ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅರಿತು ಭಜಿಪರ್ಯಾರಯ್ಯ ರಂಗಯ್ಯ ನಿನ್ನ ಪ ಸಿರಿದೇವಿಯು ಕಿರುಬೆರಳಲ್ಲಿರುವ ಸೊಬಗನ್ನುಅರಿಯಲಾರಳೊ ದೇವಅ ಇಂದಿರಾದೇವಿಯು ಅರಿಯಲಾರಳು ದೇವಬೃಂದಾರಕರೆಲ್ಲ ನಿಂದು ಯೋಚಿಪರುನಂದತೀರ್ಥರ ಮತದೊಳಗೆ ಬಂದವರೆಲ್ಲಎಂದಿಗಾದರು ಪರಮಾನಂದ ಪೊಂದುವರು1 ಮಾನವರು ಹೀನಮಾರ್ಗದೊಳು ಮುಳುಗಿಹರುಜ್ಞಾನಿಗಳು ನಿಂದು ಧ್ಯಾನಿಪರು ನಿನ್ನನೀನೆ ದಯಮಾಡಿ ಸಲಹೊ ಎನ್ನನು ಕೃಷ್ಣಕಾನನದೊಳು ಕಣ್ಣುಮುಚ್ಚಿ ಬಿಟ್ಟಿಹರೊ 2 ಜಲದೊಳಗಿನ ಕಪ್ಪೆ ಜಲದ ಸವಿಯರಿಯದುಜಲದ ಸುಗಂಧವ ಜಲವರಿಯದುನೆಲೆಯ ಕಂಡವರ್ಯಾರು ನೆಲೆಯಾದಿಕೇಶವನೆಸುಲಲಿತ ತತ್ತ್ವವನು ಸುಲಭ ಮಾರ್ಗದಿ ತೋರೊ 3
--------------
ಕನಕದಾಸ
ವಿಶಿಷ್ಟಾದ್ವೈತ ಮತವೇ ಮತವು ಪ ವಿಷ್ಣು ಪದವೇ ಶಾಶ್ವತ ಪದವು ಅ.ಪ ವಸಿಷ್ಠ ನಾರದ ಸನಕಾದಿ ವಂದ್ಯರ ವಿಶಿಷ್ಟ ಪರಿಗ್ರಹ ವೇದಾಂತ ಸಾರದ 1 ಅಸೇತುಹಿಮಾಚಲ ವಿಶೇಷದ ವಿಶೇಷ ಪ್ರಮಾಣ ಚತುಷ್ಟಯದ 2 ಚಿತ್ತು ಅಚಿತ್ತೀಶ್ವರ ತತ್ತ್ವವನು ಪ್ರತ್ಯೇಕವಾಗಿಯೇ ಬೋಧಿಸಿಹ 3 ಪರ ವ್ಯೂಹ ವಿಭವಾಂತರ ಅರ್ಚಾ ಪರಿಪರಿರೂಪದ ಶ್ರೀಹರಿ ಪೂಜನ 4 ರಹಸ್ಯತ್ರಯ ಮಂತ್ರ ವಿಶಿಷ್ಟದ ಸಹಮತ ಸುಲಭೋಪಾಯವಿಧಾನದ 5 ಅಜ ಸುರರೆಲ್ಲರು ಹರಿಮತ ಹರಿಯೊಬ್ಬನ ಪಾದವೆ ಮೋಕ್ಷಪÀಥ 6 ಪ್ರಧಾನ ಧರ್ಮದ ಉಪವೃತ್ತಿಯ ಬೇಡದ ಶರಣಾಗತಿಯ 7 ಸತತವು ಹೆಜ್ಜಾಜಿಕೇಶವನಾಮ ನುತಿಸಿದವನ ಭವಬಂಧನ ಬಿಡಿಸುವ 8
--------------
ನಾರಾಯಣಶರ್ಮರು
ಹರಿಯೇ ಸರ್ವಸಾರವೆಂದು ಸಾರುವರು |ತೆರೆದು ಹೇಳಿ ತತ್ತ್ವವನು ತಾರಿಸುವರು ಪ ಮೊರೆ ಹೊಕ್ಕವರ ಮನದ ಮಲಕು ಬಿಡಿಸುವರು |ಹರಿದು ಹೋಗುವವಗೆ ಕರೆದು ಕಡೆಗ್ಹಾಕುವರು1 ಧರೆಯೊಳವರೇ ಸಾಧು ಪುರುಷರೆನಿಸುವರು |ಸಿರಿಗೆ ಸೆರಗೊಡ್ಡಿ ಸಿರಬಾಗಿ ನಡಿಯದವರು 2 ಬರಿಯ ತರ್ಕದಿಂದ ಖಂಡಿಸದವರು |ಸರಿಗೆ ಬಂದರೆ ಸುಮ್ಮನೆ ಸಹಿಸುವರು 3 ಕಾಯ ಕದ್ದು ಕರ್ಮಪಾಶ ಕಳೆದವರು |ರಾಯ ರಂಕರಿಗೆ ಸರಿ ತಿಳಿದವರು 4 ಮಾಯದ ಮೂಲವಾದ ಭೇದವಳಿದವರು |ಲಯದ ಮನೆಯ ಮೆಟ್ಟಿ ಭಯ ಮೀರಿದವರು 5 ಅರಿತು ಅರಿಯದವರಂತೆ ತೋರುತಿಹರು |ಮರೆತು ಮರವಿಗೆ ತಾವೆ ಮರವಾಗಿಹರು6 ಗುರು ರುಕ್ಮಭೂಷಣನಂತ ತೋರಿಸುವರು |ತ್ವರಿತದಿ ತಮ್ಮ ನೆಲೆಯ ಕೊಡದವರು 7
--------------
ರುಕ್ಮಾಂಗದರು