ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

* ಪಶ್ಚಿಮಕೆ ತಿರುಗಿದಾ ಪರಿಯದೇನೋ ಅಚ್ಯುತಾನಂತ ಗೋವಿಂದ ಗೋಪಾಲ ಪ. ಪರಿ ಪರೀ ಸ್ತುತಿಗೈದು ಪೂರ್ವಾಭಿಮುಖವಾಗಿ ಸ್ಥಾಪಿಸಿರಲೂ ಆವಕಾಲಕು ಪವನ ಮತದಂತೆ ನಟನೆಯವ ಈ ವಿಧದಿ ಅವರ ಮನಮೀರಿ ತಿರುಗಿಹುದೂ 1 ಕ್ಷೀರ ಸಾಗರ ಜಾತೆ ನೋಡುವಳೆಂದು ನಾರಿ ಹಂಬಲನೆನಸಿ ಕಡಲ ಕಡೆಗೇ ಸೇರಬೇಕೆಂದು ವೈಕುಂಠವನು ತಿರುಗಿದ್ಯಾ ಕಾರಣವದೇನೈಯ್ಯ ನಾರದ ಸ್ತುತನೇ 2 ಕ್ಷೀರಸಾಗರ ಮಧ್ಯೆ ತೋರುವೋ ದಿವ್ಯಪುರ ಸೇರಿದಾ ಮುಕ್ತ ಸ್ತುತಿಯನಾಲೈಸಿ ಹಾರಿಹೋಗಲು ಮನಸು ಹಾರಿತೇ ಮಮತೆಯಲಿ ದ್ವಾರಕಿಯ ನೆನಪಾಯಿತೇನೋ ಕೃಷ್ಣಯ್ಯ 3 ದುರ್ಜನಕೆ ದುರ್ಮನಸು ಮರುಕಲಿ ಪುಟ್ಟಲೂ ಸರ್ಜನಕೆ ಸರ್ವೇಶ ನೀನೇನಿಸಲೂ ಮೂರ್ಜಗದಿ ನಿನ್ನ ಮೀರಿದರಿಲ್ಲವೆನಿಸಲೂ ಅಬ್ಜಭವಪದರಲ್ಲಿ ಸಲುಗೆ ಬಹಳಿರಲೂ 4 ಎಲ್ಲ ಕಾರಣವಿರಲಿ ಬಲ್ಲ ಕನಕನು ಬರಲು ಗುಲ್ಲು ಮಾಡುತ ಕುರುಬನೆಂದೊಳಗೆ ಬಿಡದೇ ನಿಲ್ಲಿಸಲು ಕಲ್ಲೊಡೆದು ಪಶ್ಚಿಮಕೆ ತಿರುಗಿ ನೀ ಅಲ್ಲೆ ಕನಕಗೆ ದಿವ್ಯ ದರುಶನ ಕೊಡಲೂ 5 ಸಿರಿಬೊಮ್ಮ ಸುರರ ಲೆಕ್ಕಿಸದೆ ಸದ್ಭಕ್ತರಾ ಗರುವ ರಹಿತರ ಸ್ತುತಿಗೆ ಮೈದೋರುವಾ ಪರಿಯ ತೋರಲು ಇತ್ತ ತಿರುಗಿದ್ಯಾ ಪೇಳಿನ್ನು ಪರಿ ತಿಳಿವರಾರೈ6 ಆನಂದ ಗುಣಪೂರ್ಣ ಆನಂದ ಮುನಿವರದ ಆನಂದ ಕಂದ ಪಶ್ಚಿಮ ತಡಿಯವಾಸಾ ಆನಂದ ಗೋಕುಲದಿ ಆನಂದ ತೋರಿದಾ ಆನಂದ ಗೋಪಾಲಕೃಷ್ಣವಿಠಲೈಯ್ಯಾ 7
--------------
ಅಂಬಾಬಾಯಿ
ಇಂದು ಇಂದುಧರನ ಪಾದದ್ವಂದ್ವಗಳನು ದಿನವು | ಎಂದೆಂದಿಗೆ ಬಿಡದೆ | ಪೊಂದಿದ್ದ ಪಾಪಗಳು | ನಿಂದಿರದಲೆ ಓಡಿ ಬೆಂದು ಪೋದವು ನೋಡಾ ಪ ಸತಿಗೆ ಅಧರ್Àಕಾಯ ಹಿತದಿಂದಲಿ ಇತ್ತು | ಚತುರತನದಲಿಳೆಯೊಳು ಪತಿತ ಮಾನವರಿಗೆ | ಮತಿಬಾಹದೊ ಮಾನಸ ಸತತ ದೃಢವನೀವ | ಪ್ರತಿದಿನದಲಿ ಕಾಯ್ವಾ 1 ವಿಷವ ಧರಿಸಿ ಸುಮನಸರ ನಡುವೆ ಮೆರೆದೆ | ಪಶುವಾಹನ ಪರಮೇಶ ಅಸುರಾರಿಗಲ್ಲದ | ಅಸುರರ ಕೊಲ್ಲುವ ರಂಜಿಸುವಾ | ಶಶಿ ಜಟಾ ಕಮನೀಯ ಮಣಿಮಕುಟಾ 2 ಕಡಲ ತಡಿಯವಾಸ | ವೊಡಿಯ ರಾಮನ ದಾಸ | ಮೃಡರುಂಡ ಮಾಲಾಭೂಷಾ || ಬಿಡದೆ ಸೇತುಬಂದ ವಿಜಯವಿಠ್ಠಲನ | ಅಡಿಗಡಿಗೆ ನೆನೆಸುವ ಶಿವರಾಮಲಿಂಗಾ 3
--------------
ವಿಜಯದಾಸ