ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಿತ್ಯದುದಯಾಸ್ತಮಾನದಲಿ ಸ ರ್ವೋತ್ತಮ ಹರಿನಾಮ ಬರೆದೋದಿ ಭಕ್ತಿಯಿಂದಾಲಿಪರ ಭವತಾಪ ಜರೆ ಮೃತ್ಯುನೀಗಿ ನಿತ್ಯಮುಕ್ತಿ ಕೈಸೇರುತಿಹ್ಯವು ಪ ನರಿಹರಿ ಹಯವದನ ಜನಾರ್ದನ ವಾಸುದೇವ ವಾರಿಜಾಕ್ಷ ಮುರಧ್ವಂಸಿ ಮುಪ್ಪುರಾಂತಕ ಮುಕ್ಕುಂದ ಹರಿ ಸರ್ವೇಶ ಉರಗಪರ್ಯಂಕ ನಿರಂಜನ ನಿರ್ಜರೇಶ ಶರಣಜನಮಂದಾರ ಸಿರಿಯರಸ ಪರಮಪ್ರಕಾಶ ಪರತರೇಶ ಪರಮಪುರುಷ ಪರಾತ್ಪರನೆಂದು 1 ಮಾಧವ ದೇವದೇವೇಶ ದನುಜರಸಂಹರ ಶ್ಯಾಮಸುಂದರ ಘನಮೇಘಶ್ಯಾಮ ಸಚ್ಚಿದಾನಂದ ಚಿನುಮಯಾತ್ಮ ತಚ್ಚೈತನ್ಯರೂಪ ವೇಣುಧರ ಗೋಪಾಲ ಗೋವ ರ್ಧನೋದ್ಧಾರ ಗಾನಾಂದಧೋಕ್ಷಜಪಿತ ಧ್ಯಾನಗಮ್ಯ ತ್ರಿಭುವನೇಶ ತ್ರಿವಿಕ್ರಮನೆಂದು 2 ನಿತ್ಯಗುಣಾರ್ಣವ ನಿಜಗುಣ ನಿಷ್ಕಲಂಕ ನಿತ್ಯಾತ್ಮ ನಿರುಪಮ ಪರಂಜ್ಯೋತಿ ನಿತ್ಯನಿರ್ಮಲ ಸತ್ಯಭಾಮಾಕಾಂತ ಚಿದ್ರೂಪ ಚಿತ್ಕಳಂಕ ಕಮಲಾಕ್ಷ ಲಕುಮೀಶ ಶೌರಿ ಸೂತ್ರಧಾರಿ ಭಕ್ತವತ್ಸಲ ಭಯನಿವಾರ ನರಸಿಂಹ ಮುಕ್ತಿದಾಯಕ ಮಧುಸೂದನ ರಮಾರಮಣ ಮೃತ್ಯುಂಜಯ ವಿಶ್ವೇಶ ವಿಶ್ವವ್ಯಾಪಕನೆಂದು 3 ಕಾಲಾರಿ ಚಕ್ರಿ ಚತುರ್ಭುಜ ಭವನಾಶ ನೀಲಾಂಗ ರಂಗ ರಾಘವ ಭುವನೇಶ ನೀಲಲೋಚನ ನಗಧರ ಜಗಮೋಹ ಮೇಲುನಿಲಯ ನಿಗಮಾತೀತ ಪದ್ಮನಾಭ ಕಾಲೀಮರ್ದನ ಕೌಸ್ತುಭಾಂಬರ ವಿಷ್ಣು ಪಾಲಸಾಗರಕನ್ನಿಕಾಪ್ರಿಯನಾಥ ಲೀಲಜಾಲ ಜಾಹ್ನವೀಜನಕ ಕೇಶವ ಶೂಲಪಾಣಿಸಖ ಶಾಂತಾಕಾರನೆಂದು4 ಪರಮಾನಂದ ಗೋವಿಂದ ಗಜರಕ್ಷ ಶರಧಿಮಥನ ಕೂರ್ಮಮತ್ಸ್ಯ ಕರುಣಾಂಗ ವಾಮನ ಧ್ರುವಪಾಲ ದುರಿತಾರಿ ಕೃಷ್ಣ ವೆಂಕಟ ವಿಠಲ ಶರಣಾಗತವರದ ನುತಪಾಲ ವರದಾತ ವೇದಾಂಗ ಸುಖಧಾಮ ವರ ಶ್ರೀರಾಮ ಪರಮ ಪುಣ್ಯನಾಮ ಧರೆಮೂರರೊಳತ್ಯಧಿಕಮೆಂದು 5
--------------
ರಾಮದಾಸರು