ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಂಡೆ ನಾಕಂಡೆ ನಾಕಂಡೆ ಕಾಳಿಂಗನ ಮಂಡೆಯಮೇಲೆ ಕುಣಿವ ಕೃಷ್ಣನ್ನ ಪ ತಕ ತಕ ಧಿಮಿ ಧಿಮ್ಮಿ ಧಿಮ್ಮಿ ಧಿ- ಮ್ಮಿಕೆಂದು ಕುಣಿವ ಕೃಷ್ಣನ್ನ ನಾಕಂಡೆ ಅ.ಪ ಹೆಡೆಯ ಮೇಲೆ ತಾ ಎಡಗಾಲಿರಿಸಿ ಎಡಗೈಯಲಿ ಬಾಲ ಹಿಡಿದವನ ಬಿಡದೆ ಅಭಯಹಸ್ತವ ತೋರೊ ಒಡೆಯ ಕೃಷ್ಣಮೂರುತಿಯ ನಾಕಂಡೆ ಸ್ವಪ್ನದಲಿ ನಾಕಂಡೆ ಕಂಡೇನೊ ಸಂಪನ್ನಮೂರ್ತಿಯ ಕಂಡೇನೊ 1 ಗೋವಲರ ಮನೆಯ ಪಾಲುಂಡವನ ಗೋವುಗಳ ಕಾಯ್ದ ಗೋಪಾಲನ್ನ ಗೋವಿಂದನೆಂಬ ದೇವರದೇವನ್ನ ಓವಂತೆ ನಾನು ಕಂಡೇನು ಕಂಡೇನು ಕುಣಿಯುತ ಬಂದ ಕೃಷ್ಣನ್ನ ತಣಿಯುವ ಹಾಗೆ ನೋಡಿದೆನು 2 ಗೋವಿಂದನಾಗಿ ತಲೆಕಾಯ್ವವನ ಗೋವರ್ಧನವನೆ ಕೊಡೆಯಾದವನ ಗೋವನಿತೆಯರ ಮಾಮಾಯನನ್ನ ಅವ್ವಯ್ಯ ಚೆನ್ನಾಗಿ ಕಣ್ತುಂಬ ಕಂಡೆ ಆ ಮುದ್ದು ಬಾಲಕೃಷ್ಣನ್ನ ಕಂಡೆ ಸಾಮುದ್ರಿಕಾ ಸಿರಿಯನ್ನಕಂಡೆ 3 ಅಸುರ ಕಂಸನ ಅಸುವನ್ನು ನೀಗಿದನ ಬೆಸೆದ ಕುಬ್ಜೆಯ ಡೊಂಕ ತಿದ್ದಿದವನ ಅಸುತೆಗೆಯ ಬಂದವಳ ಅಸುವನೆ ಹೀರಿದನ ಮಿಸುಕದಂತೆ ಕಂಡೆ ನಾಕಂಡೆ ನಾಕಂಡೆ ಜಾಜಿಪುರೀಶನ ಕಂಡು ಧನ್ಯನಾದೆ ಸಾಜದಿ ದಾಸಾನುದಾಸನಾದೆ 4 ಪಾಪಿನಾ ಕರುಣೆಯ ತೋರಿ ಸಲಹೊ ಭಾಪುರೆ ಗಟ್ಟಿಸುವ ಪುಟ್ಟಪಾದವಿಟ್ಟು ಮೋಪಾಗಿ ಮೆರೆವ ದುಷ್ಟರ ಮೆಟ್ಟೊ ಪುಂಡರ ಪುಂಡರಿಗೆ ಪುಂಡನಾದವನೆ ಪುಂಡರೀಕಾಕ್ಷ ಚನ್ನಕೇಶವನೆ 5
--------------
ನಾರಾಯಣಶರ್ಮರು
ನಿಲುನಿಲು ಘನಲೀಲಾ ನಲಿನಲಿ ಗೋಪಾಲ ಪ ಕಿಲಕಿಲನಗು ಬಾಲಾ ಒಲಿಒಲಿ ಶ್ರೀಲೋಲಾ ಅ.ಪ ಅಡಿಯಿಡು ಸಡಗರದಿ ನುಡಿನುಡಿ ಕಡುಮುದದಿ ಪಿಡಿಕೊಳಲನು ಕರದಿ ನುಡಿಸಿ ಮುದ್ದಾಡುವೆ ನಾನು 1 ತೊದಲುನುಡಿಗೆ ನಲಿವೆನು ಬಾ ಬಾ ಚದುರತನವ ನೀ ತೋರುತೆ ಬಾ ಬಾ ಮುದದಿ ಕುಣಿಯುತೆ ಮಣಿಯುತೆ ಬಾ ಬಾ ಇದೆಗೋ ಎತ್ತಿಕೊಂಡೊಯ್ವೆನು 2 ಜೋಗುಳಗಳ ಹಾಡಿ ರಾಗದಿ ಕೊಂಡಾಡಿ ಬಾಗಿ ಬಿಗಿದು ಕುಣಿದಾಡಿ ನಾಗಸಂಪಿಗೆ ಸೂಡಿ3 ಸಂತಸದಿಂದೋಡು ಅಂತರಿಕ್ಷವ ನೋಡು ಕಂತುಕವೆಸೆದಾಡು ಶಾಂತಿಯ ಮನಕೆ ಕೊಡು 4 ಚಂದಿರನಂದದ ಕಂದಾ ನೊಂದಿಹ ಮನಕಾನಂದಾ ಸುಂದರ ಮುಖಾರವಿಂದಾ ಅಂದದ ನಗು ಮಿಗಿಲಾನಂದಾ5 ಗೋಲಿಯನಾಡುವೆ ಬಾ ಗಾಲಿಯನೋಡಿಸು ಬಾ ಬಾಲಭಾಷೆಯ ಪೇಳುವ ಬಾ ಲೀಲೆಯನೀಕ್ಷಿಸಿ ದಣಿವೆ 6 ಕುಣಿ ಕುಣಿ ಅರಗಿಣಿಯೆ | ಅಣಕಿಸು ಮನದಣಿಯೆ ಮಣಿ ಕಣ್ಮಣಿಯೆ | ತಣಿಯುವ ಮನಕೆಣೆಯೆ7 ಬಣ್ಣದ ಹೂಮುಡಿವೆ ಹಣ್ಣನು ಮೆಲಗುಡುವೆ 8 ನೊರೆಹಾಲ್ಕುಡಿ ನೀಲಾಂಗ ಮರೆಹೊಕ್ಕರ ಪೊರೆ ರಂಗಾ ಕರುಣಿಸೊ ಶಿರಬಾಗುವೆನಾಂ ಮಾಂಗಿರಿಯ ರಂಗಾ 9
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಬೇಗ ತಿಳಿಯೈ ಶುದ್ಧ ಮನದಿ ಶ್ರೀಗುರು ಪೇಳ್ದ ಬೋಧಾ ನೀಗುವಿ ಭವದಾ ಭಾಧಾ ಸ್ವರೂಪಾ ನಂದ ಪಡೆಯುವಿ ನೀ ಸ್ವರೂಪಾ ಪ ಪರಮಸತ್ಯದ ತತ್ವವರಿಯಲು ಮರಣಭಯವಾ ನೀಗುವೀ ಕರುಣಿ ಗುರುವಿನ ಚರಣಕಮಲದಿ ಬೆರೆತು ಸುಖಿಸುವಿ ನೀ ಸ್ವರೂಪಾ 1 ಅರಿಯೊನೀ ಪರಮಾತ್ಮನೆಂಬುದ ಪರಮ ಶಾಂತಿಯ ದೊರಕಿಸೀ ಗುರುಶಂಕರನಾ ಬೋಧದಾ ಸವಿಯುಂಡು ತಣಿಯುವಿ ನೀ 2
--------------
ಶಂಕರಭಟ್ಟ ಅಗ್ನಿಹೋತ್ರಿ