ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬೆಳಗಿನ ಝಾವದಿ ಬಾರೊ ಹರಿಯೆ, ನಿನ್ನ ಪ ಚರಣ ತೊಳೆದು ಜಲಪಾನ ಮಾಡುವೆನೊಅ.ಪ. ನೀರೊಳು ನಿನ್ನನು ಕಾಂಬೆ ಗಿರಿ ಭಾರಪೊತ್ತರೆ ನಗುವಳೊ ನಿನ್ನ ರಂಭೆ ಮೋರೆ ತಗ್ಗಿಸಿದರೇನೆಂಬೆ ಅಲ್ಲಿ ನಾರಸಿಂಹನಾಗಿ ಪೂಜೆಯ ಗೊಂಬೆ 1 ಬಲಿಯದಾನವ ಬೇಡಿದ್ದೆಲ್ಲ ನೀ ಛಲದಿ ಕ್ಷತ್ರಿಯರ ಸಂಹಾರ ಮಾಡೆದ್ಯಲ್ಲ ಛಲವಂತ ನಿನಗೆದುರಿಲ್ಲ ನೀ ನೊಲಿದ್ಹನುಮನಿಗೆ ಅಜಪದವನಿತ್ಯೆಲ್ಲ 2 ರುಕ್ಮಿಣೀಶಗೆ ಸಮರಿಲ್ಲ ಕೃಷ್ಣ ಬಿಮ್ಮನೆ ತ್ರಿಪುರ ಸತಿಯರಪ್ಪಿದ್ಯೆಲ್ಲ ಬ್ರಹ್ಮಾದಿಗಳು ಸಮರಲ್ಲ ಬಲು ಹಮ್ಮಿಲಿ ಹಯವೇರಿ ವಿಜಯವಿಠ್ಠಲ 3
--------------
ವಿಜಯದಾಸ
ಬೆಳಗುಂಝಾವದಿ ಬಾರೊ ಹರಿಯೆ ಚರಣ ತೊಳೆದು ಜಲದಿ ತೀರ್ಥಪಾನ ಮಾಡುವೆನೊ ಪ. ನೀರ ಒಳಗೆ ನಿಂತುಕೊಂಡು ಬೆನ್ನ ಭಾರ ಪೊತ್ತು ನಿನ್ನವರ ಕಾದುಕೊಂಬೆ ಮೋರೆ ತಗ್ಗಿಸಿದರೇನೆಂಬೆ ಜಗದಿ ನಾರಸಿಂಹನಾಗಿ ಪೂಜೆಯಗೊಂಬೆ 1 ಬಲಿಯ ದಾನವ ಬೇಡಿದೆಲ್ಲೊ ಕ್ಷತ್ರಿ ಕುಲವ ಸವರಿ ಕೊಡಲಿಯ ಪಿಡಿದೆಲ್ಲೊ ಬಲವಂತ ನಿನಗಿದಿರಿಲ್ಲೊ ನಿನ್ನ ಲಲನೆಯ ತಂದು ರಾಜ್ಯವನ್ನಾಳಿದೆಲ್ಲೊ 2 ಗೋಕುಲದೊಳು ಪುಟ್ಟಿದೆಲ್ಲೊ ಲೋಕ ಪಾ(ಕಾ?) ಕು ಮಾಡಲು ಬುದ್ಧರೂಪನಾದೆಲ್ಲೊ ಯಾಕೆ ಹಯವನೇರಿದೆಲ್ಲೊ ನಮ್ಮ ಸಾಕುವ ಹಯವದನ ನೀನೆ ಬಲ್ಲೆಲ್ಲೊ 3
--------------
ವಾದಿರಾಜ