ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆಳ್ವಾರಾಚಾರ್ಯ ಸ್ತುತಿಗಳು 1. ವಿಶ್ವಕ್ಸೇನ ಪ್ರಾರ್ಥನೆ ಶ್ರೀನಾಥಜ್ಞಾಪ್ರಕಾರ ನಡೆಯುವ ಸೂತ್ರವತೀರಮಣ ಮಾನಿತ ಪ್ರದಾನ ಮಂತ್ರೀ ಪೂಜಿಪೆ ವಿಘ್ನೇಶಾ ನಮಿಪೆ ಪ ಬಿಳಿಯುಡೆ ತುಂಬಿದ ತಿಂಗಳ ಬೆಳಗಾ ತೊಳಗುವ ನಾಲಕು ತೋಳುಗಳ ಒಲಿದಿಹ ನಗೆಮೋಗ ವಿಷ್ಣು ನೆನೆವೆ ಸುಲಭದಿ ಕಾರ್ಯವ ಗೈಸುವನೆ1 ದ್ವಿರದವಕ್ತ್ರತಾ ಮೊದಲಾಗಿರುವ ಪರಿಜನ ನೂರ್ವರಿಂದೊಪ್ಪಿರುವೇ ಪರಿಪರಿ ತಡೆಗಳ ತರಿದೋಡಿಸುತ ಪೊರೆ ವಿಶ್ವಕ್ಸೇನಾಶ್ರಿತ ನಾನು 2 ಬಿಡುಗಣ್ಣರ ಬೆಡಗಿನ ಒಡಲುಳ್ಳ ಕುಡಿನೋಟದ ತಾವರೆಗಣ್ಣ ಪಿಡಿದಹ ಶಂಖ ಚಕ್ರ ಗದಾಯುಧ ಒಡೆಯ ಮುಕುಂದ ದ್ವಾರನಿಲಯನೇ 3 ಬೊಮ್ಮ ಭವಸುರರು ನಯದಿಂ ಮೊದಲಾರಾಧಿಪರು ಶುಭ ಫಲದಾಯಕ
--------------
ಶಾಮಶರ್ಮರು
ಬಾರಕ್ಕಾ ನಾವಿಬ್ಬರಾಡುವಾ ಯೋಗ ಸಾಧನವೆಂಬುದು ಮಾಡುವಾ ತಾಮಸ ತನುಗುಣಗಳ ಬಿಟ್ಟು ಸುಜ್ಞಾನ ಕ್ಷೀರ ಸಾಗರದೊಲಗಾಡುವಾ ಪ ಕಳೆಗೂಡಿ ಒಳನೋಟ ನೋಡುವಾ ಅಲ್ಲಿ ಒಳಸಭೆ ಪ್ರಭೆಯೊಳಗಾಡುವಾ ಥಳಥಳಿಸುವ ಮೆರೆವ ಚಿದಾತ್ಮನ ಬೆಳಕಿನೊಳ್ ಬೆಳಕಾಗಿ ಪರವಶವಾಗುವಾ 1 ಅಂಬಾ ಚಂದನ ಗಂಧಿಯೇ ಶಾರ ದಾಂಬಾ ಸುಪ್ರದವೇಣಿಯೇ ಶಂಭು ಸದ್ಗುರು ಎನ್ನೊಳು ಕಡೆನೋಡೆ ಕಂಬುಕಂಠಿನಿ ಚಲ್ವ ಕಮಲದಳಾಕ್ಷಿ 2 ಎಂಟೆರಡು ಕದಗಳ ಕಟ್ಟುವಾ ಅಲ್ಲಿ ಬಂಟರ ತಡೆಗಳ ಅಟ್ಟುವಾ ಮಂಟಪವೆಂಬುದು ಮಹಾಲಿಂಗನದೆಡೆ ಅಂತರಂಗದ ಕಾಂತೆಗಾಡುವಾ 3 ಮಂದರ ಗಿರಿಯಂತೆ ಅಲ್ಲಿ ಭೋರೈಸುವ ಘಂಟಾ ಧ್ವನಿಯಂತೆ ಸಾರ ಅಮೃತವುಂಡು ಕ್ಷೀರಸಾಗರಮಿಂದು ತೋರುವ ಗುರು ವಿಮಲಾನಂದಾ 4
--------------
ಭಟಕಳ ಅಪ್ಪಯ್ಯ