ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಅ) ಶ್ರೀಹರಿ ಸ್ತುತಿಗಳು ಆನಂದ ಆನಂದ ಆನಂದ ಪ ಆನಂದ ನಿನ್ನ ನೋಡಿದವರಿಗೆ ಅ.ಪ ಆ ಮುಖ ಆ ಕಂಠವಾನಂದ ಆ ಮಹಾಭುಜಕೀರ್ತಿ ಆನಂದ ಸಾಮಜ ಶಂಖಚಕ್ರಗಳಾನಂದ ಹೊಮ್ಮುವ ಗದೆ ಹಸ್ತ ಜಗದಾನಂದ 1 ಸುರಾಸುರರು ದೇವಾನುದೇವರು ತಂ- ಬುರ ನಾರದ ಮೊದಲಾದವರು ವರುಣಿಸಲಾರರು ನಿನ್ನಳವನ್ನು ಅರಿಯಲು ಪೊಗಳಲು ಆನಂದವನ್ನು 2 ಸಂಖ್ಯೆಗೆ ಎಟುಕದ ಆನಂದವಯ್ಯ ಅಂಕೆಗೆ ನಿಲುಕದ ಆನಂದವಯ್ಯ ಅಂಕುಡೊಂಕಿಲ್ಲದ ಆನಂದವಯ್ಯ ಬಿಂಕವ ಬಿಟ್ಟು ಪಾಡಿರೋ ಅಯ್ಯ 3 ಕಮಲವದನದ ಚೆಲುವಾನಂದ ಕಮಲಲೋಚನದ ಸುಂದರ ಅಂದ ಕಮಲೋದ್ಭವನಿಹ ವಕ್ಷವಾನಂದ ಕಮಲಯುಗಳ ಶ್ರೀಪಾದವಾನಂದ 4 ಎಣೆಯಿಲ್ಲಾನಂದಕೆ ಎಣೆಯಿಲ್ಲವಯ್ಯ ಕಣಕಣವು ನೋಡಲು ತಣಿಯದವಯ್ಯ ಅಣಿಗೊಂಡ ಜಾಜಿಪುರೀಶನವ್ವಯ್ಯ ವರ್ಣಿಸಲಾನು ಪಾಮರನಯ್ಯ 5
--------------
ನಾರಾಯಣಶರ್ಮರು
ಯುವ ಹೊಸಪರಿ ರೂಪದಿ ಪ. ಶಂಖಚಕ್ರ ನಾಮಾಂಕಿತಮಾಗಿಹ ಸಂಕರ್ಷಣ ರೂಪದಿ ಮೆರೆಯುವ 1 ರವಿಶಶಿ ಬಿಂಬಗಳ್ ಎಡಬಲದೋಳ್ ನವವಿಧದಿಂದಲಿ ಮೆರೆಯುವ 2 ನಾಡಿನೊಳೀಪರಿ ಗೂಢರೂಪದಿ ನಾಡಿನ ಭಕ್ತರು ಬೇಡಿದುದೀಯುವ 3 ಎಣಿಸಿ ಗುಣಿಸಲ್ ತಣಿಯದ ಮಹಿಮನ ಮಣಿಸುವೆನು ಶೇಷಗಿರೀವರನಿವನ 4
--------------
ನಂಜನಗೂಡು ತಿರುಮಲಾಂಬಾ
ಲಾವಣಿ ಖೋಡಿಮನಸು ಇದು ಓಡಿ ಹೋಗುತದಬೇಡೆಂದರು ಕೇಳದು ಹರಿಯೆಜೋಡಿಸಿ ಕೈಗಳ ಬೇಡಿಕೊಂಬೆ ದಯಮಾಡಿಹಿಡಿದು ಕೊಡು ನರಹರಿಯೆ ಪ ಗಾಡಿಕಾರ ನಿನ್ನ ಮೋಡಿಯ ಮೂರ್ತಿಯಕೂಡಿಸಿ ಪೂಜಿಸಲಘ ಹರಿಯೆದೂಡುತ ಹೃದಯದ ಗೂಡಿನೊಳಗೆ ಸ್ಥಿರ ಮಾಡಲು ಹದವನು ನಾನರಿಯೆನೋಡಿಂದ್ರಿಯಗಳ ತೀಡಬಲ್ಲೆ ಮನತೀಡುವ ಯತ್ನವು ಬರೆಬರೆಯೆಬೇಡಬೇಡವೆಂದಾಡುವೆನೆ ನಿನ್ನನೋಡುವುದೆಂತೈ ಜಗದೊರೆಯೆಕೋಡಗನಂತಿದು ಕಿಡಿಗೇಡಿ ಜಿಗಿದಾಡಿ ಪೋಗುವುದು ತ್ವರೆಮಾಡಿಕೂಡಿಸದದು ಬಹುಕಾಡಿ ದಿಟಿಸ್ಯಾಡಿ ನೋಡಲದು ಅಡನಾಡಿಕಾಡಿಕಾಡಿ ಬಲು ಪೀಡಿಸುತಿರುವದುಕಾಡುವುದೇನಿದು ಈ ಪರಿಯಾಜೋಡಿಸಿ ಕೈಗಳ 1 ತುಣುಕು ತುಣುಕು ಮನಸು ಇದು ಕ್ಷಣದೊಳು ಹಿಡಿವುದುತಿಣಿಕಿ ತಿಣಿಕಿ ಗಡ ಇದನ್ಹಿಡಿಯೆ ಹೆಣಗಲ್ಯಾತಕೆಂದು ಗೊಣಗುತಿಹರುಜನ ಗುಣ ಗೊತ್ತಿತ್ತಿಲ್ಲಿದೆ ಗುಣ ಖಣಿಯೆಗುಣರಹಿತನೆ ನಿನ್ನ ಗುಣ ನಾಮಂಗಳನೆಣಿಸುತೆ ನಾಲಗೆ ತಾದಣಿಯೆ ಟೊಣೆದು ನಿಮ್ಮನು ಕ್ಷಣಕ್ಷಣಕೊಂದುಕಣಕೆ ಹಾರುವುದು ಸುರಧರಣಿಯೆಇಣಚಿಹಾಂಗೆ ಚಪಲವೋಧಣಿಯೆಅಣಕಿಸಿದ್ಹಾಂಗ ಕುಣಿಕುಣಿಯೆಬಣಗು ಜನರು ನಮಗದು ಹೊಣಿಯೆಒಣ ಮಾತಿದು ಕೇಳ್ ನಿರ್ಗುಣಿಯೆಮಣಿಯದು ದಣಿಯದು ಹಣಿಯದು ತಣಿಯದುಟೊಣಿಯಲು ನಿನ್ನದು ಅದರಣಿಯೆ 2 ಸ್ಪಷ್ಟ ಹೇಳುವೆನು ಚೇಷ್ಟೆಗಳದರದುಯ ಥೇಷ್ಟವಾಗಿ ಕಣಾ ಕಣಾಶಿಷ್ಯರನೆಲ್ಲಾ ಭ್ರಷ್ಟ ಮಾಡುವುದು ದೃಷ್ಟಿ ಇಂದೊಂದೇ ಕಾರಣಎಷ್ಟು ಮಾತ್ರಕಿವರಿಷ್ಟ ನಡೆಸದಿಂದಿಷ್ಟೇ ಇದರದು ಧೋರಣಾಕಷ್ಟದಿ ಹಿಡಿದಿಟ್ಟ ಅಷ್ಟು ಇಂದಿಯಕಿದೆದುಷ್ಟರುಪದೇಶದ ಪ್ರೇರಣಾನಷ್ಟಮಾಡೋ ಈ ಚೇಷ್ಟೆಗುಣ ಸುಪುಷ್ಟ ಮತಿಯ ಕೊಡೊ ಪೂರಣಮುಷ್ಠಿಯೊಳಗಿಸೊ ತನುಹರಣಸೃಷ್ಟಿಸ್ಥಿತಿಲಯ ಕಾರಣಸೃಷ್ಟಿಯೊಳಗೆ ಉತ್ಕøಷ್ಟ ಗದುಗಿನಶ್ರೇಷ್ಠ ವೀರನಾರಾಯಣ 3
--------------
ವೀರನಾರಾಯಣ
ಕಂಡೆನಾ ಕನಸಿನಲಿ ಗೋವಿಂದನ ಪಕಂಡೆನಾ ಕನಸಿನಲಿ ಕನಕರತ್ನದ ಮಣಿಯ |ನಂದನ ಕಂದ ಮುಕುಂದನ ಚರಣವ ಅ.ಪಅಂದುಗೆಕಿರುಗೆಜ್ಜೆ ಘಲಿರೆಂಬ ನಾದದಿಬಂದು ಕಾಳಿಂಗನ ಹೆಡೆಯನೇರಿ ||ಧಿಂಧಿಮಿ ಧಿಮಿಕೆಂದು ತಾಳಗಳಿಂದಾನಂದದಿ ಕುಣಿವ ಮುಕುಂದನ ಚರಣವ 1ಉಟ್ಟ ಪೀತಾಂಬರ ಉಡಿಯ ಕಾಂಚಿಯದಾಮತೊಟ್ಟ ಮುತ್ತಿನ ಹಾರ ಕೌಸ್ತುಭವು ||ಕಟ್ಟಿದವೈಜಯಂತಿತುಲಸಿಯ ವನಮಾಲೆಇಟ್ಟ ದ್ವಾದಶನಾಮ ನಿಗಮಗೋಚರನ 2ಕಿರುಬೆರಳಿನ ಮುದ್ರೆಯುಂಗುರ ಮುಂಗಡೆಕರದಲಿ ಕಂಕಣ ನಳಿತೋಳುಗಳ ||ವರಚತುರ್ಭುಜ ಶಂಖಚಕ್ರದಿ ಮೆರೆವನನಿರುತದಿ ಒಪ್ಪುವ ಕರುಣಾ ಮೂರುತಿಯ 3ಬಣ್ಣದ ತುಟಿ ಭಾವರಚನೆಯ ಸುಲಿಪಲ್ಲಸಣ್ಣ ನಗೆಯ ನುಡಿ ಸವಿಮಾತಿನ ||ಪುಣ್ಯ ಚರಿತ್ರನ ಪೊಳೆವ ಕಿರೀಟನಕಣ್ಣು ಮನ ತಣಿಯದಕಂಸಾರಿಕೃಷ್ಣನ4ಮಂಗಳ ವರತುಂಗಭದ್ರದಿ ಮೆರೆವನಅಂಗಜಪಿತಶ್ರೀ ಲಕ್ಷ್ಮೀಪತಿಯ ||ಶೃಂಗಾರ ಮೂರುತಿಪುರಂದರವಿಠಲನಕಂಗಳಿಂದಲಿ ಕಂಡೆ ಹಿಂಗಿತು ಭವಭಯ 5
--------------
ಪುರಂದರದಾಸರು