ವಂದಿಸುವೆವಿಂದು ಮುದದೆ ಶಾರದೆ ಪ.
ವಂದಾರುಮಂದಾರೆ ಎಂದೆಂದಿಗೆಮ್ಮೊಳಿರೆ
ಸಂದೇಹವಿಲ್ಲದಂತೇ ಸುಸ್ವಾಂತೀ 1
ಮತ್ತೇರಿ ತಲೆಕೆಟ್ಟು ಕತ್ತಲೆಯೊಳು ಬಿದ್ದು
ತತ್ತರಗೊಳ್ವೆವಲ್ಲೇ ಕೋಮಲೆ 2
ಹಾಲಹಲದಂಥ ಆಲಸ್ಯದಿಂದ ಬೀಗಿ
ಕಾಲೆತ್ತದಂತೊರಗಿರ್ಪೆನೇ ನೊಂದೆನೇ 3
ಕಂದನ ನುಡಿ ಕೇಳು ಒಂದಿಷ್ಟು ದಯೆ ತಾಳು
ಕುಂದುಗಳೆನಿಸದೇ ಪೊರೆ ಶ್ರೀಕರೇ 4
ವರಶೇಷಗಿರೀಶನ ಚರಿತಂಗಳನುದಿನ
ಸ್ಮರಿಸಿಕೊಂಡಾಡುವಂತೆ ಮಾಡೆನುತೇ ವಂದಿಸುವೆ5