ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬಡತನವೆನ್ನನು ಬಾಧಿಪುದೈ ಹರಿ ನುಡಿಯಲೆನಗೆ ನಾಲಗೆ ಬರದೀಪರಿಪ ಅಡಿಯೊಳು ಕೆಡೆದಿಹೆ ತಡಿಗಾಣದೆಯೆ ಕಡಲಣುಗಿಗೊರೆದು ಕಡೆಹಾಯಿಸೊ ದೊರೆ ಅ.ಪ ಮನುಜರು ಯೆನ್ನನು ಮಾನಿಸದಿರುವರು ಮನೆಯೊಳು ಮಕ್ಕಳು ಮಾತನಾಲಿಸರು ಅನುನಯದಿಂ ಸವಿ ವಚನವನುಸುರಲು ವನಿತೆಯುತಾಂ ಕೇಳದೆ ಕೋಪಿಪಳು 1 ಬಂದ ಭಾಗವತರ ಪೂಜೆಯ ಮಾಡಲು ಒಂದಾದರು ಸವಿ ವಸ್ತುವಿಲ್ಲವೈ ಸಂದಣಿ ಸೇರಲು ಮನಸು ಬಾರದು ಕುಂದಹರಿಸು ಮನಕಂಕೆಯ ತಂದು 2 ದಾನವ ಮಾಡಲು ದೀನತೆ ಬಿಡದು ಕಾನನದಿರುತಿಹ ಕುರುಡನಂತಿಹೆನೆ ಏನು ಮಾಡಲೊ ಯೆನ್ನ ಮನದೊಲುಮೆಯ ಬಲ್ಲ ಸಿರಿನಲ್ಲ 3 ಸಾಲದವರು ಗಂಟಲೊಳು ಕೋಲಿಡುವರೊ ಶ್ರೀಲೊಲನೆ ನಾಂ ಮಾಡುವುದೇನು ಲಾಲಿಸಿ ಹೆಜ್ಜಾಜಿಕೇಶವ ಪಾಲಿಸು ಲೀಲೆಯಿಂ ಬಿನ್ನೈಸಿ ಯನ್ನೊಲಿಸು 4
--------------
ಶಾಮಶರ್ಮರು