ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪವನಾಂತರ್ಗತ ಹರಿಯ ಸ್ಮರಣೆಯಮಾಡಿ ಪ ವಿವಿಧ ಭಕುತರು ಕೂಡಿ ಹರುಷದಿ ಪ್ಲವನಾಮ ಸಂವತ್ಸರದಲಿ ಸವಿನಯದಿ ಭಜನೆಗಳ ಮಾಳ್ಪರು ಹರಿಯ ಗುಣ ಕಾರ್ಯಗಳ ಸ್ಮರಣೆಯ ಅ.ಪ ಪಕ್ಷಿವಾಹನ ಹರಿಯು ಶ್ರೀ ಲಕುಮಿದೇವಿಯ ಲೆಕ್ಕಿಸದಿಹನಂತೆ ಹೀಗಿರಲು ಬ್ರಹ್ಮನ ಪೊಕ್ಕುಳಲಿ ಪಡೆದನಂತೆ ಸೊಕ್ಕಿದ ಅಸುರರನು ಬಡಿಯಲು ಮಿಕ್ಕ ಸುರರನು ಪೊರೆಯಲೋಸುಗ ರಕ್ಕಸಾಂತಕ ಹರುಷದಿಂದಲಿ ಚೊಕ್ಕ ಸ್ತ್ರೀ ರೂಪಾದನಂತೆ 1 ಇಂದುಶೇಖರ ಕೇಳಿದ ಸ್ತ್ರೀರೂಪ ನೋಡಲು ಬಂದು ಬೇಡಿದನಂತೆ ಅದು ಕೇಳಿ ಶ್ರೀಶನು ಸುಂದರ ಸ್ತ್ರೀಯಾದನಂತೆ ನಿಂದು ನೋಡುತ ಚಂದ್ರಶೇಖರ ಮಂದಹಾಸದಿ ಪಿಡಿಪೋದನಂತೆ ಮಂದಗಮನೆಯು ಸಿಗದೆ ದೂರದಿ ನಿಂದು ಕಣ್ಮರೆಯಾದಳಂತೆ2 ವಿಸ್ಮಯವಾದನಂತೇ ಪಶುಪತಿಯ ಸಿರದಲಿ ಹಸ್ತ ನೀಡಿದನಂತೇ ಮತ್ತೆ ರಕ್ಷಕರಿಲ್ಲವೆಂದು ತತ್ತರಿಸಿ ಭಯಪಟ್ಟನಂತೆ ತಕ್ಷಣದಿ ಶ್ರೀ ಕಮಲನಾಭ ವಿಠ್ಠಲ ರಕ್ಷಿಸಿ ಪೊರೆದನಂತೆ 3
--------------
ನಿಡಗುರುಕಿ ಜೀವೂಬಾಯಿ
ಶ್ಲೋ||ಶª-Àುದಮ ಸಹಿತೇನಸ್ವಾನುಭಾವೇನ ನಿತ್ಯಂಸಮಮತಿಮನುಯವ್ಯಣ ಸರ್ವದಾ ಸೇವಕಾನಾಂಯಮ ನಿಯಮ ಪರಾಣಾಮೇಕ ತತ್ಪಾದರಾಣಾಮಮಿತನಿಜ ಮಹಿಮ್ನಾ ದೇಶಿಕೇಂದ್ರೊ ವಿಭಾತಿಯೇನು ವಿಚಿತ್ರ ಪೇಳೆ ಯೇ ಮತಿಯೆ ನಿದಾನವನೆನ್ನೊಡನೆಮಾನಸ ವೃತ್ತಿಯಾತ್ಮನ ಕೂಡಿಬರಲೊಂದು ಗಾನ ತೋರುವುದಿದೇನೆ ಪಎಲ್ಲವನುಳಿದೀಗಲೂ ಬಗೆಗೊಂಡು ಮುದದಿಂದ ಬಂದು ನಿಂದುಸಲ್ಲಲಿತಾನಂದ ಪದವ ನೋಡುವೆನೆಂದು ಸವರಿಸಿ ಬರಲು ಮುಂದುಇಲ್ಲ ಮತ್ತೊಂದಾತ್ಮನಿಂದಧಿಕವೆಂದು ನಿಲ್ಲದೆ ಧ್ಯಾನಿಸಲುಝಲ್ಲನೆ ಜಲಧಿಯ ಮೊರವಿನಂದದಿ ತೋರಲಲ್ಲಿ ನಾ ಬೆರಗಾದೆನು 1ಅಂಜದೆ ಚಿಂತಿಸಲು ಮುರಜ ಭೇರಿ ಮಂಜುಳ ವೀಣೆಗಳಸಿಂಜಿತಗಳು ಮೇಘನಾದ ಮುಂತಾದವು ಸಂಜನಿಸಿದವೊಳಗೆರಂಜನೆುಂದವನು ಕೇಳುತ ಹೃತ್ಕಂಜದೊಳ್ಬೋಧೆಯೆಂಬಅಂಜನವಚ್ಚಲು ಬಿಂದು ಪೊಳೆುತು ನಿರಂಜನ ರೂಪಿನಲಿ 2ಮತ್ತೆ ಮುಂದೆ ನೋಡಲು ಬಿಂದುವೆಂಬುತ್ತಮ ಹಿಮಕರನಕತ್ತಲೆಗವಿದುದು ಅದ ನೋಡುತ ಮನ ತತ್ತರಿಸಿತು ನಿಲ್ಲದೆಚಿತ್ತವನಲುಗದೆ ಗುರುಪಾದವ ಧೃತಿವೆತ್ತು ಚಿಂತಿಸುತಿರಲುಕತ್ತಲೆ ಪರಿದು ಕಳಾ ವಿಶೇಷ ನೋಡಲೆತ್ತಲೆತ್ತಲು ತುಂಬಿತು 3ಛಂದದಿತೇಜವನು ನೋಡುತಲದರಿಂದಲಧಿಕ ಸುಖವೂಮುಂದೆ ಪುಟ್ಟಲದರನುಭವದಲಿ ಹಿಗ್ಗಿ ನಿಂದು ಜುಂಮುದಟ್ಟಲುಎಂದೆಂದು ಕಾಣದ ಸುಖದೊಳು ಮನ ಬಳಿಸಂದು ಲಯವನೈದಲುಒಂದಲ್ಲದೆರಡಿಲ್ಲದ ನಿಜ ನಿತ್ಯಾನಂದವೆ ನಾನಾದೆನೂ 4ತಾಪತ್ರಯಗಳಡಗಿ ಕರ್ಮಕಲಾಪವಿಲ್ಲದೆ ಪೋದುದುಗೋಪಾಲಾರ್ಯರ ಕೃಪೆುಂದ ಭವಬಂಧವೀ ಪರಿ ಬಯಲಾದುದುವ್ಯಾಪಾರವೆಲ್ಲವನಿತ್ಯವಾದವು ನಿರ್ಲೇಪತೆಯೆನಗಾದುದುದೀಪಿತ ವಿಜ್ಞಾನ ರತ್ನವೆಂದೆನಿಸುವ ದೀಪ ಸುಸ್ಥಿರವಾುತೂ 5
--------------
ಗೋಪಾಲಾರ್ಯರು
ಸಂಸಾರವೆಂಬ ಸರ್ಪದ ಬಾಧೆಯನ್ನು ಕಂಸಾರಿ ಕೇಳು ಸೈರಿಸಲಾರೆ ಇನ್ನು ಪ ಕಚ್ಚಿ ಬಹುಕಾಲ ಕಡಿಮ್ಯಾಗಲೊಲ್ಲದು ಹೆಚ್ಚುತಲೆ ವೋಗುತಿದೆ ಪೇಳಲೇನು ಅಚ್ಯುತನೆ ನಿಮ್ಮ ನಾಮ ಮಂತ್ರದೌಷಧಿಯನ್ನು ಮುಚ್ಚಿ ಕೊಡುಯೆಂದು ಮನದಲ್ಲಿ ನಿಂದು 1 ಮತ್ತೆ ಮಹಾಪಾಪವೆಂಬ ವಿಷ ತಲೆಗೇರಿ ತತ್ತರಿಸಿ ಕಳವಳಗೊಳಿಸುತಲಿದೆ ಉತ್ತಮರಾ ಜ್ಞಾನವೆಂಬುತ್ತಾರವನೆ ಕೊಟ್ಟು ಹತ್ತುನೂರು ನಾಮದೊಡೆಯ ಹರಿಯೆ ಸಲಹೆನ್ನ 2 ಬೆಂದ ದುರ್ವಿಷಯಗಳು ಹಂದಿನಾಯ್ಗಳಿಗುಂಟು ಎಂದು ದೊರೆವುದೋ ದ್ವಿಜಾಗ್ರಕುಲವು ಎಂದಾದರೂ ಒಮ್ಮೆ ಬಯಸುವಂತಿ ಭಕುತಿ ಕೊಡು ತಂದೆ ಕದರುಂಡಲಗಿ ಹನುಮಯ್ಯನೊಡೆಯಾ 3
--------------
ಕದರುಂಡಲಗಿ ಹನುಮಯ್ಯ
ಗೋಕುಲದೊಳಗೆಲ್ಲ ಕೊಳಲೂದಲು |ಬೇಕಾದ ಧ್ವನಿಗಳು ಕೂಡಿ ಕೃಷ್ಣ-ಗೋ- ||ಪಿಕಾಸ್ತ್ರೀಯರುತವಕದಿಂದ ನೋಡ- |ಬೇಕೆಂದು ನಡೆಯೆ ನೂಕ್ಯಾಡುತ ಪಎಂತೆಂತು ಪೊರಟರಂತು ನಾರಿಯರು |ಇಂಥ ವಿಪರೀತ ಯಿಂತಿಲ್ಲ ಮುಂದಿಲ್ಲ |ಸಂತೋಷವಹದು ಚಿಂತೆ ಪೋಗುವುದು |ಸಂತರು ಕೇಳಲುತಂತುಮಾತ್ರಾ ||ಭ್ರಾಂತರಾಗಿ ಯೇನು-ಎಂತು ತಿಳಿಯದೆ |ನಿಂತು ನಿಲ್ಲಲಾರದಂತರದಲೆವೆ |ಧ್ವಾಂತಕಿರಣನಂತಾನ ಮುತ್ತೂರು |ಅಂತರವಿಲ್ಲದ ಸಂತೆಯಂತೆ 1ಚಿಕ್ಕಟುಯೆಂದು ಒಬ್ಬಕ್ಕನು ಗಂಡನ |ತೆಕ್ಕೆಲಿ ಪಿಡಿದುಕಕ್ಕಸಬಡುತ |ಪೊಕ್ಕಳಿಗೆ ಬಟ್ಟನಿಕ್ಕಿ ಒಬ್ಬವಳು |ಅಕ್ಕಿಯ ನುಚ್ಚನೆ ಸಕ್ಕರೆಂದು ||ಮಕ್ಕಳಿಗೀವುತ ಮಿಕ್ಕವರೆಲ್ಲರು |ನಕ್ಕು ತಂತಮ್ಮೊಳಗೆ ಗುಕ್ಕುತ ತಲೆಯ |ಹಿಕ್ಕುತ ಬಂದರು ಫಕ್ಕನೆ ಈಕ್ಷಿಸ-ರಕ್ಕಸ ದಲ್ಲಣನಕ್ಕರದಿ 2ತತ್ತರಿಸಿ ಕರವೆತ್ತಿಗೆ ಬಿಟ್ಟರು |ಮುತ್ತಿನ ಕಟ್ಟಾಣಿವೊತ್ತಿ ಮುಡಿಗಿಟ್ಟು |ನೆತ್ತಿಗೆ ಸೀರೆಯ ಸುತ್ತಿಕೊಂಡು ಬರೆ |ಸುತ್ತಲಂಗನೆರು ಬತ್ತಲಾಗಿ ||ತುತ್ತು ಮಾಡಿ ಮಾಡಿ ಹತ್ತಿಸೆ ಎದೆಗೆ |ಹೊಸ್ತಲಿ ದಾಟಲಿ ಗತ್ತಿಡಲಾರದೆ |ಹತ್ತೆಂಟು ಮಂದಿಯು ಚಿತ್ತಪಲ್ಲಟಾಗಿ |ಉತ್ತಮಾಂಗನಿಗೆ ಸುತ್ತಿದರೊ 3ಹಾಲಿಗೆ ಪಿಲ್ಲೆಯು ಫಾಲವಿದೇಯೆಂದು |ಕಾಲಿಗೆ ಕುಂಕುಮ ವಾಲಿಟ್ಟು ಮೂಗಿಗೆ |ಮೇಲಾದ ಹೂವಿನ ಮಾಲಿಕೆ ಕಟಿಗೆ |ತೋಲಾದ ಸರಿಗೆ ಬಾಳಿಗಿಟ್ಟು ||ಹೇಳುವ ಮಾತನುಕೇಳಿಕೇಳದಂತೆ |ಇಳೆಗೆ ಅಗಾಧ ಧೂಳಿಯ ಮುಚ್ಚುತ |ಜಾಲಸಂಭ್ರಮದಿ ವಾಲಯ ಬಂದರು |ಜಾಲಜಾನಾಭನ ವಾಲಗಕ್ಕೆ 4ಭೋರೆಂಬ ಶಬ್ದವ ಮರೆತಳೆಮುನೆ |ಗಿರಿಯು ಬ್ಯಾವಿಯೆ ? ತುರುವು ಮೇವನು |ತೊರೆಯೆ, ಫಣಿಯು ಶಿರವ ತೂಗಿತು |ತೆರೆಯ ಕಟ್ಟಿತು ಶರಧಿಯು ||ಸುರರುನಭದಿ ನೆರೆದು ಪೂಮಳೆ |ಗರೆಯೆದುಂದುಭಿಮೊರೆಯೆ ಸುಖವ |ಸುರಿಯೆ ಪ್ರಾಣೇಶ ವಿಠಲ ಕೊಳಲ |ತ್ವರನುಡಿಸುವ ಸ್ವರಗೇಳಿ 5
--------------
ಪ್ರಾಣೇಶದಾಸರು