ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಯೆಂದಿಗೆ ಬರುತೀಯೆ ಸುಂದರ ಭಾರತಿ ಮಂದರೋದ್ಧರನ ತೋರಿಸೆಂದೆ ನಾ ಬಂದೆ ಪ. ಅಂಧಕಾರಣ್ಯದೊಳು ನಿಂದು ತತ್ತರಿಸುವೆನು ತಾಯೆ ಕುಂದುಗಳೆಣಿಸಾದಿರು ಆನಂದ ತೋರು ಅ.ಪ. ಹರಿಗೆ ಕಿರಿಯ ಸೊಸಿ ವಾತನಸತಿಯು ನೀನು ಪ್ರಖ್ಯಾತಿವಂತಳೇ ಏಕಾಂತ ಭಕ್ತಳೇ ತ್ರಿವಿಧ ಜೀವರೊಳಗೆ ನಿಂತು ತ್ರೀವಿಧ ಪ್ರೇರಣೆ ಮಾಡುವಿ ದೇನಿ ನಿನ್ನಾ ಮಹಿಮೆಗೆ ನಮೋ ಎಂಬೆ ಪುತ್ಥಳಿಯಾ ಬೊಂಬೆ 1 ಮಂದರೋದ್ಧರನ ಪಾದಸೇವಕಳೇ ನಿನಗೀಡೆ ನಲಿದಾಡೆ ಒಂದನಾದರೂ ಮಾತನಾಡೆ ವರಗಳ ನೀಡೆ ದಯಮಾಡಿ ನೋಡೆ ತವಪಾದವ ಕೊಡೆ ಕರವ ಜೋಡಿಸಿ ಬೇಡುವೆನಿಂದು ನಾ ಬಂದು 2 ಗರುಡ, ಶೇಷ ರುದ್ರಾದಿಗಳೊಡೆಯಳೇ ನೀನು ನಿನ್ನಡಿಗಳಿಗೆರಗುವೆ ನಾನು ತಡಮಾಡ ಬ್ಯಾಡಮ್ಮಾ ನಡೆದು ಬಾರಮ್ಮ ಭವ ಮಡುವಿನೊಳಗಿರುವೆನು ತೋರಿಸೋ ದಯಪಾಲಿಸೋ 3
--------------
ಕಳಸದ ಸುಂದರಮ್ಮ
ಸರಿಯಾರೈ ಜಯಮುನಿ ಸಮರಾರೈ ಗುರುಮಧ್ವಕೃತಿ ವಿವೃತಿ ರಚಿಸುವಲ್ಲಿ ಪ ವರ್ಣವಂದಾರು ಬಿಡದಲೆ ಬಹುಫಲ ವರ್ಣಿಪೆ ಲೋಭದಿ ಶರಣ ಜನರಿಗೆ ಕರ್ಣಸುಧಾರಸ ಬೆರೆದು ನೀ ಬಲುಗೂಢ ಪೂರ್ಣಮತಿ ಭಾವವ ತೆಗೆವತಿ ಶೂರ 1 ಒಂದೊಂದು ವಚನವ ಹಿಂದಾಗಿ ಮುಂದಾಗಿ ಛಂದಾಗಿ ತಿರಿಗಿಸಿ ತಿರೆಯ ಸಿಂಧುರದಂತೆ ಬಂದಿಸಿ ಮುಂದಾಗಿ ಬಂದು ದುರ್ವಾದಿಯ ಸಂದುಗಳನೆ ಸೀಳಿ ಮೆರೆದತಿ ಶೂರ 2 ಕತ್ತಿಯ ಒಂದೇ ಹಿಡದೆ ಬಿಡದಲೆವೆ ಹತ್ತು ದಿಕ್ಕಿಗೆ ತಿರಿಗಿಪ್ಪ ವೀರನ ತೆರೆ ಅತ್ಯರ್ಥ ಮೂಲದ ಹಿಡಿದು ಅದನ್ನು ಸುತ್ತಿಸಿ ವಿಮತರ ತತ್ತರಿಸುವ ಧೀರ3 ಮೂಲ ವಚನಗಳ ಕಲ್ಪಲತೆಯ ಮಾಡಿ ಮೇಲಾದ ತತ್ವಗಳೆಂಬೊ ಫಲಗಳು ಶೀಲಮತಿಗಳುಳ್ಳ ಶಿಷ್ಯ ಶಿಶುವಿಗಳಿ ಗಾಲಿಸಿ ಮೇಳಿಸುತ ಒಲಿಸುವ ಧೀರ 4 ಅಕ್ಷೋಭ್ಯ ಮುನಿಗಳ ಪುಣ್ಯಫಲಗಳೆಂತೊ ಕರ್ಮ ಕಷ್ಟವೆ ಒದಗಿತು ಈ ಕ್ಷೋಣಿತಳದಲ್ಲಿ ವಾಸುದೇವವಿಠಲನಕಕ್ಷವ ವೊಹಿಸಿ ಪುಟ್ಟಿದ್ಯೊ ಜಯರಾಯ5
--------------
ವ್ಯಾಸತತ್ವಜ್ಞದಾಸರು