ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಅ) ಗುರುರಾಯರ ನಂಬಿದೇ - ಶ್ರೀ ರಾಘವೇಂದ್ರ ಪ ವರಮಂತ್ರಾಲಯದಲ್ಲಿ ಇರುತ ಸೇವೆಯಗೊಂಬ ಅ.ಪ ಗ್ರಾಸ ಬೇಡಿದ ಮುನಿಯಾಶೆಯ ತಣಿಸಿದ ದಾಶರಥಿಯ ಭಕ್ತ ದೇಶಿಕವರ್ಯರ 1 ಸಂತಾನಸೌಭಾಗ್ಯ ಚಿಂತಿತಾರ್ಥವನೀವ ಪಾದ ಸ್ವಾಂತದಿ ಭಜಿಸುವ 2 ಅಜ್ಞಾನ ತಿಮಿರಕ್ಕೆ ಸುಜ್ಞಾನಪರಿಪೂರ್ಣ ಪ್ರಜ್ಞರ ಗುರುವ್ಯಾಸರಾಜ್ಞಾಧಾರಕರಾದ 3
--------------
ಲಕ್ಷ್ಮೀನಾರಯಣರಾಯರು
ಕರವೇ ವಂದಿಸಿ-ನಮಸ್ಕರಿಸಿ ಮಾತನುಸುರುವೆ ಪ ಪರಮಾದರದಲಿ ಕರುಣ ಎನ್ನ ಮೇಲೆ ಹರಹಿ ದುರುಮತಿಯ ಪರಿಹರಿಸುವುದು ಅ.ಪ. ವಾತತನಯ ವಾರಿಜಾತ ಬಾಂಧವ ಸಂ ಭೂತ ಸಹಾಯ ರಘುನಾಥನ್ನ ಪ್ರಿಯದೂತ ಶಾತಕುಂಭ ಮಕುಟ ಶೀತಕರ ಕುಂಡಲ- ತೀತ ಸುಂದರ ಕಾಯ-ಜಾತ ಶರವರ್ಜಿತ ದಾತನಿಂದಲಿ ಬಹಳಾತುರದಲಿ ಗು- ರುತು ಪಡೆದು ನಿರ್ಭೀತನಾಗಿ ಪೋಗಿ ಮಾತೆಗೆರಗಿ ಖಳವ್ರಾತವ ಘಾತಿಸಿ ಪ್ರೀತಿಯಿಂದಲಿ ನಿಜರಾತಿಯ ತಣಿಸಿದ 1 ಉದ್ದಂಡ ವಿಷವನುಂಡು ಕುಂಡಲಿಯಿಂದ ಕೈಗೊಂಡು ಮನ್ನಣೆಯ ಚಂಡಗದೆಯ ದಿಟ್ಟ ಗಂಡುಗಲಿ ಪ್ರಚಂಡ ಹಿಂಡು ಖಳರ ಶಿರ ಚೆಂಡಾಡಿ ಗುರು ಕೋ ದಂಡ ರುದ್ರನ ಮುಂಕೊಂಡು ಭಜಿಸಿ ರಣ ಮಂಡಲದೊಳು ಜಗಭಂಡನ ಕರುಳನು ದಂಡೆಯ ಮುಡಿಸಿದ ಖಂಡ ಪ್ರತಾಪ 2 ದ್ವಿಜನ ಉದರದಲ್ಲಿ ಸೃಜಿಸಿ ಮೆರೆದೆಯೊ ತ್ರಿಜಗದೊಳಗೆ ಶುದ್ಧ ಸುಜನಾಂಬುಧಿಗೆ ಚಂದ್ರ ಕುಜನ ಮತ ಭುಜಂಗ ದ್ವಿಜರಾಜನೆನಿಸಿದೆ ಅಜನ ಪಿತನ ಪಾದಾಂಬುಜವ ಬಿಡದೆ ನಿತ್ಯ- ಭಜಿಸುವೆ ಯತಿ ದಿಗ್ವಿಜಯ ಮೂರುತಿ ಸುರ- ಪಂಕಜ ಭವ ಪದವಿಯ ನಿಜವಾಗಿ ಕೈಗೊಂಡು ಋಜುಗಣದಧಿಪ ತಿವಿಜಯವಿಠ್ಠಲನಂಘ್ರಿರಜವನು ಧರಿಸಿದ 3
--------------
ವಿಜಯದಾಸ
ದಾಸರ ಸಖ ಮಾಡಂದೆ ಎನ್ನ ಧ್ಯಾಸದಿರಗಲದೆ ಶ್ರೀಹರಿ ತಂದೆ ಪ ಕನಕರಾಯನು ನಿಜದಾಸ ನಿನ್ನ ಘನತರ ಪ್ರಸನ್ನತೆ ಪಡೆದನುಮೇಷ ಅನುದಿನ ನಿಮ್ಮಯ ಘನಮಹಿಮೆಯನು ತೋರಿ ಮುನಿವ್ಯಾಸರಾಯರ ಮನವ ತಣಿಸಿದಂಥ 1 ಘನ ಸತ್ಯ ಕಬೀರದಾಸ ತನ್ನ ತನುಮನಧನವನ್ನು ನಿನಗರ್ಪಿಸೀತ ವನಿತೆಯನೊತ್ತಿಟ್ಟು ತನುಜಾತನನು ಕೊಂದು ಉಣಿಸಿ ಸಂತರಿಂ ಸುತನ ಪ್ರಾಣವ ಪಡೆದಂಥ 2 ವಾಸನಳಿದು ಪುರಂದಾಸ ತನ್ನ ನಾಶಬುದ್ಧಿಗೆ ನಾಚಿ ನೀಗಿ ಮನದಾಸೆ ಸೋಸಿಲಿಂ ತವಪಾದಧ್ಯಾಸ ಬಲಿಸಿ ಜಗದೀಶ ಹೇಸದೆ ನಿಮ್ಮನು ಗಿಂಡಿಲ್ಹೊಡೆದಂಥ 3 ವರನಾಮದೇವ ನಿಜದಾಸ ತನ್ನ ಪರಮಸಂತರಿಗೆಲ್ಲ ಪಾಲಿಸಿ ಭಾಷ ಸಮ ಗೌಪ್ಯದಿಂ ಪಂಪಾಪುರಿಗೈದಿರಲು ನಿನ್ನ ತಿರುಗಿ ಕರೆದೊಯ್ದು ಇರವ ಪೂರೈಸಿದಂಥ 4 ಬಲ್ಲಿದ ತುಕಾರಾಮದಾಸ ಬಲು ಕ್ಷುಲ್ಲಕರುಪಟಳ ಸಹಿಸಿ ಮನದಕ್ಲೇಶ ಎಲ್ಲವ ನೀಗಿ ಹರಿ ಪುಲ್ಲನಾಭನ ಪಾದ ದಲ್ಲೆ ಮನ ನಿಲ್ಲಿಸಿ ಉಲ್ಲಾಸದಿರುವಂಥ 5 ಬಗೆಯ ತಿಳಿದು ಜಗನ್ನಾಥ ನಿಮ್ಮ ಸುಗುಣದರಿದು ವ್ಯಾಧಿ ಕಳೆದುಕೊಂಡು ಪ್ರಮಥ ನಿಗಮಗೋಚರ ನಿನ್ನ ಬಗೆಬಗೆ ಪೊಗಳುತ ಜಗದಮಾಯವ ಗೆಲಿದು ಸೊಗಸಿನಿಂ ನಲಿವಂಥ 6 ಉದಧಿಜಿಗಿದ ಹನುಮಂತ ಮಹ ಪದುಮಾಕ್ಷಿಯಳ ಕಂಡು ನಮಿಸಿದ ಬಲವಂತ ಸದಮಲಾಂಗಿಗೆ ತನ್ನ ಹೃದಯಸೀಳಿದ್ಹಟದಿಂ ಪಾದ ತೋರಿಸಿದಂಥ 7
--------------
ರಾಮದಾಸರು
ಶ್ರೀಲೋಲನೆ ಪರಿಪಾಲಿಪುದೆಮ್ಮನು ಕಾಲವಿಳಂಬಿಸದೇ ಪ. ಪೇಳಲೆಮಗೀ ನಾಲಿಗೆ ಸಾಲದು ಅ.ಪ ಅನಿಮಿಷರೂಪದಿಂದಾಗಮವನು ನೀನಜನಿಗೆ ತಂದಿತ್ತೆ ಪೂರ್ವದಿ ಘನ ಕಚ್ಛಪರೂಪದೊಳಾಗಿರಿಯನು ಬೆನ್ನೊಳಗಾಂತೇ ಅನಿಮಿಷರೊಡೆಯನ ಮನವನು ತಣಿಸಿದ ಫನಮಹಿಮನೆ ಶ್ರೀ ವನಜಜ ಜನಕನೆ ಶ್ರೀಲೋಲನೆ 1 ದುರುಳನ ಕರದಲಿ ಧರಣಿಯು ಸಿಲುಕುತ ಕರೆಕರೆಗೊಳ್ಳುತಿರೆ ವರಸೂಕರನಾಗುತ ದುರುಳನ ಛೇದಿಸಿ ಧರಣಿಯ ಕೈಪಿಡಿದೆ ಮತ್ತೆ ತರಳನ ಪೊರೆಯಲು ನರಕೇಸರಿ ರೂಪದಿ ಹಿರಣ್ಯಕನುದರದ ಕರುಳನು ಕಿತ್ತೆಸೆದೆÉೀ ಶ್ರೀಲೋಲನೆ 2 ಕಪಟತನದಲಿ ವಟುವಂದದಿ ಬಂದು ನೆಲವದಾನವ ಬೇಡಿ ಕಪಟವನರಿಯದೆ ದಾನವ ಕೊಟ್ಟನ ಪಾತಾಳಕೆ ಗುರಿ ಮಾಡಿ ಅಪರಿಮಿತಾನಂದದಿ ಮೆಚ್ಚಿ ಬಲೀಂದ್ರನ ಮನೆಬಾಗಿಲ ಕಾಯುವ ಗೊಲ್ಲ ನೀನೆನಿಸಿದೆ 3 ವರಮುನಿ ಜಮದಗ್ನಿಯ ರೇಣುಕಾಸುತ ಭಾರ್ಗವ ನೀನಾಗಿ ವರಪರಶುದರನೆಂದೆನ್ನಿಸಿ ಭೂಭುಜರನು ತರಿದಟ್ಟಿ ಧರಣೀಸುರರಿಗೆ ಸುರತರುವೆನಿಸಿದ 4 ಹರವಿರಂಚಿಯರ ವರಗಳ ಗರ್ವದೆ ದಶಶಿರದೈತ್ಯನು ಮೆರೆದು ಪರಿಪರಿ ವಿಧದಿಂ ಸುರಭೂಸುರರನು ಕರೆಕರೆಗೊಳಿಸುತಿರೆ ಧರಣಿಪ ದಶರಥ ತನುಭ ವರೆನ್ನಿಸಿ ನಿಶಿಚರ ಕುಲವನೇ ಸವರಿದ ರಾಘವ 5 ಅಷ್ಟಮದಂಗಳ ದಟ್ಟಣೆಯಿಂದತಿ ಅಟ್ಟಹಾಸದಿ ಮೆರೆದಾ ದುಷ್ಟ ಕಂಸನ ಮರ್ಧಿಸಿ ಧರಣಿಯ ಶಿಷ್ಟರ ಪಾಲಿಸಲು ವೃಷ್ಟಿವಂಶದಿ ಬಂದು ಕೃಷ್ಣನೆನಿಸಿ ತನ್ನ ಇಷ್ಟರಾದ ಪಾಂಡುಪುತ್ರರ ಸಲಹಿದ6 ಸಿದ್ದಿ ಸಂಕಲ್ಪದಿ ಬಲಭದ್ರನೆನ್ನಿಸಿ ಭವಬದ್ಧ ಜೀವಿಗಳಂ ಶುದ್ಧ ಮಾರ್ಗದಿ ಸಂಸ್ಕರಿಸಿ ಜಗವನು ಉದ್ಧರಿಸಲ್ಕಂಡು ಬುದ್ಧನೆಂದೊಳಿಸಿ ಮೆರೆದ ಸಂಕರ್ಷಣ ಭದ್ರಮಂಗಳ ಭವ್ಯಸ್ವರೂಪನೆ7 ಕಲಿಮಲದೋಷವ ತೊಳೆಯಲು ಪುನರಪಿ ಕಳೆಯೆ ನೀನೈತರುವೆ ಫಲತೆರದಲಿ ಭಕ್ತರ ಸಲಹಲು ಫಲರೂಪಗಳ ಕೈಕೊಳುವೆ ಹಲುಬುವ ಕಂದನ ಸಲಹೈ ಸಿರಿದೊರೆ 8
--------------
ನಂಜನಗೂಡು ತಿರುಮಲಾಂಬಾ