ಭೋ ದಾತಾ ಬಾರೋಗುರುವರಿಯಾ || ನಂಬಿದೆ ನಾನಿನ್ನ
ಪಾದ ಭೂನಾಥ ದಾಸಾಗ್ರಣಿ ಪ
ದೀನ ಜನರ ಧೇನು ಚಿಂತಾಮಣಿ ಮಾನಿತ ನಿನ್ನ
ಅನುದಿನ ಪಾಲಿಸು ಘನ
ಹರಿನಾಮವ | ಸ್ತಂಭ ನಿವಾಸನೆ ದಯತೋರೋ 1
ಪೋತನೊಳೀಪರಿ ಯಾತಕೆ ನಿರ್ದಯ ತಾತನೆ
ನಿನಗೆ ರೀತಿಯ ನೋಡೈ | ಸುತನಪರಾಧವ
ಪಾತಕ ಬಿಡಿಸೊ ಮತಿ ಬೀರೋ 2
ಕರುಣಿಸು ಶಾಮಸುಂದರ ವಿಠಲ | ವರಿಚರಿ
ತಾಮೃತ ಸವಿಯನು ಎನಗೆ | ಸೂರಿವರೇಣ್ಯನೆ
ಮೂಕÀಗೊಲಿದಂತ | ತ್ವರಿತದಿ ನೋಡೈ ತಡವ್ಯಾತಕೆ 3