ಒಟ್ಟು 11 ಕಡೆಗಳಲ್ಲಿ , 7 ದಾಸರು , 11 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಶ್ರೀ ರಾಘವೇಂದ್ರ ಪ್ರಾರ್ಥನೆ) ರಾಘವೇಂದ್ರ ತೀರ್ಥ ಬೋಧಿಸು ಭಾಗವತಗತಾರ್ಥ ರಾಘವ ಪಾದಾಂಬುಜ ಲಬ್ದಾರ್ಥ ಸರಾಗದಿ ಪಾಲಿಸು ನಿಜಪುರುಷಾರ್ಥ ಪ. ತುಂಗಾ ತಟವಾಸಾ ರಾಘವಶಿಂಗನ ನಿಜದಾಸ ಪಂಗುಬಧಿರ ಮುಖ್ಯಾಂಗ ಹೀನರ- ನಪಾಂಗನೋಟದಿ ಶುಭಾಂಗರ ಮಾಡಿಪ 1 ಪಾದೋದಕ ಸೇವಾರತರಿಗಗಾಧ ಫಳಗಳೀವ ಬೂದಿ ಮುಖದ ದುರ್ವಾದಿಗಳೋಡಿಸಿ ಸಾಧುಜನರಿಗಾಲ್ಹಾದ ಬಡಿಸುತಿಹ 2 ಸುಜನ ಶಿರೋಮಣಿಯೆ ವಿಜಯದನೆನಿಸುವ ದ್ವಿಜಕುಲನಂದನ 3
--------------
ತುಪಾಕಿ ವೆಂಕಟರಮಣಾಚಾರ್ಯ
ಎಂದು ಕಾಂಬೆನು ಪಾಂಡುರಂಗ ಮೂರುತಿಯಾ ಇಂದು ಭಾಗನಿವಾಸ ನರನ ಸಾರಥಿಯ ಪ ಚಾರು ಚರಣಾಂಗುಲಿ ನಖರ ತರುಣೀಂದುಚ್ಛವಿ ತಿರಸ್ಕರಿಸುವ ಪ್ರಖರ ಕಿರುಗೆಜ್ಜೆ ಕಡಗ ನೂಪುರ ಪೆಂಡೆ ಶಫರ ತೆರಜಾನು ಜಂಘೆ ಭಾಸ್ಕರ ರತ್ನ ಮುಕುರ1 ರಂಭಾ ಪೋಲುವ ಊರು ಪೊಂಬಣ್ಣಾಂಬರವ ಕುಂಭೀ ಮಸ್ತಕದೊಲ್ ನಿತಂಬದಿ ಪೊಳೆವ ಕಂಬು ಮೇಖಳಕಂಜ ಗಂಭೀರ ನಾಭೀ ವಿಧಿ ಶಂಭು ಪೂಜಿತನ 2 ಲವಕುಕ್ಷಿತ್ರವಳಿ ಬಾರ್ಗವಿ ವಕ್ಷ ಉರವು ಕೌಸ್ತುಭ ವೈಜಯಂತಿಯ ಸುವಿಶಾಲ ವಕ್ಷದೊಳ್ ವಿವಿಧ ಹಾರಗಳು ನವನೀತ ಚೋರ ಶ್ರೀ ಪವಮಾನಾರ್ಚಿತನ 3 ಪದಕ ಸರಿಗೆಯ ಜಾಂಬೂನದ ಕಂಬುಕಂಠ ರದನೀಕರ ಬಾಹು ಚದುರ ಭುಜಕೀರ್ತಿ ಬದರ ಸಂಕಾಶಾ ಅಂಗದ ರತ್ನ ಕಟಕಾ ಪದಮಾರುಣ ಕರಯುಗ್ಮ ಕಟಿಯಲ್ಲಿಟ್ಟವನಾ4 ವಿಧುಬಿಂಬೋಪಮ ಚಲ್ವವದನ ಕೆಂದುಟಿಯಾ ಬಿದುರಾಭಾದಶನಾಲಿಂಗದನೊಳ್ ಕಿರುನಗೆಯಾ ಕದಪು ಕನ್ನಡಿ ನಾಸಾ ತುದಿ ಚಂಪಕ ತೆನೆಯಾ ಉದಕೇಜಾಯತ ನೇತ್ರಯದುವಂಶೋದ್ಭವನಾ 5 ಕುಂಡಲ ಕರ್ಣ ಸುಲಲಿತ ಭ್ರೂಯುಗಳ ಪೊಳೆವ ಬಾಲ ಶಶಾಂಕ ತಿಲಕಾಂಕಿತ ಫಾಲ ಅಳಿಬಾಲವೆನಿಪ ಕುಂತಳ ರತ್ನ ಚಕಿತ ಕಲಧೌತ ಮಕುಟ ದಿಗ್ವಲಯ ಬೆಳಗುವನ 6 ಮಾನವ ಹರಿಯಾ ವಟುಭಾರ್ಗವ ಕಾಕುಸ್ಥ ಶಠ ಕಂಸದ್ವಿಷನ ನಿಟೆಲಾಂಬಕ ಸಹಾಯ ಖಳಕಟಕಾರಿ ಭೀಮಾ ತಟವಾಸ ಜಗನ್ನಾಥವಿಠಲ ಮೂರುತಿಯ 7
--------------
ಜಗನ್ನಾಥದಾಸರು
ಗುರುವೆ ವರಹಜೆ ತಟವಾಸಾ | ಗುರುವೇ ಪುರಿ ಮಂತ್ರಾಧೀಶಾ ಪ ಆರು ಮೊರೆ ಇಡುವೆನೊ | ವರಪದ ಪದುಮಕೆಕರುಣದಲೆಮನ | ಹರಿಯಲಿ ಇರಿಸೋ ಅ.ಪ. ಬಾಗಿ ಭಜಿಪೆ ಗುರುವೇ | ಎನ್ನಯರೋಗ ಹರಿಸು ಪ್ರಭುವೇ ||ರಾಘವೇಂದ್ರ ದುರಿತೌಘ ವಿದೂರನೆ |ಭೋಗಿ ಶಯನ ಪದ | ರಾಗದಿ ಭಜಿಸುವ 1 ಭೂತ ಪ್ರೇತ ಬಾಧೇ | ಬಿಡಿಸುವಖ್ಯಾತಿ ನಿಮ್ಮದು ತಿಳಿದೇ ||ದೂತರೆನಿಪ ಜನ | ಆತುನಿಮ್ಮ ಪದ |ಪ್ರೀತಿ ಸೇವೆಯಲಿ | ಕಾತುರರಿಹರೋ 2 ಯೋನಿ ಬರಲೇನು ಅಂಜೆನೂ 3 ಪರಿಮಳಾರ್ಯರೆಂದೂ | ನಿಮ್ಮಯಬಿರಿದು ಕೇಳಿ ಬಂದೂ ||ಮೊರೆಯ ನಿಡುವೆ ತವ | ಚರಣಾಂಬುರುಹಕೆ |ಅರಿವ ನೀಯೊ ತವ | ಪರಿಮಳ ಸೊಬಗನು 4 ಪಾದ ಬಿಸಜ ||ವರ ಸುಹೃದ್ಗ ಗುರು | ಗೋವಿಂದ ವಿಠಲನಚರಣ ಸರೋಜವ | ನಿರುತ ಭಜಿಪ ಗುರು 5
--------------
ಗುರುಗೋವಿಂದವಿಠಲರು
ದಾತ ಸನ್ಮುನಿಗಣ - ನಾಥ ಕಾಮಿತ ಕಲ್ಪವೃಕ್ಷಾ - ಕಲ್ಪವೃಕ್ಷಾ ಆಶ್ರಿತಜನದಕ್ಷಾ ಪ ಧಾತ ಮುಖ ಸುರಮುನಿಯ ಸಂತತಿ ಪ್ರೀತಿ ಪೂರ್ವಕದಿಪ್ಪ ಕಾರಣ ಜೋತಿ ವೃಂದಾವನದಿ ತಾ ನಿ - ರ್ಭೀತ ಮಹಿಮೆಯ ತೋರ್ಪಜಗದಿ ಅ.ಪ ಬಿಕ್ಷುನಾಯಕ ಸರ್ವಾಪೇಕ್ಷದಾಯಕನೆಂಬ ಬಿರಿದು ನೆಂಬ ಬಿರಿದು ಪೊತ್ತಿಹ ಪಾಪ ತÀರಿದು ಪಾದ ಪದುಮವ ವಕ್ಷೋಮಂದಿರದೊಳಗೆ ತಾನಪ - ರೋಕ್ಷಕರಿಸೀ ಸರ್ವಜನರಾ - ಪೇಕ್ಷ ಪೂರ್ತಿಸಿ ಮೆರೆವ ಗುರುವರ 1 ಕ - ಮಂಡುಲಧರ ಹಂಸರೂಪಾ ಅಮಿತ ಪ್ರತಾಪ ಕರ ಮಾ - ತ್ರಿಜಗ - ಸುಜನ ಮನ್ಮನೋ - ಪುಂಡರೀಕ ನಿವಾಸ ನಿರ್ಮಲ 2 ಕಿಟಜ ಸರಿದ್ವರ - ತಟವಾಸ ಗುರುಜಗನ್ನಾಥ ಜಗನ್ನಾಥ ವಿಠಲ ಗುಣಗಾಥ ತಟನಿ ಲಹರೀ ಮಧ್ಯ ತನ ಹೃ ತ್ಪುಟ ಸುನಾವಿಯ ಮಾಡಿ ಸಂತತ ಅಟನಗೈಯುತ ಜಗದಿರಾಜಿಪ ಚಟುಲ ವಿಕ್ರಮ ಕರುಣಸಾಗರ 3
--------------
ಗುರುಜಗನ್ನಾಥದಾಸರು
ನಮೋ ನಮೋ ಸುಶೀಲೇಂದ್ರ | ಗುರುವರಿಯ ವೈಷ್ಣವ ಸುಮತವಾರಿಧಿ ಚಂದ್ರ | ಸಕುವಿ ಸಂಸ್ತುತ | ಅಮಿತ ಸದ್ಗುಣ ಸಾಂದ್ರ || ಸುಮತಾಹಿವೀಂದ್ರ ಪ ನಮಿಪ ಜನರಿಗೆ ಅಮರ ಭೂರುಹ ಸಮಸುಖಪ್ರದ ವಿಮಲ ಚರಿತನೆ ಯಮಿವರ್ಯ ಸುವೃತೀಂದ್ರ ಮಾನಸ ಕಮಲರವಿ ಮಹಿ ಸುಮನಸಾಗ್ರಣಿ ಅ.ಪ ಅಸಮ ಮಹಿಮೋದರ | ತವಸುಪ್ರಭಾವವ ಸುಜನ ವಂದಿತ ಸ್ವಶನ ಸುಮತೋದ್ಧಾರ || ದಯ ಪಾರವಾರ || ವಸುಧೆಯೊಳು ಮೊರೆಹೊಕ್ಕ ಜನರಿಗೆ ಕುಶಲಪ್ರದ ನೀನೆಂದು ಬುಧ ಜನ ಉಸುರುವದು ನಾ ಕೇಳಿ ನಿನ್ನ ಪದ ಬಿಸಜ ನಂಬಿದೆ ಪೋಷಿಸನುದಿನ 1 ದೀನಜನ ಸುಖದಾತ | ಸುಕೃತೀಂದ್ರ ಕೋಮಲ ಬಾಣಲೋಕ ವಿಖ್ಯಾತÀ || ದ್ವಿಜಕುಲಕೆ ನಾಥ || ಕ್ಷೋಣಿಯೊಳು ನೀ ಒಲಿದ ಮಾತ್ರದಿ ಮೌನಿವರ್ಯ ಶ್ರೀ ರಾಘವೇಂದ್ರರು ಸಾನುರಾಗದಿ ಸಲಹುವರು ಪವ ಮಾನ ಶಾಸ್ತ್ರ ಪ್ರವೀಣ ಜಾಣ 2 ಪಿಂಗಲೇಂದ್ರ ಪ್ರಕಾಶ | ಸುಪವಿತ್ರ ವರದತ ರಂಗಿಣಿ ತಟವಾಸ | ಸದ್ಧರ್ಮ ಸ್ಥಾಪಕ ಮಂಗಳಾಂಗ ಯತೀಶ | ಪಾಪೌಘನಾಶ || ತುಂಗವಿಕ್ರಮ ಶಾಮಸುಂದರನಂಘ್ರಿ ಕಮಲಕೆ ಭೃಂಗ ಭವಗಜಸಿಂಗ ಕರುಣಾ ಪಾಂಗದೀಕ್ಷಿಸೆ ಇಂಗಿತಜ್ಞರ ಸಂಗಪಾಲಿಸು 3
--------------
ಶಾಮಸುಂದರ ವಿಠಲ
ಮಾನವ ನಿರುತ ಶ್ರೀ ಸುಶೀಲೇಂದ್ರ ತೀರ್ಥಾರ ವರಹಜ ತಟವಾಸ ರಾಯರ ಕರುಣ ಪಾತ್ರರ ಪ ಭಾನುಜ ಸಮಾನ ದಾನಿ ದೀನ ಪಾಲರÀ | ಮಾನಿತ ಸನ್ಮೌನಿ ವರಿಯ ಜ್ಞಾನ ಶೀಲರ 1 ಪ್ರಾಣಪತಿಯ ಮತಾಬ್ಧಿಗೆ ಪಠೀಣರೆನಿಪರ ಕ್ಞೋಣಿ ತಳದಿ ಇವರಿಗೆ ಸರಿಗಾಣೆ ಜಾಣರ 2 ಶಾಮಸುಂದರವಿಠಲನ ನಿಸ್ಸೀಮ ಭಕುತರ ಸ್ವಾಮಿ ಸುವೃತೀಂದ್ರ ಕೋಮಲ ಕರಸಂಜಾತರ 3
--------------
ಶಾಮಸುಂದರ ವಿಠಲ
ರಾಘವೇಂದ್ರ ತೀರ್ಥ ಬೋಧಿಸುಭಾಗವತ ಗತಾರ್ಥರಾಘವ ಪದಾಂಬುಜ ಲಬ್ದಾರ್ಥ ಸರಾಗದಿ ಪಾಲಿಸು ನಿಜ ಪುರುಷಾರ್ಥ ಪ ತುಂಗಾತಟವಾಸ ರಾಘವಸಿಂಗನ ನಿಜದಾಸಪಂಗು ಬಧಿರ ಮುಖ್ಯಾಂಗ ಹೀನರನಪಾಂಗ ನೋಟದಿ ಶುಭಾಂಗರ ಮಾಡಿ 1 ಪಾದೋದಕ ಸೇವಾರತರಿಗಗಾಧ ಫಲಗಳೀವಬೂದಿ ಮುಖದ ದುರ್ವಾದಿಗಳೋಡಿಸಿಸಾಧು ಜನರಿಗಾಲ್ಹಾದ ಬಡಿಸುತಿಹ 2 ಭುಜಗಧರಾಧಿಪನಾ ವೊಲಿಸಿದಸುಜನ ಶಿರೋಮಣಿಯೇನಿಜ ಪದ ಯುಗಳವ ಭಜಿಸುವ ಜನರಿಗೆ(ವಿಜಯದ ನೆನಿಸುವ ದ್ವಿಜಕುಲನಂದನ)ವಿಜಯದ ಗೋಪತಿ ವಿಠಲ ನಂದನ 3
--------------
ಗೋಪತಿವಿಠಲರು
ಸ್ವಾಗತವು ಸ್ವಾಗತವು ಯೋಗಿವರ್ಯಾ ಪ ಪಾದ ಪಂಕಜವಾ ಅ.ಪ. ಯೋಗಿ ಜನ ವಂದ್ಯ ಭವರೋಗಾಹಿ ಖಗನೆನಿಪನಾಗ ಭೂಷಣ ಸಖನ ಯೋಗ ನಿರತಾ |ಆಗು ಹೋಗುಗಳೆರಡು ಸಹಿಸುವಲಿ ನಿಷ್ಠಾತಕಾಗಿನಿಯ ತಟವಾಸ ರಚಿತ ಸುಧೆ ಭರಿತಾ 1 ನಿತ್ಯ ನಿಜಯತಿ ಚರ್ಯಸ್ತುತ್ಯ ಪರಮೌದಾರ್ಯ ಯೋಗ ಧುರ್ಯಾ |ಸತ್ಯಾತ್ಮ ಪರಯುಗ್ಮ ಭಕ್ತಿಯಲಿ ಚಾತುರ್ಯಪ್ರತ್ಯಹರ್ರಾಮ ಪದ ಅರ್ಥ ಕೈಂಕರ್ಯಾ 2 ಭಾವಜನಯ್ಯ ಗುರು ಗೋವಿಂದ ವಿಠಲ ಪದಭಾವದಲಿ ಭಜಿಪಂಥ ಗುರುವರೇಣ್ಯಾ |ಪಾವನವು ನಿಮ್ಮ ಪದ ತೊಳೆದುದಕ ಶಿರಧೃತವುಪಾವಿಸಿತು ನಮ್ಮ ಕುಲ ನಾ ಪರಮ ಧನ್ಯಾ 3
--------------
ಗುರುಗೋವಿಂದವಿಠಲರು
ಸ್ವಾಮಿ ಗುರು ಗೋವಿಂದ ವಿಠಲ ಪೊರೆ ಇವನಾ ಪ ಶ್ರೀಮನೋಹರನಂಘ್ರಿ | ಕಮಲಕಾಂಕ್ಷಿಪನಾ ಅ.ಪ. ಶರಧಿ | ಮೇಶ ಮಧ್ವೇಶಾ 1 ತುಂಗೆ ತೀರದಿ ಧವಳ | ಗಂಗೆ ತಟವಾಸಯತಿಪುಂಗವರ ಕರುಣಾ | ಪಾಂಗ ವೀಕ್ಷಣವಾಮಂಗಳ ಸ್ವಪ್ನದಲಿ | ಕಂಗಳಿಂದಲಿ ಕಂಡುಸಂಗ ಸಾಧುಗಳ ಉ | ತ್ತುಂಗ ಬಯಸುವನೋ 2 ಜಲಜನಾಭನ ಭಜಿಸೆ | ಕುಲವು ಪ್ರಾಧಾನ್ಯಲ್ಲಹಲವಾರು ದೃಷ್ಠಾಂತ | ಕೇಳಿ ಬರುತಿಹುದೋಸುಲಭ ನೀನೆಂತೆಂದು | ಬಲವಿನಿಂ ಪ್ರಾರ್ಥಿಸುವೆತಿಳಿಪುವುದು ಮರುತಮತ | ಹಲವು ತತ್ವಗಳಾ 3 ಪಾದ್ಯ | ಚೀರ್ಣ ಸತ್ಕತಿಯವನುಪೂರ್ಣಗೈಸಿವನ ಪ್ರಾಚೀನ ಕರ್ಮಗಳಾ 4 ನಾಮಾಧಿಕಾರಿ ಇವ | ನಾಮಸ್ಮøತಿ ಸರ್ವದಾನೇಮದಿಂ ಫಲಿಸಿವಗೆ | ಸೋಮಧರನುತನೇಕಾಮಜನಕನೆ ಗುರೂ | ಗೋವಿಂದ ವಿಠಲಯ್ಯಈ ಮಾತು ಸಲಿಸೆಂದು | ಸ್ವಾಮಿ ಪ್ರಾರ್ಥಿಸುವೇ 5
--------------
ಗುರುಗೋವಿಂದವಿಠಲರು
ಭಜ ಚಿತ್ತ ಭವಭಯಮಂದಾರಭಜ ಚಿತ್ತ ಭವಭಯ ದೂರ ಪ.ಹಾಟಕಗಿರಿತಟವಾಸ ಪರೇಶಂಕೋಟಿ ನಿಷ್ಕಾಯಸ ಮಾನಸಕಾಯ1ಸಜಲಜಲದ ನಿಭ ಶಾಮಲರಾಯಪ್ರಜಾಜನ ಗೋಪ್ರತಿಪಾಲ 2ಮಾಪದ್ಮಭವ ಮುಖ್ಯ ಪುತ್ರಕಳತ್ರಂಶ್ರೀ ಪ್ರಸನ್ವೆಂಕಟಪತೇಂದ್ರಾಪತ್ರಂ 3
--------------
ಪ್ರಸನ್ನವೆಂಕಟದಾಸರು
ಶೇಷಾದ್ರಿತಟವಾಸ ಸುರೇಶ ಕಾಯೊ ನಿನ್ನದಾಸಾನುದಾಸ ನಾ ತಾರಿಸೊ ಪ.ಈ ಬೆಂದ ಭವಾಂಧಕಾರಿಂದಹಂದಿಂದೆ ನಾಮಂದಕಂದನು ನೊಂದೆನೊ ತಂದೆ ಹೊಂದಿಸುಗತಿ1ಎನ್ನೊಡೆಯ ಕೈವಿಡಿಯೊ ಅಮೃತ ನುಡಿಯೊ ಮೈದಡಹೊ ಮತ್ತಡಿಗಡಿಗೆಡರಂ ಬಡಿಯೊ ಮೃಡನುತ ಅಡಿಯಲ್ಲಿಡು 2ಶ್ರೀನಲ್ಲ ನೀನಲ್ಲದಾರಲ್ಲಾಶ್ರಯಿಲ್ಲಯ್ಯಬೆಲ್ಲವಿಲ್ಲನ ಗೆಲ್ವ ಪ್ರಸನ್ವೆಂಕಟೊಲ್ಲಭ ಜಯ 3
--------------
ಪ್ರಸನ್ನವೆಂಕಟದಾಸರು