ಬಾ ಗೋಪತಿ ಗೋಪನೆ ಮನ್ಮನಕೆ | ತಡಮಾಡುವುದ್ಯಾಕೆಭೋಗಿ ಮದಾಪಹ | ಆಗಮ ವೇದ್ಯನೆ | ನಮಿಸುವೆ ತವಪದಕೆ ಪ
ಯೋಗಿ ವರೇಣ್ಯಾ ಅ.ಪ.
ನೀರಜ ಸಂಭವಮುರಾರಿಗಳಿಂದಲಿ ಆರಾಧಿಪ ಪದ 1
ನವನೀತ ಚೋರ | ಪಾವನ ಚರಿತ | ಸ್ವರತ ಅನವರತಭುವನೈಕ ವಂದ್ಯ ವಿಶೋಕದಾತ | ಸಮಅಧಿಕ ರಹಿತಅವನಿಜೆ ವಲ್ಲಭ | ತ್ರಿವಿಧರಿ ಗೋಸುಗವಿವಿಧ ರೂಪಂಗಳ | ತಾಳುವ ಖ್ಯಾತ 2
ಹಂಸ ಡಿಬಿಕ ಶಕಟಾರಿ ಮುರವೈರಿ | ಮುಷ್ಠಿಕಮಲ್ಲಾರಿಕಂಸಾರಿ ವತ್ಸಾರಿ ಪರಮ ಉದಾರಿ | ಬಾಬಾರೆಲೊ ಶೌರಿಶಿಂಶುಮಾರ ಸುರ ಸಂಶಯ ಹರಿಸಲು |ಸ್ವಾಂಶದಿ ಜನಿಸುತ ಭಕ್ತರುದ್ಧರಿಸಲು 3
ಕರುಣ ವನದಿ ಶರಣಾಗತ ಪರಿಪಾಲ || ಶಿರಹರ ಶಿಶುಪಾಲತರಳ ದೃವಾದಿಯ ಪೊರೆವುದು ತವಶೀಲ | ಪಾಲಿಸು ಶ್ರೀಲೋಲಕರಣ ನಿಯಾಮಕ ವರ್ಣ ವೇದ್ಯತವಚರಣ ಬಯಸುವೆ ಹೃದಯ ಸದನಕೇ 4
ತೋಂಡ ಬೋವ ಮಾಯಾ ಪಟಲ 5