ನಿಜದ ನೆನಪು ನಿನಗಿರಲಿ ಮತ್ತೆ
ಅಜನ ಲಿಖಿತದಿ ಬಂದುದೆಲ್ಲಾ ಬರಲಿ ಪ
ಹುಟ್ಟಿಬಹಾಗ ತಂದಿಲ್ಲಾ ಶಿವ
ಕೊಟ್ಟ ಸರ್ವಸ್ವ ಸಂಗಡ ಬಹಾದಲಾ
ಬಟ್ಟೆ ಬೈಲಾಗುವುದೆಲ್ಲಾ ಮನ
ಮುಟ್ಟಿ ಭಜಿಸೊ ಗುರುನಾಥನ ಸೊಲ್ಲಾ ನಿಜದ 1
ಸುಖದ ಸುದ್ದಿಯ ನಂಬಬೇಡಾ ಬಹು
ದುಃಖ ತಂದೊಡ್ಡುವುದಕೆ ತಡಮಾಡಾ ಸುಖ
ದುಃಖ ತನದೆಂದು ನೋಡಾ ನಿತ್ಯ
ಮುಕುತಿ ಮಾರ್ಗದಲಿ ಚಿತ್ತವ ನೀಡೋ ಗಾಡಾ ನಿಜದ 2
ನಿನ್ನೊಳು ಶೋಧಿಸಿನೋಡು ಪ್ರ
ಸನ್ನವಾಗಿಹ ಪ್ರಕಾಶದಲಿ ಲೋಲಾಡು
ಭಿನ್ನಭಾವನೆಯನೀಡಾಡು ವ್ಯು
ತ್ಪನ್ನ ಶ್ರೀ ಗುರುವಿಮಲಾನಂದನ ಪಾಡು ನಿಜದ 3