ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಜಯಮಂಗಳಂನಿತ್ಯಶುಭಮಂಗಳಂಪ.ಗುರುಭಕ್ತಿಯೆಂತೆಂಬ ಗಮಕದೋಲೆಯನಿಟ್ಟುಹರಿಧ್ಯಾನವೆಂಬ ಆಭರಣವಿಟ್ಟು ||ಪರತತ್ತ್ವವೆಂತೆಂಬ ಪಾರಿಜಾತವ ಮುಡಿದುಪರಮಾತ್ಮ ಹರಿಗೆ ಆರತಿಯೆತ್ತಿರೆ 1ಆದಿ ಮೂರತಿಯೆಂಬ ಅಚ್ಚ ಅರಿಸಿಣ ಬಳೆದುವೇದ ಮುಖವೆಂಬ ಕುಂಕುಮವನಿಟ್ಟು ||ಸಾಧು - ಸಜ್ಜನ ಸೇವೆಯೆಂಬ ಸಂಪಿಗೆ ಮುಡಿದುಮೋದದಿಂ ಲಕ್ಷ್ಮೀಗಾರತಿಯೆತ್ತಿರೆ 2ತನುವೆಂಬ ತಟ್ಟಿಯಲಿ ಮನದ ಸೊಡರನು ಇಡಿಸಿಘನಶಾಂತಿಯೆಂಬ ಆಜ್ಯವನುತುಂಬಿ ||ಆನಂದವೆಂತೆಂಬ ಜ್ಯೋತಿಯನು ಹಚ್ಚಿತುಚಿನುಮಯ ಹರಿಗೆ ಆರತಿಯೆತ್ತಿರೆ 3ಕಾಮಾಂಧವಳಿದಂತ ಕಮಲದ ತಟ್ಟೆಯಲಿನೇಮವೆಂತೆಂಬ ಹರಿದ್ರವನು ಕದಡಿ ||ಆ ಮಹಾಸುಜ್ಞಾನವೆಂಬ ಸುಣ್ಣವ ಬೆರಸಿಸೋಮಧರವರದಗಾರತಿಯೆತ್ತಿರೆ 4ನಾರದವಂದ್ಯಗೆನವನೀತ ಚೋರಗೆನಾರಾಯಣಗೆ ಶ್ರೀ ವರಲಕ್ಷ್ಮೀಗೆ ||ಸಾರಿದವರನು ಪೊರೆವ ಪುರಂದರವಿಠಲಗೆನೀರಜಮುಖಿಯರಾರತಿಯೆತ್ತಿರೆ5
--------------
ಪುರಂದರದಾಸರು