ಒಟ್ಟು 3 ಕಡೆಗಳಲ್ಲಿ , 1 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನೀನೆನ್ನೊಳಡಗಿದೆಯೊ ರಂಗಯ್ಯ ನಾನಿನ್ನೊಳಡಗಿಹೆನೆ ಪ ನೀನೆನ್ನೊಳಡಗಿಹುದೇನೂ ಅಚ್ಚರಿಯಿಲ್ಲ ನಾನಿನ್ನೊಳಡಗಿಹುದೆನೆ ಸಂದೇಹವಯ್ಯ ಅ.ಪ ಆತ್ಮಾರಾಮನು ನೀನು ರಂಗ | ನಿಜಾತ್ಮಪ್ರಕೃತಿ ನಾನು [ಆತ್ಮೋದ್ಧಾರಕ ನಿನ್ನಬಿಟ್ಟರಾನಿಲ್ಲವೋ ರಂಗ] 1 ಒಬ್ಬಳೆಂಜಲ ತಿಂದೆ ರಂಗ ನೀನೊಬ್ಬಳಿಗಕ್ಷಯವಿತ್ತೆ ಒಬ್ಬರೊಳು ಜನಿಸಿ ಮತ್ತೊಬ್ಬರೊಳು ಬೆಳೆದೆ ಇನ್ನೊಬ್ಬನಾನೊಬ್ಬ ಇನ್ನೊಬ್ಬರಿಲ್ಲವೋ ರಂಗ 2 ಕೊಡುವೆನೆನ್ನೊಳಗಿಹುದರಂಗಯ್ಯ ಹಿಡಿಯೆನ್ನ ಕರವ ಪಡೆವೆನದನೆ ಅಯ್ಯ ಕೊಡಬೇಡ ಜನುಮವ ತಡವೇಕೆ ಮಾಂಗಿರಿಯಯ್ಯ ನೀನೊಲಿದೆ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ವಂದಿಸುವೆನನವರತ ಇಂದಿರೇಶಾ ಪ ನೊಂದು ಬಳಲಿದೆನಯ್ಯ ಸಲಹೋ ಶ್ರೀಶಾ ಅ.ಪ ಇಂದು ನರಜನುಮದೊಳು ನೊಂದೆನಯ್ಯ ಮುಂದಿನಾ ಜನುಮಗಳ ಸಂದಣಿಗಳೊಳು ನಿನ್ನ ಸುಂದರ ಪಾದಾಂಬುಜವನೆಂದೆಂದು ತೋರೆಂದು1 ನರಜನ್ಮ ಹಿರಿದೆಂದು ಅರಿತವರು ಪೇಳುವರು ನರನಾಗಿ ನಾ ಜನಿಸಿ ಗರುವದಿಂದಾ ಸಿರಿಯಾಸೆಯಿಂದ ಮದ ಪರವೈರ ಲೋಭಗಳ ದುರಿತಗಳನಾರ್ಜಿಸಿದೆ ಪೊರೆಯೊ ದೇವ 2 ಕಡುಪಾಪ ಕೂಪದೊಳಗಡಗಿರ್ಪೆನೈ ಹರಿಯೆ ಅಡಿಗಳಿಗೆ ಎಡೆಯಿಲ್ಲ ನುಡಿವರಿಲ್ಲಾ ಪಿಡಿವುದಕೆ ತೃಣವಿಲ್ಲ ದಡಕೆ ದಾರಿಯು ಇಲ್ಲ ತಡವೇಕೆ ಎನ್ನ ಕೈಪಿಡಿಯೊ ಗೋಪಾಲ 3 ಖಗರಾಜ ಪೊತ್ತಿಹನು ಸುಗತಿದಾಯಕನೆಂದು ಹೊಗುಳುವವು ಶೃತಿ ಶಾಸ್ತ್ರ ನಗಧರನೆ ನಿನ್ನತಾ ನಗಪುತ್ರಿ ನುತಿಸಿಹಳು ನಗಬೇಡವೈ ಪಾದಯುಗಗಳನು ತೋರೆಂದು4 ನಿನ್ನ ನಾಮದ ಭಜನೆ ಎನ್ನ ರಸನೆಯೊಳಿರಲಿ ಮುನ್ನಿಗಿಂತೆಂಟುಮಡಿ ಜನುಮ ಬರಲಿ ಮುನ್ನ ನಾವಾರ್ಜಿಸಿದ ಘನಪಾಪನಶಿಸಲಿ ಚೆನ್ನ ಮಾಂಗಿರಿವಾಸ ನನ್ನ ಹೃದಯದೊಳಿರಲಿ5
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಸನಿಹದಲೆ ದೆಸೆದೆಸೆಗೆ ಪ ಇನಿತುಪಾದಗಳಿಂದ ಅನಿಲನ ಸೋಲಿಸಿ ಅ.ಪ ಕಾಮಕ್ರೋಧಗಳೆಂಬ ನೇತ್ರಗಳಿದಕಿದೆ ವ್ಯಾಮೋಹ ಲೋಚನ ಎಂಬ ಕರ್ಣಂಗಳಿವೆ ದುರ್ಮದವೆಂಬುವ ಪುಚ್ಚವೊಂದಿಹುದಯ್ಯ ಈ ಮದಹಯಕೆ ಮಾತ್ಸರ್ಯ ನಾಸಿಕವಯ್ಯ1 ಮೃಡನು ತಾ ಎಂಬುವ ಕಡಿವಾಣದ ಹಿಡಿ ದೃಢಭಕ್ತಿಯೆಂಬ ಪಾಶ ಕೊರಳೊಳಗಿರಲಿ ಎಡಗೈಯೊಳು ಹರಿಯೆಂಬ ಕೊಳಲನು ಹಿಡಿ ತಡವೇಕೆ ಮನುಜ ಓಡಿ ಹಯವ ತಡಿ 2 ಆಡಲು ನಿಲಬೇಡ ನೋಡಿ ನಲಿಯಬೇಡ ಓಡಾಡಿ ತುರಗವ ಹಿಡಿ ಹಿಡಿ ಮನುಜ ಓಡಿ ಹಯವ ಪಿಡಿದು ಬಂಧಿಸದಿದ್ದರೆ ಕಾಡಿಗೈದಿ ದೊಡ್ಡ ಮಡುವ ಸೇರುವುದು 3 ನರಹರಿಯೆಂಬ ಕುಣಿಕೆಯ ಗೈದು ತ್ವರಿತದಿ ತುರಗದ ಕೊರಳಿಗೆ ಬಿಗಿದು ಕರದೊಳಗಿರುವ ಕಡಿವಾಣ ಒಂದಿಡಿ ನೆರೆ ಭಕ್ತಿಪಾಶದಿ ತುರಗವ ಸೆರೆಗೈ 4 ನಾರಾಯಣಾ ಎಂಬ ನೀರ ಕುಡಿಸುತಲಿ ಶ್ರೀರಮಣ ಎಂಬ ಹುರಳಿಯ ನಿಡುತೆ ಮಾರ[ಮಣ] ಎಂಬ ತೃಣವನೆಣಿಸಿ ದಿವ್ಯಾ ಕಾರದಿ ಮಾಂಗಿರಿರಂಗಗರ್ಪಿಸಿರೋ 5
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್