ಇಂದಿರೆಯರಸನಾಡಿದ ಆಟನೋಡಿ|ನಲಿದಾಡಿ|
ಬಂದರಜಮುಖ್ಯರೋಡಿ|ಬಹುಜನ ಕೂಡಿ ಪ
ಅರುಣ ತಳದಿರಂಜಿಪ ದ್ವಯ|ಚರಣದಿಂದ ಕಾಳಿ ಅಹಿ|
ವರನಸಿರವ ಮೆಟ್ಟಿಸೂರ್ಯ|ಕಿರಣದಂತೆ ಪೊಳೆವಾ|
ಸ್ಪುರಣಗೆಜ್ಜಯ ಝಣ ಝಣ|ಝಣಕು ಝಣಕೆಂಬ ತೆರದಿಂದ|
ಕರುಣ ಧಿಗಿ ಧಿಗಿಯೆಂದು|ವಾರುಣದಲಿ ಕುಣಿಯೇ 1
ವೀಣೆಯಲಿತಾಸರಿಗ ಮಪಧನಿ|ಸೆಂಬಮೆಟ್ಟಿಕೆಯೊಳ|
ತ್ರಾಣದಿಂದ ಝಿಂ ಝಿಂ ಝಿಂ ಝಿಂ ಕೆನಿಪ ದ್ವನಿಯಗಳನು|
ಮಾಣುತಲಿ ಸಿರಿರಾಗ ಘನಮಲಾಹರ ಮೊದಲು|
ವಾಣಿಪತಿಸುತ ಪಾಡಿದ ನಾನಾ ರಾಗದಲಿ 2
ಅಂಬುಜಾಕ್ಷಪ್ರಿಯನಾದ|ಅಂಬುಜಭವ ಪದ ಕರ್ತ|
ಕುಂಭಿಯೊಳಹಸ್ತಿನಿಕು|ರಂಬಾರಿ ಕೋಟಿ ದ್ವನಿ|
ವೆಂಬಂತೆ ಕಹಳೆಗಳು|ತುಂಬಿ ಪೂರೈಸಿದನು|
ಭುಂ ಭುಂ ಭುಂ ಭುಂ|ಭುಂ ಮೆಂದು ಗಂಭೀರ ಸಪರದಿ 3
ತತ್ತಥೈಯ್ಯಾ ಥೈಯ್ಯಾ ಥರಿಕೆಂದು|ಧತ್ತೆರಿಕುಥಲಿ|
ಒತ್ತಿ ಖಿಣಿ ಖಿಣಿ ಖಿಣಿಲೆಂಬ|ಮೊತ್ತತಾಳು ವಿಡಿದು|
ಮತ್ತ ಏಕತಾಳ ಝಂಪೆ|ತಾಳ ಅಟ್ಟತಾಳಗಳು|
ಉತ್ತುಮದಾ ಕರದಿ ಹರ ಅರ್ಥಿಯಲಿ ನಿಂದಾ 4
ಇಂದೀವರಜ ಮದ್ಯಸ್ಥಲ ಒಂದು ನೆಗೆದು ಜವದಿಂದಾ|
ದಂ ದಂ ದಂ ದಂ ದಮುಕೆಂದು|ಛಂದದಿ ಮುಟ್ಟಿದನು|
ಧಿಂಧಿಂಧಿಂಧಿಂಧಿಮಿಕೆಂದು|ದುಂಧುಂಪೊಡದರು ಸುರರು|
ತಂದೆ ಮಹಿಪತಿ ನಂದನ ವಂದ್ಯನೊಲುವಂತೆ 5