ಭವ ವನಧಿಗೆ ನವಪೋತ | ಪಾಲಿಸು ವಿಖ್ಯಾತ ಪ
ವಿಯದಧಿಪನೆ ಎನ್ನ ಕೈಯ್ಯನು ಪಿಡಿಯೋ | ಜ್ಞಾನ ಭಿಕ್ಷ ಈಯೋ ಅ.ಪ.
ಮಾಯಾಪತಿ ಪದ ಪದ್ಮಯುಗಳ ಭಜಿಪಾ | ಉತ್ತಮ ಪಥತೋರ್ಪಾಶ್ರೇಯಸು ಸಾಧನ ವೆನಿಸಿ ಮೆರೆಯುರ್ತಿರ್ಪಾ | ಹರಿಪರಮನು ಎನಿಪಾ ||ಮಾಯಾಮತ ತಮ ಸೂರ್ಯನೆನಿಸಿ ಮೆರೆವಾ | ಸುಜನಸುರದ್ರುಮವಾನ್ಯಾಯ ಸುಧೆಯನೇ ತಾರಚಿಸಿರುವಾ | ಮುಕುತಿ ಮಾರ್ಗ ತೋರ್ವಾ 1
ಕಾಕು ವೃತ್ರನಿಂದಾವೃತ ಜಗವಿರಲೂ | ಜ್ಞನರಹಿತ ವಿರಲೂಲೋಕ ಮಹಿತ ಮಂತ್ರವು ನಿನಗಿರಲೂ | ಜಪಿಸುತಾಸ್ತ್ರ ಬಿಡಲೂ ||ಆ ಕುಯೋನಿಗತ ಚಿತ್ರಕೇತು ಮೋಕ್ಷ | ಆಯಿತು ಸುರರಾಧ್ಯಕ್ಷಲೋಕಾಮಯವನು ಹರಿಸಿ ಜಗದಿ ಮೆರೆದೇ | ಮಹಾನ್ನು ಎನಿಸೀದೇ2
ಚಾಪ ಜೇತಾಕುಕ್ಷಿಯೊಳಗೆ ಬಲು ಬಲು ವಿಖ್ಯಾತಾ | ಕಾಗಿನಿ ತಟದಿಸ್ಥಿತ ||ಅಕ್ಷರೇಡ್ಯ ಗುರುಗೊವಿಂದ ವಿಠ್ಠಲನಾ ತನ ಹೃದ್ಗನಾಗಿರುವವನ ||ಅಕ್ಷಿಯೊಳಗೆ ಕಂಡು ಮೋಕ್ಷ ಪಧವ ಸೇರ್ದ | ಆನಂದವ ಬೀರ್ದ 3