿಹದೇನು ಇರಳು ಮಲಗುವದೇನು ಇದರ ಹಗರಣವನು ತಿಳಿಯುವದು ತಾನಾ 11 ಹುಟ್ಟಿ ಬಾಳುವದೇನು ಸತ್ತು ಹೋಗುವದೇನು ಸತ್ತು ಹುಟ್ಟುವದೇನು ತಿಳಿಯುವದು ತಾನಾ 12 ಹೆಣ್ಣು ಗಂಡೆಂಬುವದೇನು ಹೆಣ್ಣು ಗಂಡು ಕೂಡುವದೇನು ಕೂಡುವದೇನೆಂದು ತಿಳಿಯುವದು ತಾನಾ 13 ಅನುಭವ ಗತಿಗಳ ತಿಳಿಯಲು ಆತ್ಮದೊಳು ತಿಳಿಯಲು ಜನ್ಮವು ಅಳಿಯುವದು ತಾನಾ 14 ಆತ್ಮ ಅನುಭವವು ತಿಳಿಯುವದು ಗುರುಕೃಪೆಯು ತಿಳಿಯಲು ಜೀವನ್ಮುಕ್ತಿಯು ತಾನಾ 15 ಮಹಿಪತೆಂಬ್ಹೆಸರನು ಕರೆದರೊ ಎಂಬುವದೇನು ಓ ಎಂಬುವದೆನಗಿನ್ನು ತಿಳಿಯಿತು ತಾನಾ 16 ಇಂತು ಪರಿಯಾಯವು ತಿಳುಹಿದ ಗುರುರಾಯ ಎನ್ನೊಳು ಭಾಸ್ಕರ ಗುರು ತಾನೆ ತಾನಾ 17
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಬುತ್ತಿಯ ಕಟ್ಟೊ - ಮನುಜಾ ||ಬುತ್ತಿಯ ಕಟ್ಟೊ ಪ.ಬುತ್ತಿಯನ್ನು ಕಟ್ಟಿದರೆ |ಎತ್ತಲಾದರುಣ್ಣಬಹುದು ಅಪಧರ್ಮವೆಂಬ ಮಡಿಕೆಯಲ್ಲಿ |ನಿರ್ಮಲ ಗಂಗೆಯನುತುಂಬಿ ||ಸುಮ್ಮಾನದಿಂದಲಿ ಬೇಗ |ಒಮ್ಮನಕ್ಕಿಯ ಅನ್ನಬಾಗಿ 1ಅರಿವು ಎಂಬ ಅರಿವೆಯ ಹಾಸಿ |ಗರಿಮೆ ಹಾಲ - ಮೊಸರ ತಳಿದು ||ಪರಮವೈರಾಗ್ಯದಿಂದ |ಸಿರಿಹರಿಗರ್ಪಿತವೆಂದು 2ಕರ್ತು ಪುರಂದರವಿಠಲನ |ತತ್ತ್ವವೆಂಬ ಬುತ್ತಿಯನ್ನು ||ಹತ್ತಿರ ತಂದಿಟ್ಟುಕೊಂಡು |ನಿತ್ಯವುಂಡು ತೃಪ್ತಿಪಡೆಯೊ 3
--------------
ಪುರಂದರದಾಸರು